For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಆತನ ಬ್ಯಾಟಿಂಗ್ ನೋಡುವುದೇ ಸಂಭ್ರಮ ಎಂದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ

Absolute Joy To Watch Rohit Sharma In Good Form: Graeme Swann

ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಬಗ್ಗೆ ಹೊಗಳಿಕೆಯ ಸುರಿಮಳೆಗೈದಿದ್ದಾರೆ. ರೋಹಿತ್ ಶರ್ಮಾ ಉತ್ತಮ ಲಯದಲ್ಲಿದ್ದಾಗ ಆತನ ಬ್ಯಾಟಿಂಗ್ ವೀಕ್ಷಿಸುವುದೇ ಒಂದು ಆನಂದ ಎಂದು ಗ್ರೇಮ್ ಸ್ವಾನ್ ಬಣ್ಣಿಸಿದ್ದಾರೆ. ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವಿನ ಬಳಿಕ ಸ್ವಾನ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ರೋಹಿತ್ ಶರ್ಮಾ ಕಳೆದ 5-10 ವರ್ಷಗಳ ಹಿಂದೆ ಇದ್ದ ರೀತಿಯಲ್ಲಿ 'ಸೂಪರ್ ಸ್ಲಿಮ್' ಆಗಿ ಈಗ ಇಲ್ಲ. ಆದರೂ ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದಾರೆ ಎಂದು ಶರ್ಮಾ ಪ್ರದರ್ಶನದ ಬಗ್ಗೆ ಸ್ವಾನ್ ಆಶ್ವರ್ಯವನ್ನು ವ್ಯಕ್ತಪಡಿಸಿದ್ದಾರೆ.

ಕಿಂಗ್ಸ್ ಇಲವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ 5000 ರನ್ ಗಳಿಸಿದ ಈ ವಿಶೇಷ ಸಾಧನೆ ಮಾಡಿದವರ ಪಟ್ಟಿಗೆ ಸೇರ್ಪಡೆಗೊಂಡರು. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಉತ್ತಮ ಆರಂಭವನ್ನು ಪಡೆದುಕೊಂಡಿರಲಿಲ್ಲ. ಆದರೆ ಇಶಾನ್ ಕಿಶನ್ ಜೊತೆ ಸೇರಿಕೊಂಡ ರೋಹಿತ್ ಶರ್ಮಾ ತಂಡವನ್ನು ಕುಸಿತದಿಂದ ಪಾರು ಮಾಡಿದ್ದು ಮಾತ್ರವಲ್ಲ ಅಮೂಲ್ಯ 70 ರನ್‌ಗಳ ಕೊಡುಗೆಯನ್ನು ನೀಡಿದರು.

ಟೂರ್ನಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ರೋಹಿತ್ ಶರ್ಮಾ 2 ಅರ್ಧ ಶತಕವನ್ನು ಸಿಡಿಸಿದ ಸಾಧನೆಯನ್ನು ಮಾಡಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರೋಹಿತ್ ಶರ್ಮಾ 54 ಎಸೆತಗಳಲ್ಲಿ 80 ರನ್ ಬಾರಿಸಿದ್ದರು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ಕೆಕೆಆರ್ ವಿರುದ್ಧ ಭರ್ಜರಿ ಗೆಲುವನ್ನು ಪಡೆದುಕೊಂಡಿತ್ತು.

ರೋಹಿತ್ ಶರ್ಮಾ ಈಗ ಹಿರಿಯ ಆಟಗಾರನಾಗಿದ್ದಾರೆ. ಅವರ ಜೊತೆ ಆಡುತ್ತಿರುವ ಕಿರಿಯ ಆಟಗಾರರು ರೋಹಿತ್ ಶರ್ಮಾ ಅವರ ಪೋಸ್ಟರ್‌ಗಳನ್ನು ಗೋಡೆಗೆ ಅಂಟಿಸಿಕೊಂಡು ಬೆಳೆದುಬಂದವರು. ಈಗ ಅವರು ರೋಹಿತ್ ಶರ್ಮಾ ಜೊತೆಗೆ ಆಡಲು ಇಳಿಯುತ್ತಿದ್ದಾರೆ. ಆದರೆ ಈಗಲೂ ರೋಹಿತ್ ಶರ್ಮಾ ಅವರ ಆಟವನ್ನು ನೋಡುವುದು ಅತ್ಯಂತ ಆನಂದದ ಸಂಗತಿಯಾಗಿದೆ ಎಂದು ಸ್ವಾನ್ ಹೇಳಿದ್ದಾರೆ.

Story first published: Friday, October 2, 2020, 10:32 [IST]
Other articles published on Oct 2, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+