ಟೀಮ್ ಇಂಡಿಯಾ ಚಿಂತೆ ಹೆಚ್ಚಿಸಿದ ಆ ಸ್ಟಾರ್ ಪ್ಲೇಯರ್ ಫಾರ್ಮ್
ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಲೀಗ್ ಹಂತದಲ್ಲಿ ಆಡಿದ ಮೂರು ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ ನೇರವಾಗಿ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿದೆ. "ಎ" ಗುಂಪಿನಲ್ಲಿ ಮುಂದಿನ ಹಂತಕ್ಕೆ ಅರ್ಹತೆ ಪಡೆದಿದೆ. ಭಾರತ ಲೀಗ್ ಹಂತದ ಕೊನೆಯ ಪಂದ್ಯವನ್ನು ನೆದರ್‌ಲ್ಯಾಂಡ್ ವಿರುದ್ಧ ಆಡಲಿದೆ. ಈ ವೇಳೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ಗೆ ಒಂದು ಚಿಂತೆ ಆರಂಭವಾಗಿದೆ. ಈ ಚಿಂತೆ ಸದ್ಯ ಭಾರತ ತಂಡ ಪದೇ ಪದೇ ಆ ಆಟಗಾರನ ಕಡೆ ನೋಡುವಂತೆ ಮಾಡಿದೆ.
ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಆಡಿದ ಮೊದಲ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ, ಎರಡನೇ ಪಂದ್ಯದಲ್ಲಿ ನಮೀಬಿಯಾ ವಿರುದ್ಧ, ಮೂರನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಜಯ ಸಾಧಿಸಿರುವ ಟೀಮ್ ಇಂಡಿಯಾ ಅಜೇಯ ಓಟವನ್ನು ಮುಂದುವರೆಸಿದೆ. ಆದರೆ ತಂಡದ ಆ ಒಬ್ಬ ಆಟಗಾರನ ಫಾರ್ಮ್ ಕೋಚ್ ಮುಖದ ಮೇಲೆ ಚಿಂತೆಯ ಗೆರೆಗಳು ಮೂಡುವಂತೆ ಮಾಡಿವೆ.

ಟಿ20 ವಿಶ್ವಕಪ್‌ಗೆ ತಂಡವನ್ನು ಪ್ರಕಟಿಸುವಾಗ ಈ ಪ್ಲೇಯರ್‌ಗೆ ಸ್ಥಾನ ಫಿಕ್ಸ್ ಎಂದೇ ಅಂದಾಜಿಸಲಾಗಿತ್ತು. ಅದರಂತೆ ಬಿಸಿಸಿಐ ಆಯ್ಕೆ ಸಮಿತಿ ಸಹ ಈ ಸ್ಟಾರ್ ಪ್ಲೇಯರ್‌ಗೆ ಟಿ20 ವಿಶ್ವಕಪ್ ತಂಡದಲ್ಲಿ ಆಡಲು ಅವಕಾಶವನ್ನು ನೀಡಿದೆ. ಆದರೆ ಈ ಪ್ಲೇಯರ್ ಸಿಕ್ಕ ಅವಕಾಶವನ್ನು ಕೈ ಚೆಲ್ಲಿದ್ದು, ಎಲ್ಲರೂ ಹುಬ್ಬೇರುವಂತೆ ಮಾಡಿದೆ. ಆ ಪ್ಲೇಯರ್ ಬೇರೆ ಯಾರು ಅಲ್ಲ ಅಭಿಷೇಕ್ ಶರ್ಮಾ.
ಆರಂಭಿಕ ಆಟಗಾರನ ಫಾರ್ಮ್ ಚಿಂತೆ
ಟಿ20 ಕ್ರಿಕೆಟ್‌ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸಿರುವ ಅಭಿಷೇಕ್ ಶರ್ಮಾ, ತಾವು ಎದುರಿಸುವ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟವನ್ನು ಆಡುವ ಆಟಗಾರ. ದೊಡ್ಡ ದೊಡ್ಡ ಹೊಡೆತಗಳನ್ನು ಬಾರಿಸುವುದು ಎಂದರೆ ಇವರಿಗೆ ನೀರು ಕುಡಿದಷ್ಟೇ ಸುಲಭದ ಕೆಲಸ. ಇವರು ಭಾರತದ ಪರ ಅದೆಷ್ಟೋ ಪಂದ್ಯಗಳಲ್ಲಿ ಏಕಾಂಗಿಯಾಗಿ ಆಡಿ ಜಯದ ಮಾಲೆ ತೊಡಿಸಿದ್ದಾರೆ. ಇವರ ಭರ್ಜರಿ ಆಟದ ಫಲವಾಗಿ ಇವರಿಗೆ ಟಿ20 ಕ್ರಿಕೆಟ್‌ನ ನಂಬರ್ 1 ಬ್ಯಾಟರ್ ಪಟ್ಟವೂ ಲಭಿಸಿತ್ತು.

ಅಭಿಷೇಕ್ ಶರ್ಮಾ ಟಿ20 ವಿಶ್ವಕಪ್‌ನಲ್ಲಿ ತಮ್ಮ ಘನತೆಗೆ ತಕ್ಕ ಆಟವನ್ನು ಆಡುತ್ತಿಲ್ಲ ಎಂಬ ಪ್ರಶ್ನೆಗಳು ಉದ್ಭವಿಸಿದೆ. ಇವರು ಟಿ20 ವಿಶ್ವಕಪ್‌ನಲ್ಲಿ ಇನ್ನು ರನ್ ಕಲೆ ಹಾಕದೇ ಇರುವುದು ತಂಡದ ಚಿಂತೆಯನ್ನು ದ್ವಿಗುಣ ಮಾಡಿದೆ. ಇವರು ಯುಎಸ್‌ಎ ವಿರುದ್ಧ ಹಾಗೂ ಪಾಕಿಸ್ತಾನ ವಿರುದ್ಧ ಸೊನ್ನೆ ಸುತ್ತಿದ್ದು ಕೋಚ್ ಚಿಂತೆಯನ್ನು ಹೆಚ್ಚಿಸಿದೆ. ಟಿ20 ವಿಶ್ವಕಪ್‌ನಲ್ಲಿ ಅಭಿಷೇಕ್ ಶರ್ಮಾ ಮೊದಲ ರನ್ ಹುಡುಕಾಟದಲ್ಲಿದ್ದಾರೆ. ಇವರು ನೆದರ್‌ಲ್ಯಾಂಡ್ ವಿರುದ್ಧ ಖಾತೆ ತೆರೆಯುತ್ತಾರಾ? ಎಂಬ ಪ್ರಶ್ನೆ ಉದ್ಭವಿಸಿದೆ. ಇವರು ಮುಂದಿನ ಪಂದ್ಯಗಳಲ್ಲಿ ಕೊಂಚ ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಮಿಂಚುವ ಅನಿವಾರ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications