For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ವೃತ್ತಿ ಜೀವನದ ಅತಿ ದೊಡ್ಡ ಹಿನ್ನಡೆಗೆ ಗ್ರೇಗ್ ಚಾಪೆಲ್ ಒಬ್ಬರೇ ಕಾರಣವಲ್ಲ: ಸೌರವ್ ಗಂಗೂಲಿ

Absolute Injustice, Wont Blame Greg Chappell Alone - Sourav Ganguly

ಟೀಮ್ ಇಂಡಿಯಾ ಮಾಜಿ ನಾಯಕ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟೀಮ್ ಇಂಡಿಯಾ ಕಂಡ ಅತ್ಯುತ್ತಮ ನಾಯಕ ಎಂದು ಖ್ಯಾತರಾಗಿದ್ದಾರೆ. ಆದರೆ ವೃತ್ತಿ ಜೀವನದಲ್ಲಿ ಏರುಮುಖದಲ್ಲಿ ಸಾಗುತ್ತಿದ್ದ ಗಂಗೂಲಿ ಹಠಾತ್ತಾಗಿ ಬಹುದೊಡ್ಡ ಆಘಾತದ ಸಂದರ್ಭವನ್ನು ಎದುರಿಸಿದ್ದರು. ಈ ಬಗ್ಗೆ ಗಂಗೂಲಿ ಮನಬಿಚ್ಚಿ ಮಾತನಾಡಿದ್ದಾರೆ.

2003ರ ವಿಶ್ವಕಪ್‌ನಲ್ಲಿ ಫೈನಲ್‌ಗೇರಿದರೂ ಭಾರತ ತಂಡಕ್ಕೆ ವಿಶ್ವಕಪ್ ಎತ್ತಿಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೆ ಆ ಕನಸನ್ನು 2007ರಲ್ಲಿ ಪೂರೈಸಿಕೊಳ್ಳಬೇಕು ಎಂದು ಸೌರವ್ ಗಂಗೂಲಿ ದೃಢವಾಗಿ ಅಂದುಕೊಂಡಿದ್ದರಂತೆ. ಆದರೆ ಕೋಚ್ ಆಗಿ ಬಂದ ಗ್ರೇಗ್ ಚಾಪೆಲ್ ನಿರ್ಧಾರಗಳು ಗಂಗೂಲಿ ವೃತ್ತಿ ಬದುಕಿಗೆ ಆಘಾತವನ್ನು ನೀಡಿತ್ತು. 2005-06ರ ಋತುವಿನಲ್ಲಿ ಸೌರವ್ ಗಂಗೂಲಿ ತಂಡದಿಂದಲೇ ಹೊರಬಿದ್ದಿದ್ದರು.

ಗ್ರೇಗ್ ಚಾಪೆಲ್ ಮಾತ್ರವೇ ಕಾರಣವಲ್ಲ

ಗ್ರೇಗ್ ಚಾಪೆಲ್ ಮಾತ್ರವೇ ಕಾರಣವಲ್ಲ

ನಾಯಕನಾಗಿದ್ದ ಸೌರವ್ ಗಂಗೂಲಿಯನ್ನು ತಂಡದಿಂದಲೇ ಹೋರಗಿಡಲಾಗಿತ್ತು. ಇದನ್ನು ಗಂಗೂಲಿ ತನ್ನ ವೃತ್ತಿ ಜೀವನದ ಬಹುದೊಡ್ಡ ಹಿನ್ನೆಡೆಯೆಂದು ವಿವರಿಸಿದ್ದಾರೆ."ಅದೊಂದು ಸಂಪೂರ್ಣ ಅನ್ಯಾಯ ಎಂದು ಕರೆದಿರುವ ಗಂಗೂಲಿ ಅದಕ್ಕೆ ಸಾರ್ವತ್ರಿಕವಾಗಿ ಅಭಿಪ್ರಾಯವಿರುವಂತೆ ಗ್ರೇಗ್ ಚಾಪೆಲ್ ಮಾತ್ರವೇ ಕಾರಣವಲ್ಲ ಎಂದಿದ್ದಾರೆ.

2007ರಲ್ಲಿ ವಿಶ್ವಕಪ್ ಗೆಲ್ಲುವ ಕನಸು ಕಂಡಿದ್ದೆ

2007ರಲ್ಲಿ ವಿಶ್ವಕಪ್ ಗೆಲ್ಲುವ ಕನಸು ಕಂಡಿದ್ದೆ

ನಾನು ನಾಯಕನಾಗಿ 2007ರ ವಿಶ್ವಕಪ್‌ಅನ್ನು ಭಾರತಕ್ಕೆ ಗೆಲ್ಲಿಸಿಕೊಡಬೇಕು ಎಂಬ ಕನಸನ್ನು ಕಂಡಿದ್ದೆ. ಅದಕ್ಕೂ ಹಿಂದಿನ ವಿಶ್ವಕಪ್‌ಅನ್ನು ಫೈನಲ್ ಪಂದ್ಯದಲ್ಲಿ ನಾವು ಸೋತಿದ್ದೆವು. ಇನ್ನೂ ಕಾರಣವೇನೆಂದರೆ ತಂಡ ತುಂಬಾ ಚೆನ್ನಾಗಿ ಪ್ರದರ್ಶನವನ್ನು ನೀಡುತ್ತಿತ್ತು. ಕಳೆದ ಐದು ವರ್ಷದಲ್ಲಿ ಭಾರತ ಮಾತ್ರವಲ್ಲದೆ ವಿದೇಶದಲ್ಲಿ ಅದ್ಭುತವಾಗಿ ತಂಡದ ಪ್ರದರ್ಶನವಿತ್ತು. ಆದರೆ ದಿಢೀರ್ ಆಗಿ ಜಿಂಬಾಬ್ವೆ ಪ್ರವಾಸ ಮುಗಿಸಿ ತವರಿಗೆ ವಾಪಾಸಾದಾಗ ನನ್ನನ್ನು ತಂಡದಿಂದಲೇ ಕೈಬಿಡಲಾಗಿತ್ತು ಎಂದು ಬಂಗಾಳದ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಚಾಪೆಲ್ ಒಬ್ಬರನ್ನೇ ದೂಷಿಸಲ್ಲ

ಚಾಪೆಲ್ ಒಬ್ಬರನ್ನೇ ದೂಷಿಸಲ್ಲ

ನನ್ನನ್ನು ತಂಡದಿಂದ ಹೊರಗಿಡಲು ಗ್ರೇಗ್ ಚಾಪೆಲ್ ಒಬ್ಬರನ್ನೇ ಕಾರಣ ಎಂದು ದೂಷಿಸಲ್ಲ. ಆದರೆ ಅವರಿಂದಲೇ ಅದು ಆರಂಭವಾಯಿತು ಎಂದು ಯಾವುದೇ ಅನುಮಾನವಿಲ್ಲ. ಅವರು ನನ್ನ ವಿರುದ್ಧ ಮಂಡಳಿಗೆ ಈ ಮೇಲ್ ಕಳುಹಿಸಿದ್ದರು. ಬಳಿಕ ಅದು ಬಹಿರಂಗಗೊಂಡಿತ್ತು. ತಂಡವೆಂಬುದು ಕುಟುಂಬದಂತಿರುತ್ತದೆ.ಅಲ್ಲೂ ಕೆಲ ಭಿನ್ನಾಭಿಪ್ರಾಯಗಳು ಇರುತ್ತದೆ. ಆದರೆ ಅದನ್ನು ಮಾತಿನ ಮೂಲಕವೇ ಬಗೆಹರಿಸಬಹುದಾಗಿರುತ್ತದೆ. ಕೋಚ್ ಆಗಿ ಇದೇ ರೀತಿಯಲ್ಲಿ ಆಡಬೇಕು ಎಂದು ಬಯಸಿದ್ದರೆ ಅದನ್ನು ನನ್ನ ಬಳಿಯೇ ಬಂದು ಹೇಳಬೇಕಿತ್ತು ಎಂದು ಗಂಗೂಲಿ ಹೇಳಿದ್ದಾರೆ.

ಉಳಿದವರು ನಿರಪರಾಧಿಗಳಲ್ಲ

ಉಳಿದವರು ನಿರಪರಾಧಿಗಳಲ್ಲ

"ತನ್ನನ್ನು ತಂಡದಿಂದ ಹೊರಗಿಟ್ಟ ಪ್ರಕರಣದಲ್ಲಿ ಇತರರು ನಿರಪರಾಧಿಗಳಲ್ಲ. ಆಯ್ಕೆಯಲ್ಲಿ ಭಾಗಿಯಾಗದ ವಿದೇಶಿ ತರಬೇತುದಾರನ ಹೇಳಿಕೆಯೊಂದರ ಕಾರಣದಿಂದಲೇ ಭಾರತೀಯ ನಾಯಕನನ್ನು ಕೈಬಿಡಲು ಸಾಧ್ಯವಿಲ್ಲ. ಇಡೀ ವ್ಯವಸ್ಥೆಯ ಬೆಂಬಲವಿಲ್ಲದೆ ಇದು ಸಾಧ್ಯವಿಲ್ಲ ಎಂದು ನನಗೆ ಅರ್ಥವಾಗಿತ್ತು. ಎಲ್ಲರೂ ಈ ಯೋಜನೆಯಲ್ಲಿ ಭಾಗಿಯಾಗಿದ್ದರು. ಆದರೆ ನಾನು ಒತ್ತಡದಲ್ಲಿ ಕುಸಿಯಲಿಲ್ಲ. ನನ್ನ ಮೇಲಿನ ವಿಶ್ವಾಸವನ್ನು ನಾನು ಕಳೆದುಕೊಳ್ಳಲಿಲ್ಲ"ಎಂದು ಗಂಗೂಲಿ ಹೇಳಿದ್ದಾರೆ.

Story first published: Friday, July 10, 2020, 17:05 [IST]
Other articles published on Jul 10, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+