For Quick Alerts
ALLOW NOTIFICATIONS  
For Daily Alerts
 

Abhishek Sharma: ಟೀಮ್ ಇಂಡಿಯಾ ಓಪನರ್‌ ರನ್ ಬರ: ಸ್ಥಾನ ಕಳೆದುಕೊಳ್ಳುವ ಭೀತಿ

ಟೀಮ್ ಇಂಡಿಯಾದ ಭರವಸೆಯ ಆರಂಭಿಕ ಬ್ಯಾಟರ್‌ ಅಭಿಷೇಕ್‌ ಶರ್ಮಾ ರನ್‌ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದಾರೆ. ತಂಡ ಅವರ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡುವಲ್ಲಿ ಅಭಿಷೇಕ್‌ ಎಡವಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟಿ20 ಪಂದ್ಯದ ವೇಳೆಯೂ ಟಿಮ್ ಇಂಡಿಯಾದ ಓಪನ್‌ ರನ್‌ ಬರ ಅನುಭವಿಸಿದ್ದು, ಮೂರನೇ ಟಿ20 ಪಂದ್ಯದಲ್ಲಿ ಇವರನ್ನು ಕೈ ಬಿಡುವ ಸಾಧ್ಯತೆ ಕಾಣುತ್ತಿದೆ. ನಿಜಕ್ಕೂ ಇವರ ಫಾರ್ಮ್‌ ದೊಡ್ಡ ತಲೆನೋವಾಗಿದೆ.

ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟಿ20 ಪಂದ್ಯಗಳನ್ನು ಆಡುತ್ತಿದೆ. ಈ ಪ್ರವಾಸದ ಮೊದಲ ಪಂದ್ಯವನ್ನು 61 ರನ್‌ ಗಳಿಂದ ಭಾರತ ಗೆದ್ದು ಕೊಂಡಿತ್ತು. ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಅಮೋಘ ಪ್ರದರ್ಶನ ನೀಡಿ ಶತಕ ಬಾರಿಸಿದ್ದರು. ಆದರೆ ಭಾನುವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟರ್‌ಗಳ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಆರಂಭಿಕ ಬ್ಯಾಟರ್‌ ಅಭಿಷೇಕ್‌ ಶರ್ಮಾ, ಸಮಯೋಚಿತ ಜೊತೆಯಾಟವನ್ನು ನೀಡುವಲ್ಲಿ ಎಡವಿದ್ದಾರೆ. ಇವರು ಲಯ ಕಳೆದುಕೊಂಡಿರುವುದು ನಿಜಕ್ಕೂ ಟೀಮ್ ಇಂಡಿಯಾ ಚಿಂತೆಯನ್ನು ಹೆಚ್ಚಿಸಿದೆ.

Abhishek Sharma Tops Unwanted List as India Struggles in T20 Series Against South Africa

ಬೇಡದ ದಾಖಲೆಗೆ ಅಭಿಷೇಕ್ ಹೆಸರು ನಮೂದು

ಅಭಿಷೇಕ್‌ ಶರ್ಮಾ ತಮ್ಮ ಧಮಾಕೆದಾರ್ ಬ್ಯಾಟಿಂಗ್ ಮೂಲಕವೇ ಶತಕ ಬಾರಿಸಿದ್ದರು. ಆದರೆ ಆ ಶತಕದ ಇನಿಂಗ್ಸ್‌ ಬಳಿಕ ಯಾವುದೇ ಬಿಗ್ ಇನಿಂಗ್ಸ್ ಬಂದಿರಲಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದ ಮೊದಲ ಪಂದ್ಯದಲ್ಲಿ 7 ರನ್‌ಗಳಿಸಿದ್ದ ಅಭಿಷೇಕ್‌, ಎರಡನೇ ಪಂದ್ಯದಲ್ಲಿ ರನ್‌ ಬಾರಿಸುವ ಭರವಸೆಯನ್ನು ಮೂಡಿಸಿದ್ದರು. ಆದರೆ ಭಾನುವಾರ ನಡೆದ ಪಂದ್ಯದಲ್ಲೂ 4 ರನ್‌ ಬಾರಿಸಿ ಔಟ್ ಆದರು. ಈ ಮೂಲಕ ಅಭಿಷೇಕ್‌ ಶರ್ಮಾ ಬೇಡವಾದ ದಾಖಲೆಗೆ ಸಹ ತಮ್ಮ ಹೆಸರನ್ನು ನಮೂದಿಸಿದ್ದಾರೆ.

ಐಪಿಎಲ್‌ನಲ್ಲಿ ಅಮೊಘ ಪ್ರದರ್ಶನ ನೀಡಿದ ಫಲವಾಗಿ ಈ ವರ್ಷ ಅಭಿಷೇಕ್ ಶರ್ಮಾ ಅವರಿಗೆ ಬ್ಲ್ಯೂ ಜೆರ್ಸಿ ನೀಡಲಾಯಿತು. ಮೊದಲ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ಅಭಿಷೇಕ್, ಎರಡನೇ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅಭಿಷೇಕ್ ಬ್ಯಾಟ್ ಮೌನಕ್ಕೆ ಶರಣಾಗಿದೆ. ಬಾಂಗ್ಲಾದೇಶದ ವಿರುದ್ಧದ ತವರಿನಲ್ಲಿ ನಡೆದ ಪಂದ್ಯದಲ್ಲೂ ಅಭಿಷೇಕ್‌ ವಿಫಲರಾದರು.

Abhishek Sharma Tops Unwanted List as India Struggles in T20 Series Against South Africa

ಈ ಮೂಲಕ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಬಾರಿಸಿದ ನಂತರ ಕಡಿಮೆ ಸರಾಸರಿ ಹೊಂದಿರುವ ಹಾಲಿ ಬ್ಯಾಟರ್‌ ಆಗಿದ್ದಾರೆ. ಅಭಿಷೇಕ್ ಅವರ ಬ್ಯಾಟಿಂಗ್ ಸರಾಸರಿಯು ಪ್ರಸ್ತುತ ಕೇವಲ 18.88 ಆಗಿದೆ. ಇವರು ಈ ಸರಾಸರಿಯ ವಿಷಯದಲ್ಲಿ ಕೆವಿನ್ ಒ'ಬ್ರಿಯಾನ್ ಅವರನ್ನು ಹಿಂದಿಕ್ಕಿದ್ದಾರೆ.

ಸತತ ರನ್‌ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವ ಅಭಿಷೇಕ್‌ ಶರ್ಮಾ ಅವರನ್ನು ಮೂರನೇ ಟಿ20 ಪಂದ್ಯದಲ್ಲಿ ಬೆಂಚ್‌ ಮೇಲೆ ಕೂರಿಸುವ ಸಾಧ್ಯತೆ ಇದೆ. ಇವರ ಬದಲಿಗೆ ಯುವ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಒಂದು ವೇಳೆ ಇವರಿಗೆ ಮತ್ತೆ ಮೂರನೇ ಟಿ20 ಪಂದ್ಯದಲ್ಲಿ ಆಡುವ ಅವಕಾಶವನ್ನು ಟೀಮ್ ಮ್ಯಾನೇಜ್ಮೆಂಟ್‌ ನಿಡಿದ್ದೇ ಆದಲ್ಲಿ, ಅದನ್ನು ಸಾಬೀತು ಮಾಡುವ ಅನಿವಾರ್ಯತೆ ಅವರ ಮೇಲಿದೆ.

Story first published: Monday, November 11, 2024, 7:30 [IST]
Other articles published on Nov 11, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+