Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕುಲ್‌ದೀಪ್‌ ಹಿಂದಿಕ್ಕಿದ ಅಭಿಷೇಕ್‌ಗೆ ಐಸಿಸಿ ಪ್ರಶಸ್ತಿ

ಇತ್ತೀಚಿಗೆ ದುಬೈನಲ್ಲಿ ನಡೆದ ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ ಭಾರತ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಈ ವೇಳೆ ಟೀಮ್ ಇಂಡಿಯಾದ ಯುವ ಆಟಗಾರ ಅಭಿಷೇಕ್‌ ಶರ್ಮಾ ಅಮೋಘ ಪ್ರದರ್ಶನ ನೀಡಿ, ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೂಪರ್ 4 ಹಂತದ ಮೂರು ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಬಾರಿಸಿದ್ದ ಅಭಿಷೇಕ್‌ ಅಬ್ಬರಿಸಿದ್ದರು. ಇವರ ಈ ಭರ್ಜರಿ ಪ್ರದರ್ಶನದ ಫಲವಾಗಿ ಇವರನ್ನು ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿತ್ತು. ಈಗ ಇದರ ಪ್ರಕಟಣೆ ಆಗಿದ್ದು, 25 ವರ್ಷದ ಯುವ ಆಟಗಾರ ಅಭಿಷೇಕ್‌ ಶರ್ಮಾ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಅಭಿಷೇಕ್‌ ಶರ್ಮಾ ಸೆಪ್ಟಂಬರ್ ಆಟಗಾರ ಪ್ರಶಸ್ತಿಯನ್ನು ಪಡೆಯಲು ತಮ್ಮ ತಂಡದ ಸಹ ಆಟಗಾರ ಕುಲ್‌ದೀಪ್ ಯಾದವ್ ಅವರಿಂದ ಭಾರೀ ಜಿದ್ದು ಕಂಡಿದ್ದರು. ಕುಲ್‌ದೀಪ್ ಯಾದವ್ ಸಹ ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಅಭಿಷೇಕ್‌ ಶರ್ಮಾ ಟೂರ್ನಿಯ ಉದ್ದಕ್ಕೂ ತಮ್ಮ ಬಿರುಸಿನ ಆಟವನ್ನು ಆಡಿ ಗಮನ ಸೆಳೆದರು. ಇವರು ಈ ಟೂರ್ನಿಯಲ್ಲಿ ಬೌಲರ್‌ಗಳನ್ನು ಮನಬಂದಂತೆ ಥಳಿಸಿದರು. ಆರಂಭದಲ್ಲಿ ಬೌಲರ್‌ಗಳ ಹೆಡೆ ಮುರಿ ಕಟ್ಟುತ್ತಿದ್ದ ಅಭಿಷೇಕ್‌ ಬಳಿಕ ತಮ್ಮ ನೈಜ್ಯ ಆಟವನ್ನು ಆಡಿ ಅಬ್ಬರಿಸುತ್ತಿದ್ದರು.

Abhishek Sharma Wins ICC Men s Player of the Month Award for September After Asia Cup Heroics

ಐಸಿಸಿ ಸೆಪ್ಟಂಬರ್‌ ತಿಂಗಳು ಆಟಗಾರ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ ಅಭಿಷೇಕ್‌ ಶರ್ಮಾ ತಮ್ಮ ಹೇಳಿಕೆ ನೀಡಿದ್ದಾರೆ. ಪ್ರಶಸ್ತಿ ಸಂತೋಷ ತಂದಿದೆ. ಬಲಿಷ್ಠ ತಂಡದ ಭಾಗವಾಗಿರುವ ಹೆಮ್ಮೆ ಇದೆ ಎಂದು ಅಭಿಷೇಕ್‌ ತಿಳಿಸಿದ್ದಾರೆ. ಇವರು ಪ್ರಸಕ್ತ ಟಿ20 ವಿಶ್ವ ರ್ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನವನ್ನು ಕಲೆ ಹಾಕಿದ್ದಾರೆ. ಅಲ್ಲದೆ ಅತಿ ಹೆಚ್ಚು ರೇಟಿಂಗ್ ಪಾಯಿಂಟ್‌ ಗಳಿಸಿದ ದಾಖಲೆ ಸಹ ಇವರ ಹೆಸರಿನಲ್ಲಿದೆ. ಇವರು ಡೇವಿಡ್ ಮಲನ್ (919 ರೇಟಿಂಗ್ ಪಾಯಿಂಟ್‌) ದಾಖಲೆಯನ್ನು ಅಳಿಸಿ, 931 ಅಂಕವನ್ನು ಕಲೆ ಹಾಕಿ ಹೊಸ ಇತಿಹಾಸ ಬರೆದಿದ್ದಾರೆ.

ಏಷ್ಯಾ ಕಪ್‌ನಲ್ಲಿ ಸಾಧನೆ

ಏಷ್ಯಾ ಕಪ್‌ ಟಿ20 ಕ್ರಿಕೆಟ್‌ನಲ್ಲಿ ಇವರ ಅಮೋಘ ಆಟಕ್ಕೆ ಐಸಿಸಿ ಗರಿ ಸಂದಿದೆ. ಇವರು ಆಡಿದ 7 ಪಂದ್ಯಗಳಲ್ಲಿ 314 ರನ್‌ ಕಲೆ ಹಾಕಿದ್ದಾರೆ. ಅವರು ಈ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ಗಳನ್ನು ಒಂದೇ ಆವೃತ್ತಿಯಲ್ಲಿ ಕಲೆ ಹಾಕಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರಿಗೆ ಭಾರತದ ಕುಲ್‌ದೀಪ್ ಯಾದವ್ ಸಹ ಜಿದ್ದಿನ ಪೈಪೋಟಿ ನೀಡಿದ್ದರು. ಕುಲ್ದೀಪ್‌ ಸಹ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಅಭಿಷೇಕ್‌ ಶರ್ಮಾ ಟೀಮ್ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದಾರೆ. ಆಸ್ಟ್ರೇಲಿಯಾ ಪ್ರವಾಸ ಬೆಳೆಸಲಿರುವ ಟೀಮ್ ಇಂಡಿಯಾದ ಟಿ20 ತಂಡದ ಸದಸ್ಯರಾಗಿರುವ ಇವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Story first published: Thursday, October 16, 2025, 19:35 [IST]
Other articles published on Oct 16, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+