ಏಷ್ಯಾ ಕಪ್ ಅಂಡರ್ 19 ಕ್ರಿಕೆಟ್: ರೋಚಕ ಗೆಲುವು ಪಡೆದ ಭಾರತ ಫೈನಲ್‌ಗೆ

ಢಾಕಾ, ಅಕ್ಟೋಬರ್ 4: ಎಸಿಸಿ ಅಂಡರ್ 19 ಏಷ್ಯಾ ಕಪ್ ಕ್ರಿಕೆಟ್‌ನಲ್ಲಿ ಭಾರತದ ತರುಣರ ಪಡೆ ಫೈನಲ್ ಪ್ರವೇಶಿಸಿದೆ.
ಗುರುವಾರ ನಡೆದ ಸೆಮಿಫೈನಲ್ಸ್‌ನಲ್ಲಿ ಭಾರತ, ಬಾಂಗ್ಲಾದೇಶದ ವಿರುದ್ಧ ಎರಡು ರನ್‌ಗಳ ರೋಚಕ ಗೆಲುವು ಸಾಧಿಸಿದೆ.
ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದ ಅಂಡರ್ 19 ತಂಡಗಳು ಶುಕ್ರವಾರ ನಡೆಯಲಿರುವ ಎರಡನೆಯ ಸೆಮಿಫೈನಲ್ಸ್‌ನಲ್ಲಿ ಸೆಣಸಲಿದ್ದು, ಗೆದ್ದ ತಂಡ ಪ್ರಶಸ್ತಿಗಾಗಿ ಭಾರತವನ್ನು ಎದುರಿಸಲಿದೆ.
ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಭಾರತ, ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಮುಗ್ಗರಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಪ್ರಭ್ ಸಿಮ್ರಾನ್ ಸಿಂಗ್ ನೇತೃತ್ವದ ಪಡೆ ಕೇವಲ 172 ರನ್‌ಗಳಿಗೆ ಆಲೌಟ್ ಆಯಿತು.
ಸುಲಭದ ಗುರಿ ಬೆನ್ನತ್ತಿದ ಬಾಂಗ್ಲಾದೇಶ ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿದರೂ, ಬಳಿಕ ಮರು ಹೋರಾಟ ನೀಡಿತು. ಇದರಿಂದ ಭಾರತ ಸೋಲು ಭೀತಿಗೆ ಒಳಗಾಗಿತ್ತು. ಗೆಲುವಿಗೆ ಕೇವಲ ಮೂರು ರನ್ ಬೇಕಿದ್ದಾಗ ನಾಲ್ಕು ಎಸೆತಗಳು ಇರುವಾಗಲೇ ಕೊನೆಯ ಬ್ಯಾಟ್ಸ್‌ಮನ್ ಮಿನ್ಹಜುರ್ ರಹಮಾನ್ ರನ್ ಕದಿಯುವ ಆತುರದಲ್ಲಿ ರನೌಟ್ ಆದರು.
ಭಾರತದ ಪರ ಯಶಸ್ವಿ ಜೈಸ್ವಾಲ್ 37, ಅನುಜ್ ರಾವತ್ 35, ಆಯುಶ್ ಬದೋನಿ 28 ರನ್ ಗಳಿಸಿ ಆಸರೆಯಾದರೆ, ಕೊನೆಯಲ್ಲಿ ಅಜಯ್ ಗಂಗಾಪುರಂ 36 ರನ್‌ಗಳ ಮಹತ್ವದ ಕಾಣಿಕೆ ನೀಡಿದರು. ಇದರಿಂದಾಗಿ ಭಾರತ 49.3 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತು.
ಗುರಿ ಬೆನ್ನತ್ತಿದ ಬಾಂಗ್ಲಾದೇಶ ಒಂದು ಹಂತದಲ್ಲಿ 65 ರನ್‌ಗೆ 5 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಶಮಿಮ್ ಹುಸೇನ್ (59) ಮತ್ತು ಅಕ್ಬರ್ ಅಲಿ (45) ಉತ್ತಮ ಜತೆಯಾಟ ನೀಡಿ ಚೇತರಿಕೆ ಕೊಟ್ಟರು. ಬಳಿಕ ಭಾರತದ ಬೌಲರ್‌ಗಳು ತಿರುಗೇಟು ನೀಡಿದರು.
ಭಾರತದ ಪರ ಮೋಹಿತ್ ಜಾಂಗ್ರಾ ಮತ್ತು ಸಿದ್ಧಾರ್ಥ್ ದೇಸಾಯಿ ತಲಾ ಮೂರು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications