ಸೊನ್ನೆಗೆ ಔಟ್ ಆಗಿ ಬೇಡವಾದ ದಾಖಲೆ ಬರೆದ ಅಭಿಷೇಕ್ ಶರ್ಮಾ
ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದಾರೆ. ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಅಭಿಷೇಕ್ ಶರ್ಮಾ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಜೋಫ್ರಾ ಆರ್ಚರ್ ಅವರ ಮೊದಲ ಎಸೆತದಲ್ಲೇ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಕ್ಯಾಚ್ ನೀಡಿದರು. ಈ ಮೂಲಕ ಅಭಿಷೇಕ್ ಶರ್ಮಾ ಬೇಡವಾದ ದಾಖಲೆಗೆ ತಮ್ಮ ಹೆಸರನ್ನು ನಮೂದಿಸಿದರು.
ಮೈದಾನದಲ್ಲಿ ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದಲೇ ಸದ್ದು ಮಾಡುವ ಅಭಿಷೇಕ್ ಶರ್ಮಾ ರಾಜಸ್ಥಾನ್ ವಿರುದ್ಧ ಮಂಕಾದಂತೆ ಕಂಡು ಬಂದಿತು. ಪಂಜಾಬ್ ಕಿಂಗ್ಸ್ ವಿರುದ್ಧ ಹಿಂದಿನ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ್ದ ಅಭಿಷೇಕ್ ಮಿಂಚಿದ್ದರು. ಆ ಪಂದ್ಯದಲ್ಲಿ ಅಭಿಷೇಕ್ 28 ಎಸೆತಗಳಲ್ಲಿ 5 ಬೌಂಡರಿ, 8 ಸಿಕ್ಸರ್ ನೆರವಿನಿಂದ 74 ರನ್ ಸಿಡಿಸಿದ್ದರು. ಆದರೆ ಸೋಮವಾರ ನಡೆದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಸೊನ್ನೆಗೆ ಔಟ್ ಆದರು.

ಬೇಡವಾದ ದಾಖಲೆ ಬರೆದ ಅಭಿಷೇಕ್
ಟಿ20 ಕ್ರಿಕೆಟ್‌ನ ಒಂದೇ ವರ್ಷದಲ್ಲಿ ಅತಿ ಹೆಚ್ಚು ಬಾರಿ ಸೊನ್ನೆಗೆ ಔಟ್ ಆದ ಬ್ಯಾಟರ್‌ಗಳ ಪಟ್ಟಿಯಲ್ಲಿ ಈಗ ಅಭಿಷೇಕ್ ಶರ್ಮಾ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಅಭಿಷೇಕ್ 2026ರಲ್ಲಿ ಚುಟುಕು ಫಾರ್ಮೆಟ್‌ನಲ್ಲಿ ಅತಿ ಹೆಚ್ಚು ಬಾರಿ ಔಟ್ ಆಗಿದ್ದು, ಕಳಪೆ ದಾಖಲೆ ಬರೆದಿದ್ದಾರೆ. ಒಂದೇ ವರ್ಷದಲ್ಲಿ ಅತಿ ಹೆಚ್ಚು ಬಾರಿ ಔಟ್ ಆದ ದಾಖಲೆ ಈ ಮೊದಲು ರೋಹಿತ್ ಶರ್ಮಾ, ಸಂಜು ಸ್ಯಾಮ್ಸನ್ ಅವರ ಹೆಸರಿನಲ್ಲಿತ್ತು. ಈ ಇಬ್ಬರೂ ಆಟಗಾರರು ಒಂದೇ ವರ್ಷದಲ್ಲಿ 6 ಬಾರಿ ಔಟ್ ಆಗಿದ್ದರು. ಈಗ ಈ ದಾಖಲೆ ಅಭಿಷೇಕ್ ಶರ್ಮಾ ಅವರದ್ದಾಗಿದೆ. ಇವರು ಈ ವರ್ಷದಲ್ಲಿ 7 ಬಾರಿ ಸೊನ್ನೆ ಸುತ್ತಿದ್ದಾರೆ. ಇದರಲ್ಲಿ ನಾಲ್ಕು ಗೋಲ್ಡನ್ ಡಕ್‌ಗಳು ಸೇರಿವೆ.
ರೋಹಿತ್ ಶರ್ಮಾ 2018 ರಲ್ಲಿ 33 ಟಿ 20 ಪಂದ್ಯಗಳಲ್ಲಿ ಆರು ಬಾರಿ, ಸಂಜು ಸ್ಯಾಮ್ಸನ್ 2024 ರಲ್ಲಿ ಆಡಿದ 32 ಟಿ 20 ಇನ್ನಿಂಗ್ಸ್‌ಗಳಲ್ಲಿ ಆರು ಬಾರಿ ಔಟಾಗಿದ್ದರು. ಈಗ ಈ ದಾಖಲೆ ಅಭಿಷೇಕ್ ಅವರದ್ದಾಗಿದೆ. ಟಿ20 ಫರ್ಮೆಟ್‌ನ ನಂಬರ್ ಒನ್ ಬ್ಯಾಟರ್ ಅಭಿಷೇಕ್ ಶರ್ಮಾ ಅವರಿಗೆ ಈ ವರ್ಷ ದುಃಸ್ವಪ್ನದಂತೆ ಕಾಡಿದೆ. ಈ ವರ್ಷ ಅಭಿಷೇಕ್ 18 ಟಿ20 ಪಂದ್ಯಗಳನ್ನು ಆಡಿದ್ದು, 26.58 ಸರಾಸರಿಯಲ್ಲಿ ಕೇವಲ 452 ರನ್ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications