ಫೆ.21 ರಿಂದ ಆಚಾರ್ಯ ಮಾಧ್ಯಮ ಕ್ರಿಕೆಟ್ ಹಬ್ಬ
ಬೆಂಗಳೂರು, ಫೆ.20: ಆಚಾರ್ಯ ಇನ್ಸ್ ಸ್ಟಿಟ್ಯೂಟ್ ಸಂಸ್ಥೆ ವಾರ್ಷಿಕ 'ಆಚಾರ್ಯ ಹಬ್ಬ' ದ ಅಂಗವಾಗಿ ಮಾಧ್ಯಮ ವಲಯಕ್ಕಾಗಿ ವಿಶೇಷ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ.. ಒನ್ಇಂಡಿಯಾ ಈ ಟೂರ್ನಮೆಂಟ್ ನ ಅಧಿಕೃತ ಆನ್ ಲೈನ್ ಮೀಡಿಯಾ ಪಾರ್ಟನರ್ ಆಗಿದೆ.
ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಮಾಧ್ಯಮ ಸಂಸ್ಥೆಗಳು ಈ ಕ್ರಿಕೆಟ್ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಜನಪ್ರಿಯತೆಯನ್ನು ಹೆಚ್ಚಿಸಿವೆ. ಈ ಬಾರಿ ಕೂಡಾ 15ಕ್ಕೂ ಅಧಿಕ ಪಂದ್ಯಗಳನ್ನು ವೆಬ್ ಲಿಂಕ್ ಮೂಲಕ ನೇರ ಪ್ರಸಾರ ಮಾಡಲು ಆಯೋಜಕರು ಉದ್ದೇಶಿಸಿದ್ದಾರೆ. ಆಪಲ್ ಐಸ್ಟೋರ್ , ಗೂಗಲ್ ಪ್ಲೇ ನಲ್ಲಿ CricHQ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡು ಕೂಡಾ ಲೈವ್ ವೀಕ್ಷಣೆ ಮಾಡಬಹುದು. [ಬೆಂಗಳೂರಿನ ದೊಡ್ಡ ಕಾಲೇಜ್ ಫೆಸ್ಟ್ :ಆಚಾರ್ಯ ಹಬ್ಬ]

ಪ್ರತಿ ಪಂದ್ಯಗಳಲ್ಲಿ 8 ಓವರ್ ಗಳಿರುತ್ತದೆ. ಪ್ರತಿ ಬೌಲರ್ ಗೆ 2 ಓವರ್ ಗರಿಷ್ಠ ಬೌಲಿಂಗ್ ಮಾಡಬಹುದಾಗಿದೆ. ಕಾರ್ಪೋರೇಟ್ ಸಂಸ್ಥೆಗಳು ಹಾಗೂ ಮಾಧ್ಯಮ ಸಂಸ್ಥೆ ಕ್ರಿಕೆಟ್ ಜರ್ಸಿ ಧರಿಸಿ ಆಡಬೇಕಾಗುತ್ತದೆ. ಪಂದ್ಯದ ಸಂದರ್ಭದಲ್ಲಿ ಮಿನಿರಲ್ ವಾಟರ್ ಹಾಗೂ ಲಘು ಉಪಹಾರ ನೀಡಲಾಗುತ್ತದೆ. [ಸಂಭ್ರಮದಿಂದ ನಲಿದಾಡಿದ ಆಚಾರ್ಯ ಹಬ್ಬ 2014]
ಫೆ.21, 22, 28 ಹಾಗೂ ಮಾರ್ಚ್ 1, 2015ರಂದು ಪಂದ್ಯಾವಳಿ ನಡೆಯಲಿದೆ. ಆಚಾರ್ಯ ವಿದ್ಯಾಸಂಸ್ಥೆಯ ಶ್ರೀಮತಿ ನಾಗರತ್ನಮ್ಮ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ. ಈ ಬಾರಿ ಕೂಡಾ ಮ್ಯಾಚ್ ಅಫ್ ದಿ ಮ್ಯಾಚ್, ಶ್ರೇಷ್ಠ ಫೀಲ್ಡರ್, ಶ್ರೇಷ್ಠ ಬೌಲರ್, ಶ್ರೇಷ್ಠ ಬ್ಯಾಟ್ಸ್ ಮನ್ ಪ್ರಶಸ್ತಿ ನೀಡಲಾಗುತ್ತದೆ.
ಟೂರ್ನಮೆಂಟ್ ಗೆಲ್ಲುವ ತಂಡಕ್ಕೆ ವಿಜೇತರ ಟ್ರೋಫಿ ಹಾಗೂ 40,000 ರು. ನಗದು ನೀಡಲಾಗುತ್ತದೆ. ರನ್ನರ್ ಅಪ್ ತಂಡಕ್ಕೆ 30,000 ರು. ಹಾಗೂ ರನ್ನರ್ ಅಪ್ ಟ್ರೋಫಿ ಲಭಿಸುತ್ತದೆ.
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications