IND vs ENG 5th T20: ಭಾರತಕ್ಕೆ 150 ರನ್ ಭರ್ಜರಿ ಜಯ: ಅಭಿಷೇಕ್ ಆಲ್‌ರೌಂಡರ್ ಆಟ
ಅಭಿಷೇಕ್ ಶರ್ಮಾ ಆಲ್‌ರೌಂಡರ್ ಆಟ, ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಬಿಗುವಿನ ದಾಳಿಗೆ ಇಂಗ್ಲೆಂಡ್ ನಲುಗಿದೆ. ಮುಂಬೈನ ವಾಂಖೇಡೆ ಅಂಗಳದಲ್ಲಿ ಟೀಮ್ ಇಂಡಿಯಾ 150 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿದೆ. ಈ ಮೂಲಕ ಭಾರತ ಐದು ಪಂದ್ಯಗಳ ಟಿ20 ಸರಣಿಯನ್ನು 4-1ರಿಂದ ತನ್ನ ವಶಕ್ಕೆ ಪಡೆದಿದೆ. ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಅಭಿಷೇಕ್ ಶರ್ಮಾ ಅವರಿಗೆ ಪಂದ್ಯ ಶ್ರೇಷ್ಠ ಹಾಗೂ ಸರಣಿಯಲ್ಲಿ ಕ್ಲಾಸಿಕ್ ಬೌಲಿಂಗ್ ಪ್ರದರ್ಶನ ನೀಡಿದ ವರುಣ್ ಚಕ್ರವರ್ತಿಯವರಿಗೆ ಸರಣಿ ಶ್ರೇಷ್ಠ ಗರಿ ಸಂದಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 247 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್ 10.3 ಓವರ್‌ಗಳಲ್ಲಿ 97 ರನ್ ಕಲೆ ಹಾಕಿ ಸೋಲು ಕಂಡಿತು. ತವರಿನಲ್ಲಿ ಟೀಮ್ ಇಂಡಿಯಾದ ಟಿ20 ಸರಣಿಯ ಗೆಲುವಿನ ಯಾತ್ರೆ ಮುಂದುವರೆದಿದೆ. ಟೀಮ್ ಇಂಡಿಯಾ ದಾಖಲಿಸಿದ ಎರಡನೇ ಅತಿದೊಡ್ಡ ಅಂತರದ ಗೆಲುವು ಇದಾಗಿದೆ.

ಆರ್‌ಸಿಬಿ ಆಟಗಾರರ ಡಬಲ್ ಡಿಜಿಟ್ ಸಾಧನೆ
ದಾಖಲೆಯ ಮೊತ್ತವನ್ನು ಚೇಸ್ ಮಾಡಿದ ಇಂಗ್ಲೆಂಡ್ ತಂಡದ ಬ್ಯಾಟರ್‌ಗಳು ನೆಲಕಚ್ಚಿ ಬ್ಯಾಟ್ ಮಾಡುವಲ್ಲಿ ವಿಫಲರಾದರು. ಸ್ಟಾರ್ ಆಟಗಾರರು ಬಿಗುವಿನ ದಾಳಿಯನ್ನು ಎದುರಿಸುವಲ್ಲಿ ಹಿಂದೆ ಬಿದ್ದರು. ಫಿಲ್ ಸಾಲ್ಟ್ ಹಾಗೂ ಜಾಕಬ್ ಬೇತೆಲ್ ಇವರಿಬ್ಬರನ್ನು ಹೊರತು ಪಡಿಸಿದರೆ ಉಳಿದೆಲ್ಲ ಬ್ಯಾಟರ್‌ಗಳು ಠುಸ್ ಪಟಾಕಿ ಆದರು. ಜೊತೆಯಾಟಗಳು ಬಾರದೇ ಇರುವುದು ಇಂಗ್ಲೆಂಡ್ ತಂಡವನ್ನು ಬಹುವಾಗಿ ಕಾಡಿತು. ಇಂಗ್ಲೆಂಡ್ ತಂಡದ ಪರ ಫಿಲ್ ಸಾಲ್ಟ್ 23 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಾಯದಿಂದ 55 ರನ್ ಬಾರಿಸಿ ಔಟ್ ಆದರು. ಬೇತೆಲ್ 10 ರನ್ ಬಾರಿಸಿದರು.
ಶಮಿ ಮಿಂಚು
ಮೊಹಮ್ಮದ್ ಶಮಿ ತಾವು ಚಾಂಪಿಯನ್ಸ್ ಟ್ರೋಫಿಗೆ ಫುಲ್ ಫಿಟ್ ಆಗಿ ಇರುವುದಾಗಿ ಸಾಬೀತು ಪಡಿಸಿದರು. ಬೆನ್ ಡಕೆಟ್, ಆದೀಲ್ ರಶೀದ್, ಮಾರ್ಕ್ ವುಡ್ ಅವರ ವಿಕೆಟ್ ಪಡೆದ ಶಮಿ ಅಬ್ಬರಿಸಿದರು. ವರುಣ್ ಚಕ್ರವರ್ತಿ, ಶಿವಂ ದುಬೆ, ಅಭಿಷೇಕ್ ಶರ್ಮಾ ತಲಾ ಎರಡು ವಿಕೆಟ್ ಕಬಳಿಸಿದರು.
2ನೇ ವಿಕೆಟ್‌ಗೆ ಶತಕದ ಜೊತೆಯಾಟ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಸಾಧಾರಣವಾಗಿತ್ತು. ಆರಂಭಿಕ ಸಂಜು ಸ್ಯಾಮ್ಸನ್ 16 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಎರಡನೇ ವಿಕೆಟ್‌ಗೆ ಅಭಿಷೇಕ್ ಶರ್ಮಾ ಹಾಗೂ ತಿಲಕ್ ವರ್ಮಾ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ತಿಲಕ್ ವರ್ಮಾ 24 ರನ್‌ಗಳಿಗೆ ಆಟ ಮುಗಿಸಿದರು.

ಅಭಿಷೇಕ್ ಶತಕ
ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಭಿಷೇಕ್ ಶರ್ಮಾ ಟೀಮ್ ಇಂಡಿಯಾಕ್ಕೆ ಆಧಾರವಾದರು. ಇವರು 54 ಎಸೆತಗಳಲ್ಲಿ 7 ಬೌಂಡರಿ, 13 ಸಿಕ್ಸರ್‌ಗಳನ್ನು ಒಳಗೊಂಡಂತೆ 135 ರನ್ ಬಾರಿಸಿ ಅಬ್ಬರಿಸಿದರು. ಇವರ ಈ ಸ್ಪೋಟಕ ಆಟದಲ್ಲಿ ಹಲವು ದಾಖಲೆಗಳು ನಿರ್ಮಾಣ ಆದವು. ಶಿವಂ ದುಬೆ 30 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications