For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ ಭಾರತ ತಂಡಕ್ಕೆ ಅಭಿಷೇಕ್ ಶರ್ಮಾ ಆಯ್ಕೆ?; ಹೀಗಂದ್ರು ಹರ್ಭಜನ್ ಸಿಂಗ್

ಐಪಿಎಲ್ 2024ರಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಅತ್ಯಂತ ಸ್ಫೋಟಕ ಇನ್ನಿಂಗ್ಸ್ ಆಡಿದ ನಂತರ, ಭಾರತದ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಲಿ ಎಂದು ಮಾಜಿ ಕ್ರಿಕೆಟಿಗರು ಆಶಿಸುತ್ತಿದ್ದಾರೆ.

ಭಾರತದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಅಭಿಷೇಕ್ ಶರ್ಮಾ ಅವರನ್ನು ಕನಿಷ್ಠ 2024ರ ಟಿ20 ವಿಶ್ವಕಪ್‌ನ ಭಾರತದ ಪ್ರವಾಸಿ ಮೀಸಲು ಆಟಗಾರರನ್ನಾಗಿ ಸೇರ್ಪಡೆಗೊಳಿಸಲು ಇನ್ನೂ ತಡವಾಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

Abhishek Sharma Should Be Selected For T20 World Cup Indian team says Harbhajan Singh

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಕೇವಲ 28 ಎಸೆತಗಳಲ್ಲಿ 75 ರನ್ ಗಳಿಸಿದರು ಮತ್ತು ಟ್ರಾವಿಸ್ ಹೆಡ್ ಜೊತೆಗೆ ಮುರಿಯದ 167 ರನ್‌ಗಳ ಜೊತೆಯಾಟ ನಿರ್ಮಿಸಿದರು.

ಮೇ 8ರ ಬುಧವಾರದಂದು ಹೈದರಾಬಾದ್‌ನಲ್ಲಿ ಎಲ್‌ಎಸ್‌ಜಿ ವಿರುದ್ಧದ 166 ರನ್ ಗುರಿಯನ್ನು ಎಸ್‌ಆರ್‌ಹೆಚ್ ಅಪಹಾಸ್ಯ ಮಾಡಿದ ಕಾರಣ, ಟ್ರಾವಿಸ್ ಹೆಡ್ ಅವರು ಕೇವಲ 30 ಎಸೆತಗಳಲ್ಲಿ 89 ರನ್ ಗಳಿಸಿದರು.

ಸನ್ ರೈಸರ್ಸ್ ಹೈದರಾಬಾದ್ ತಂಡದ ಆಕ್ರಮಣಕಾರಿ ಆಟ ನೋಡಿದ್ದನ್ನು ನಂಬಲು ಸಾಧ್ಯವಾಗದ ಕಾರಣ, ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳ ಭಾವನೆಗಳನ್ನು ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಪ್ರತಿಧ್ವನಿಸಿದರು.

Abhishek Sharma Should Be Selected For T20 World Cup Indian team says Harbhajan Singh

ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಅವರ ನಡುವೆ 14 ಸಿಕ್ಸರ್ ಮತ್ತು 16 ಬೌಂಡರಿಗಳನ್ನು ಬಾರಿಸುವುದರೊಂದಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ಕೇವಲ 9.4 ಓವರ್‌ಗಳಲ್ಲಿ 166 ರನ್ ಗಳಿಸಿತು.

ನಾಯಕ ಕೆಎಲ್ ರಾಹುಲ್ ಸೇರಿದಂತೆ ಲಕ್ನೋ ತಂಡದ ಅಗ್ರ ಬ್ಯಾಟರ್‌ಗಳು ಸುಲಭವಾಗಿ ರನ್ ಗಳಿಸಲು ಹೆಣಗಾಡುತ್ತಿದ್ದ ಪಿಚ್‌ನಲ್ಲಿ ಹೈದರಾಬಾದ್ ಬ್ಯಾಟರ್‌ಗಳ ಕೇವಲ ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ ಪಂದ್ಯ ಮುಗಿಸಿದರು.

"ಹೈದರಾಬಾದ್‌ನಲ್ಲಿ ಏನಾಯಿತು! ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಜೋಡಿ ಸಿಂಗಲ್ಸ್ ತೆಗೆದುಕೊಳ್ಳುವಂತೆ ಬೌಂಡರಿ, ಸಿಕ್ಸರ್ ಹೊಡೆದರು. ಟೀಮ್ ಇಂಡಿಯಾ ಅಭಿಷೇಕ್ ಶರ್ಮಾ ಅವರನ್ನು ಟಿ20 ವಿಶ್ವಕಪ್ ಮೀಸಲು ಆಟಗಾರರ ಪಟ್ಟಿಯಲ್ಲಿ ಸೇರಿಸಬೇಕೇ?," ಎಂದು ಹರ್ಭಜನ್ ಸಿಂಗ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಟ್ರಾವಿಸ್ ಹೆಡ್ 11 ಪಂದ್ಯಗಳಲ್ಲಿ 533 ರನ್ ಗಳಿಸಿದ ನಂತರ, ಐಪಿಎಲ್ 2024ರಲ್ಲಿ ಆರೆಂಜ್ ಕ್ಯಾಪ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಏರಿದರೆ, ಅಭಿಷೇಕ್ ಶರ್ಮಾ ಎರಡು 50-ಪ್ಲಸ್ ಸ್ಕೋರ್‌ಗಳೊಂದಿಗೆ 401 ರನ್ ಗಳಿಸಿದ್ದಾರೆ.

ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಜೋಡಿ ಸದ್ಯ ನಡೆಯುತ್ತಿರುವ ಐಪಿಎಲ್ ಆವೃತ್ತಿಯಲ್ಲಿ 200ರ ಸ್ಟ್ರೈಕ್ ರೇಟ್‌ನಲ್ಲಿ ಸ್ಕೋರ್ ಮಾಡಿದ್ದಾರೆ. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ವಿನಾಶಕಾರಿ ಆರಂಭಿಕ ಜೋಡಿಗಳಲ್ಲಿ ಒಂದಾಗಿದೆ.

ಐಪಿಎಲ್ 2024ರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಅಭಿಷೇಕ್ ಶರ್ಮಾ

ಅಭಿಷೇಕ್ ಶರ್ಮಾ ಐಪಿಎಲ್ 2024ರಲ್ಲಿ ಆಡಿದ 11 ಪಂದ್ಯಗಳಲ್ಲಿ 35 ಸಿಕ್ಸರ್ ಬಾರಿಸಿ ಅಗ್ರಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿರುವ ಸುನಿಲ್ ನರೈನ್ ಅವರಿಗಿಂತ 3 ಮತ್ತು 3ನೇ ಸ್ಥಾನದಲ್ಲಿರುವ ಟ್ರಾವಿಸ್ ಹೆಡ್‌ಗಿಂತ 4 ಹೆಚ್ಚು ಸಿಕ್ಸ್ ಸಿಡಿಸಿದ್ದಾರೆ.

ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲು ಅಭಿಷೇಕ್ ಶರ್ಮಾ ಅವರ ಐಪಿಎಲ್ 2024ರ ಆವೃತ್ತಿಯ ಪ್ರದರ್ಶನ ಸಾಕಾಗಲಿಲ್ಲ.

15 ಸದಸ್ಯರ ತಂಡದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಯಶಸ್ವಿ ಜೈಸ್ವಾಲ್ ಅಗ್ರ ಕ್ರಮಾಂಕದ ಆಟಗಾರರಾಗಿ ಆಯ್ಕೆಯಾಗಿದ್ದರೆ, ಶುಭ್ಮನ್ ಗಿಲ್ ಮತ್ತು ರಿಂಕು ಸಿಂಗ್ 4 ಪ್ರಯಾಣಿಕ ಮೀಸಲು ಆಟಗಾರರಲ್ಲಿ ಇಬ್ಬರು ಬ್ಯಾಟರ್‌ಗಳಾಗಿದ್ದಾರೆ.

ಆದರೆ, ಪಂಡಿತರು ಮತ್ತು ಮಾಜಿ ಕ್ರಿಕೆಟಿಗರು ಅಭಿಷೇಕ್ ಶರ್ಮಾ ಶೀಘ್ರದಲ್ಲೇ, ಬಹುಶಃ ಟಿ20 ವಿಶ್ವಕಪ್ ನಂತರ ಭಾರತೀಯ ಟಿ20 ತಂಡದ ಭಾಗವಾಗಲಿದ್ದಾರೆ ಎಂದು ಭಾವಿಸುತ್ತಾರೆ.

Story first published: Thursday, May 9, 2024, 10:05 [IST]
Other articles published on May 9, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+