ಅಭಿಷೇಕ್ ಶರ್ಮಾ ಅಬ್ಬರದ ಶತಕ: ಸ್ಫೋಟಕ ಬ್ಯಾಟರ್ ಬರೆದ ದಾಖಲೆಗಳ ಪಟ್ಟಿ
25 ವರ್ಷದ ಯುವ ಎಡಗೈ ಆಟಗಾರ ಅಭಿಷೇಕ್ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ತಮ್ಮ ಐಪಿಎಲ್ ವೃತ್ತಿ ಜೀವನದ ಎರಡನೇ ಶತಕ ಬಾರಿಸಿ ಮಿಂಚಿದರು. ಈ ಮೂಲಕ ದಾಖಲೆ ಬರೆದರು. ಅಭಿಷೇಕ್ ಈ ಆವೃತ್ತಿಯ ಐಪಿಎಲ್‌ನಲ್ಲಿ ಅಬ್ಬರಿಸಿದ್ದಾರೆ. ಇವರು ಆರಂಭದಲ್ಲಿ ಕೊಂಚ ನಿಧಾನವಾಗಿ ಬ್ಯಾಟ್ ಮಾಡಿದರೂ ಕೊನೆಗೆ ಆರ್ಭಟಿಸಿದರು. ಇವರು 47ನೇ ಎಸೆತದಲ್ಲಿ ಶತಕ ಬಾರಿಸಿದರು.

ಅಭಿಷೇಕ್ ಶರ್ಮಾ ಈ ಆವೃತ್ತಿಯಲ್ಲಿ ಎರಡನೇ ಬಾರಿಗೆ 50ಕ್ಕೂ ಹೆಚ್ಚು ರನ್ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಇವರು 68 ಎಸೆತಗಳಲ್ಲಿ 10 ಬೌಂಡರಿ, 10 ಸಿಕ್ಸರ್ ಸಹಾಯದಿಂದ ಅಜೇಯ 135 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದ್ದಾರೆ.
ವಿರಾಟ್ ಕೊಹ್ಲಿ ಸಮಕ್ಕೆ ನಿಂತ ಅಭಿಷೇಕ್
ರೋಹಿತ್ ಶರ್ಮಾ ಭಾರತ ಪರ ಟಿ20 ಕ್ರಿಕೆಟ್‌ನಲ್ಲಿ ಎಂಟು ಶತಕಗಳನ್ನು ಗಳಿಸಿದ್ದಾರೆ. ಈ ದಾಖಲೆಯನ್ನು ಅಭಿಷೇಕ್ ಶರ್ಮಾ ಮೀರಿ ನಿಂತಿದ್ದಾರೆ. ಅಭಿಷೇಕ್ ಟಿ20 ಸ್ವರೂಪದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಅಭಿಷೇಕ್ ಶರ್ಮಾ, ಟಿ20 ಇತಿಹಾಸದಲ್ಲಿ ಅತಿ ವೇಗವಾಗಿ 9 ಶತಕಗಳನ್ನು ಪೂರೈಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಐಪಿಎಲ್‌ನಲ್ಲಿ ವೇಗದ ಶತಕ ಬಾರಿಸಿದ ಭಾರತೀಯ ಬ್ಯಾಟರ್ಸ್
| ಆಟಗಾರ | ತಂಡ | ಎಸೆತ | ವಿರುದ್ಧ |
|---|---|---|---|
| ವೈಭವ್ ಸೂರ್ಯವಂಶಿ | ರಾಜಸ್ಥಾನ್ ರಾಯಲ್ಸ್ | 35 | ಗುಜರಾತ್ ಟೈಟಾನ್ಸ್ |
| ಯೂಸುಫ್ ಪಠಾಣ್ | ರಾಜಸ್ಥಾನ್ ರಾಯಲ್ಸ್ | 37 | ಮುಂಬೈ ಇಂಡಿಯನ್ಸ್ |
| ಪ್ರಿಯಾಂಶ್ ಆರ್ಯ | ಪಂಜಾಬ್ ಕಿಂಗ್ಸ್ | 39 | ಚೆನ್ನೈ ಸೂಪರ್ ಕಿಂಗ್ಸ್ |
| ಅಭಿಷೇಕ್ ಶರ್ಮಾ | ಸನ್‌ರೈಸರ್ಸ್ ಹೈದರಾಬಾದ್ | 40 | ಪಂಜಾಬ್ ಕಿಂಗ್ಸ್ |
| ಮಯಾಂಕ್ ಅಗರ್ವಾಲ್ | ಪಂಜಾಬ್ ಕಿಂಗ್ಸ್ | 45 | ರಾಜಸ್ಥಾನ್ ರಾಯಲ್ಸ್ |
| ಇಶಾನ್ ಕಿಶನ್ | ಸನ್‌ರೈಸರ್ಸ್ ಹೈದರಾಬಾದ್ | 45 | ರಾಜಸ್ಥಾನ್ ರಾಯಲ್ಸ್ |
| ತಿಲಕ್ ವರ್ಮಾ | ಮುಂಬೈ ಇಂಡಿಯನ್ಸ್ | 45 | ಗುಜರಾತ್ ಟೈಟಾನ್ಸ್ |
| ಮುರಳಿ ವಿಜಯ್ | ಚೆನ್ನೈ ಸೂಪರ್ ಕಿಂಗ್ಸ್ | 46 | ರಾಜಸ್ಥಾನ್ ರಾಯಲ್ಸ್ |
| ವಿರಾಟ್ ಕೊಹ್ಲಿ | ಆರ್‌ಸಿಬಿ | 47 | ಪಂಜಾಬ್ ಕಿಂಗ್ಸ್ |
| ಅಭಿಷೇಕ್ ಶರ್ಮಾ | ಸನ್‌ರೈಸರ್ಸ್ ಹೈದರಾಬಾದ್ | 47 | ಡೆಲ್ಲಿ ಕ್ಯಾಪಿಟಲ್ಸ್ |
243 ರನ್ ಗುರಿ
ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ತಂಡ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 242 ರನ್ ಸೇರಿಸಿತು. ಈ ವೇಳೆ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ 37 ರನ್ ಬಾರಿಸಿ ಅಕ್ಷರ್ ಪಟೇಲ್ ತೋಡಿದ ಖೆಡ್ಡಾಗೆ ಬಲಿಯಾದರು. ನಾಯಕ ಇಶಾನ್ ಕಿಶನ್ 25 ರನ್ ಬಾರಿಸಿದ್ದಾಗ ಬೇಡದ ರೀತಿ ರನೌಟ್‌ಗೆ ಬಲಿಯಾದರು. ಅಭಿಷೇಕ್ ಪ್ಲೇಯ್ಡ್ ಮಾಡಿದ ಚೆಂಡು ಬೌಲರ್ ಕೈಗೆ ವಿಕೆಟ್‌ಗೆ ಬಡಿಯಿತು. ಪರಿಣಾಮ ಇಶಾನ್ ಔಟ್ ಆದರು. ಅಂತಿಮವಾಗಿ ಹೈದರಾಬಾದ್ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 242 ರನ್ ಸೇರಿಸಿತು. ಸನ್ ತಂಡದ ಪರ ಸ್ಫೋಟಕ ಆಟಗಾರ ಹೆನ್ರಿಕ್ ಕ್ಲಾಸೆನ್ ಸಜೇಯ 37 ರನ್ ಸಿಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications