Abhishek Sharma: ಮಳೆಯಿಂದ ರದ್ದಾದ ಪಂದ್ಯದಲ್ಲಿ ವಿಶ್ವ ದಾಖಲೆ ಬರೆದ ಅಭಿಷೇಕ್
ಭಾರತ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದ ಐದು ಪಂದ್ಯಗಳ ಟಿ20 ಸರಣಿಯನ್ನು 2-1 ರಿಂದ ಗೆದ್ದು ಬೀಗಿದೆ. ಐದನೇ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರಿಂದ ಭಾರತವನ್ನು ಸರಣಿಯ ವಿಜೇತ ತಂಡ ಎಂದು ಘೋಷಿಸಲಾಗಿತ್ತು. ಈ ಸರಣಿಯಲ್ಲಿ ಟೀಮ್ ಇಂಡಿಯಾ ಎರಡನೇ ಪಂದ್ಯದಲ್ಲಿ ಸೋಲು ಕಂಡಿದ್ದರೂ, ಮೂರನೇ ಹಾಗೂ ನಾಲ್ಕನೇ ಪಂದ್ಯದಲ್ಲಿ ಜಯ ಸಾಧಿಸಿ ಪುಟಿದೆದ್ದಿತ್ತು. ಇನ್ನು ಬ್ರಿಸ್ಬೇನ್‌ನಲ್ಲಿ ನಡೆದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಇತಿಹಾಸ ನಿರ್ಮಿಸದ್ದಾರೆ.
ಟೀಮ್ ಇಂಡಿಯಾದ ಪರ ಪ್ರಸಕ್ತ ವರ್ಷ ಭರ್ಜರಿ ಫಾರ್ಮ್‌ನಲ್ಲಿರುವ ಆಟಗಾರ ಆರಂಭಿಕ ಅಭಿಷೇಕ್ ಶರ್ಮಾ. ಇವರು ಆಡಿದ 5 ಪಂದ್ಯಗಳಲ್ಲಿ 40.75ರ ಸರಾಸರಿಯಲ್ಲಿ 163 ರನ್ ಬಾರಿಸಿದ್ದಾರೆ. ಇವರ ಅಮೋಘ ಆಟಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿ ಸಹ ಲಭಿಸಿತು. ಅಭಿಷೇಕ್ ಶರ್ಮಾ ಐದನೇ ಪಂದ್ಯದಲ್ಲೂ ಬಿಗ್ ಇನಿಂಗ್ಸ್ ಕಟ್ಟುವ ಸೂಚನೆ ನೀಡಿದ್ದರು. ಆದರೆ ಮಳೆಯಿಂದಾಗಿ ಆ ಕನಸು ನನಸಾಗಿರಲಿಲ್ಲ. ಆದರೂ 13 ಎಸೆತಗಳಲ್ಲಿ 23 ರನ್ ಸಿಡಿಸುತ್ತಲೇ ವಿಶ್ವ ದಾಖಲೆಯೊಂದನ್ನು ಬರೆದರು.

ಅಭಿಷೇಕ್ 5ನೇ ಪಂದ್ಯದಲ್ಲಿ 11 ನೇ ರನ್ ಪೂರ್ಣಗೊಳಿಸಿದ ತಕ್ಷಣ, ಅವರು ಪ್ರಮುಖ ವಿಶ್ವ ದಾಖಲೆಯನ್ನು ರಚಿಸುವಲ್ಲಿ ಯಶಸ್ವಿಯಾದರು. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 1 ಸಾವಿರ ರನ್ ಪೂರ್ಣಗೊಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಅಭಿಷೇಕ್ ಪಾತ್ರರಾದರು. ಇವರು 528 ಎಸೆತಗಳಲ್ಲಿ ಈ ಸಾಧನೆ ಮಾಡಿದರು. ಈ ಮೂಲಕ ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಟೀಮ್ ಡೇವಿಡ್ ಅವರ ದಾಖಲೆಯನ್ನು ಅಳಿಸಿ ಹಾಕಿದರು.
ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 1,000 ರನ್ ಗಳಿಸಿದ ಆಟಗಾರರು
ಅಭಿಷೇಕ್ ಶರ್ಮಾ, ಭಾರತ- 528 ಎಸೆತ
ಟಿಮ್ ಡೇವಿಡ್, ಆಸ್ಟ್ರೇಲಿಯಾ- 569 ಎಸೆತ
ಸೂರ್ಯಕುಮಾರ್ ಯಾದವ್, ಭಾರತ- 573 ಎಸೆತ
ಫಿಲ್ ಸಾಲ್ಟ್, ಇಗ್ಲೆಂಡ್- 599 ಎಸೆತ
ಈ ವಿಷಯದಲ್ಲಿ 2ನೇ ಸ್ಥಾನ
ಇನ್ನು ಇನಿಂಗ್ಸ್‌ಗಳ ಆಧಾರಾದಲ್ಲಿ ಭಾರತದ ಪರ ವೇಗವಾಗಿ 1 ಸಾವಿರ ರನ್ ಪುರೈಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಇವರು 28 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ, ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 27 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.
ಈ ವರ್ಷದಲ್ಲಿ ಅಭಿಷೇಕ್ ಶರ್ಮಾ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರ ಸದ್ಯ ಟಿ20 ಶ್ರೇಯಾಂಕದಲ್ಲಿ ನಂಬರ್ 1 ಬ್ಯಾಟರ್. ಇವರು ವೇಗವಾಗಿ ಟಿ20 ಕ್ರಿಕೆಟ್‌ನಲ್ಲಿ ರನ್‌ಗಳಿಸಬಲ್ಲ ಕ್ಷಮತೆಯನ್ನು ಹೊಂದಿರುವ ಬ್ಯಾಟರ್. ಇವರು ಮೈದಾನಕ್ಕೆ ಇಳಿಯುತ್ತಲೇ ಎದುರಾಳಿಗಳಿಗೆ ನಡುಕ ಆರಂಭವಾಗುತ್ತದೆ. ಟಿ20 ವಿಶ್ವಕಪ್‌ನ ತಂಡದಲ್ಲಿ ಸ್ಥಾನ ಪಡೆದು ಮಿಂಚು ಹರಿಸುವುದೇ ಗುರಿ ಎಂದು ಅಭಿಷೇಕ್ ಶರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications