ಟಿ20 ವಿಶ್ವಕಪ್ ರೋಚಕ ಘಟ್ಟದತ್ತ ಮುಖಮಾಡಿದೆ. ಈ ಟೂರ್ನಿಯ ಸೆಮಿಫೈನಲ್ ಪಂದ್ಯಗಳಿಗೆ ಬುಧವಾರ ಚಾಲನೆ ಸಿಗಲಿದೆ. ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಗುರುವಾರ ಕಾದಾಟವನ್ನು ನಡೆಸಲಿವೆ. ಈ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡ ಟೀಮ್ ಇಂಡಿಯಾ. ಟೂರ್ನಿಯಲ್ಲಿ ಇಂಗ್ಲೆಂಡ್ ಸಹ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದಿದೆ. ಈ ವೇಳೆ ಇಂಗ್ಲೆಂಡ್ ತಂಡಕ್ಕೆ ಟೀಮ್ ಇಂಡಿಯಾದ ಓಪನರ್ ಭಯ ಆರಂಭವಾಗಿದೆ. ಆ ಪ್ಲೇಯರ್ ಯಾರು ಭಯ ಏಕೆ ಎಂಬ ಬಗ್ಗೆ ವರದಿ ಇಲ್ಲಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಸೆಮಿಫೈನಲ್ ಪಂದ್ಯ ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆಯಲಿದೆ. ಈ ಪಂದ್ಯ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ತವರು ಅಂಗಳವಾಗಿದೆ. ಈ ಮೈದಾನದಲ್ಲಿ ಇವರು ಅಬ್ಬರಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದರೆ ಇಂಗ್ಲೆಂಡ್ ಈ ಪ್ಲೇಯರ್ ಭಯ ಇಲ್ಲವೇ ಇಲ್ಲ. ಆದರೆ ಆ ಒಬ್ಬ ಬ್ಯಾಟರ್ ನಿಜಕ್ಕೂ ಇಂಗ್ಲೆಂಡ್ ತಂಡದಲ್ಲಿ ಚಿಂತೆಯ ಗೆರೆಗಳನ್ನು ಮೂಡುವಂತೆ ಮಾಡಿದ್ದಾನೆ.

ಆ ಪ್ಲೇಯರ್ ಈಗಾಗಲೇ ಟೂರ್ನಿಯಲ್ಲಿ ಒಂದು ಅರ್ಧಶತಕ ಬಾರಿಸಿದ್ದಾನೆ. ಲಯಕ್ಕಾಗಿ ಪರದಾಡುತ್ತಿದ್ದ ಪ್ಲೇಯರ್ ಈಗ ಲಯಕ್ಕೆ ಮರಳಿದ್ದಾನೆ. ಅಂದರೆ ಸಂಜು ಸ್ಯಾಮ್ಸನ್ ಭಯ ಇಂಗ್ಲೆಂಡ್‌ಗೆ ಆರಂಭವಾಗಿದೆ ಎಂಬ ಚಿಂತೆ ನಿಮ್ಮ ತಲೆಯಲ್ಲಿ ಹೊಳೆಯುತ್ತಿರಬಹುದು. ಸಂಜು ಸ್ಯಾಮ್ಸನ್ ಸೂಪರ್ 8 ಹಂತದ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಅಮೋಘ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚಿದ್ದರೂ ಸಹ ಈ ಪ್ಲೇಯರ್ ಭಯ ಇಂಗ್ಲೆಂಡ್‌ಗೆ ಇಲ್ಲ. ಬದಲಿಗೆ ಎಡಗೈ ಆರಂಭಿಕ ಆಟಗಾರ, ಇಂಗ್ಲೆಂಡ್ ಬೌಲರ್‌ಗಳನ್ನು ನಿದ್ದೆಯಲ್ಲೂ ಕಾಡುತ್ತಿದ್ದಾನೆ.
ಇಂಗ್ಲೆಂಡ್ ಬೌಲರ್‌ಗಳ ಚಿಂತೆಯನ್ನು ಹೆಚ್ಚಿಸಿದ್ದು ಟಿ20 ಕ್ರಿಕೆಟ್‌ನ ನಂಬರ್ 1 ಬ್ಯಾಟರ್ ಅಭಿಷೇಕ್ ಶರ್ಮಾ. ಈ ಪ್ಲೇಯರ್ ಪ್ರಸಕ್ತ ವಿಶ್ವಕಪ್‌ನಲ್ಲಿ ರನ್ ಕಲೆ ಹಾಕುವಲ್ಲಿ ಪರದಾಟ ನಡೆಸಿದ್ದಾರೆ. ಆದರೆ ಇವರು ಇದೇ ಇಂಗ್ಲೆಂಡ್ ವಿರುದ್ಧ ಕಳೆದ ವರ್ಷ ಫೆಬ್ರವರಿ 2 ರಂದು ನಡೆದ ಟಿ20 ಪಂದ್ಯದಲ್ಲಿ ಅಬ್ಬರಿಸಿದ್ದರು. ಅಂದಹಾಗೆ ಈ ಪಂದ್ಯಕ್ಕೂ ಇದೇ ವಾಂಖೆಡೆ ಮೈದಾನ ಆತಿಥ್ಯ ನೀಡಿತ್ತು.

ಅಂದು ನಡೆದ 5ನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್ ಕಂಡು ಇಂಗ್ಲೆಂಡ್ ಬೌಲರ್‌ಗಳು ಸುಸ್ತಾಗಿದ್ದರು. ಈ ಪ್ಲೇಯರ್ ಈ ಪಂದ್ಯದಲ್ಲಿ 250ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದ್ದರು. ಅಭಿಷೇಕ್ ಶರ್ಮಾ ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ 54 ಎಸೆತಗಳಲ್ಲಿ 7 ಬೌಂಡರಿ, 13 ಸಿಕ್ಸರ್ ಬಾರಿಸಿ ಅಬ್ಬರಿಸಿದ್ದರು. ಈ ಪ್ಲೇಯರ್ ಕಟ್ಟಿ ಹಾಕುವುದು ನಿಜಕ್ಕೂ ಇಂಗ್ಲೆಂಡ್ ಬೌಲರ್‌ಗಳಿಗೆ ಚಿಂತೆಯಾಗಿದೆ.
ಇಂಗ್ಲೆಂಡ್ ವಿರುದ್ಧ ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್ ದಾಖಲೆ ಹೊಂದಿದ್ದಾರೆ. ಇವರು ಈಗಾಗಲೇ ಆಡಿದ 5 ಪಂದ್ಯಗಳಲ್ಲಿ 55ರ ಸರಾಸರಿಯಲ್ಲಿ 279 ರನ್ ಸಿಡಿಸಿದ್ದಾರೆ. ಈ ವೇಳೆ 1 ಶತಕ ಹಾಗೂ 1 ಅರ್ಧಶತಕಗಳು ಸೇರಿವೆ.

ಭಾರತ ಟಿ20 ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಮೂರನೇ ಬಾರಿಗೆ ಕಪ್ ಎತ್ತುವ ಕನಸು ಕಾಣುತ್ತಿದೆ. ಅಲ್ಲದೆ ತವರಿನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಕಪ್‌ಗೆ ಮುತ್ತಿಡುವ ಆಸೆಯನ್ನು ಸೂರ್ಯಕುಮಾರ್ ಯಾದವ್ ಪಡೆ ಹೊಂದಿದೆ. ಈ ಆಸೆ ಫಲಿಸಬೇಕಾದರೆ ಓಪನರ್ ಬಿಗ್ ಇನಿಂಗ್ಸ್ ಕಟ್ಟುವ ಅನಿವಾರ್ಯತೆ ಇದೆ.