Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಭಿಷೇಕ್‌ ಅರ್ಧಶತಕ, ಆಸೀಸ್‌ಗೆ 126 ರನ್‌ ಗುರಿ ನೀಡಿದ ಭಾರತ

ಭಾರತದ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲವಾಗಿದ್ದು, ಮೆಲ್ಬೋರ್ನ್‌ ಅಂಗಳದಲ್ಲಿ ಎರಡನೇ ಟಿ20 ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ, ಆಸ್ಟ್ರೇಲಿಯಾ ವಿರುದ್ಧ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿದೆ. ಭರವಸೆಯ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು ಬಾರಿಸಿದ ಅರ್ಧಶತಕ ಬಾರಿಸಿ ತಂಡಕ್ಕೆ ಆಧಾರವಾದರು.

ಭಾರತದ ಸ್ಟಾರ್ ಆಟಗಾರರು ಆಸೀಸ್ ಬೌಲರ್‌ಗಳ ಪರ್ಫೆಕ್ಟ್‌ ಲೈನ್‌ ಹಾಗೂ ಲೆಂಥ್‌ಗೆ ಉತ್ತರಿಸುವಲ್ಲಿ ವಿಫಲರಾದರು. ಶುಭಮನ್‌ ಗಿಲ್‌ 10 ಎಸೆತಗಳನ್ನು ಎದುರಿಸಿ ಕೇವಲ 5 ರನ್‌ ಬಾರಿಸಿದರು. ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ಸಂಜು ಸ್ಯಾಮ್ಸನ್‌ ಸಿಕ್ಕ ಅವಕಾಶವನ್ನು ಬಳಸಿಕೊಂಡು ಬಿಗ್‌ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಇವರು 2 ರನ್‌ ಬಾರಿಸಿದ್ದಾಗ ನಾಥನ್‌ ಎಲ್ಲೆಸ್‌ ಅವರ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು.

Abhishek Sharma s Fifty Guides India to 126-Run Target Against Australia in 2nd T20I

ಕ್ಯಾನ್‌ಬೆರಾದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ್ದ ಸೂರ್ಯಕುಮಾರ್ ಯಾದವ್ ಮೆಲ್ಬೋರ್ನ್‌ ಅಂಗಳದಲ್ಲಿ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಇವರು 1 ರನ್‌ಗೆ ಆಟ ಮುಗಿಸಿದರು. ತಿಲಕ್‌ ವರ್ಮಾ (0), ಅಕ್ಷರ್ ಪಟೇಲ್ (7) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಭಾರತದ ಮೇಲ್ಪಂಕ್ತೀಯ ಆಟಗಾರರು ಒಂದೇ ಒಂದು ಬೌಂಡರಿ ಬಾರಿಸಲಿಲ್ಲ.

6ನೇ ವಿಕೆಟ್‌ಗೆ ಅಭಿಷೇಕ್‌ ಶರ್ಮಾ ಹಾಗೂ ಹರ್ಷಿತ್ ರಾಣಾ ಜೋಡಿ ತಂಡಕ್ಕೆ ಕೊಂಚ ಆಧಾರವಾಯಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಆಸೀಸ್‌ ಬೌಲರ್‌ಗಳು ಆರಂಭದಲ್ಲಿ ವಿಫಲರಾದರು. ಈ ಜೋಡಿ 47 ಎಸೆತಗಳಲ್ಲಿ 56 ರನ್‌ ಕಲೆ ಹಾಕಿತು. ಹರ್ಷಿತ್ ರಾಣಾ 33 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 35 ರನ್‌ ಬಾರಿಸಿ ಔಟ್ ಆದರು. ಉಳಿದ ಬ್ಯಾಟರ್‌ಗಳು ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು.

ಅಭಿಷೇಕ್‌ ಅರ್ಧಶತಕ

ಭಾರತದ ಸ್ಟಾರ್ ಆಟಗಾರ ಅಭಿಷೇಕ್‌ ಶರ್ಮಾ 37 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 68 ರನ್‌ ಬಾರಿಸಿ ಔಟ್ ಆದರು. ಅಂತಿಮವಾಗಿ ಭಾರತ 18.4 ಓವರ್‌ಗಳಲ್ಲಿ 125 ರನ್‌ ಸೇರಿಸಿತು.

ಆಸ್ಟ್ರೇಲಿಯಾದ ಪರ ಜೋಶ್‌ ಹ್ಯಾಜಲ್‌ವುಡ್‌ 13 ರನ್‌ಗೆ 3, ಜೇವಿಯರ್ ಬಾರ್ಟ್ಲೆಟ್ ಹಾಗೂ ನಾಥನ್ ಎಲ್ಲಿಸ್‌ ತಲಾ 2 ವಿಕೆಟ್ ಉರುಳಿಸಿದರು.

Story first published: Friday, October 31, 2025, 15:43 [IST]
Other articles published on Oct 31, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+