Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟ್ ಸೌತ್‌ ಆಫ್ರಿಕಾದ ಹಂಗಾಮಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬೆರೆಸ್‌ಫೋರ್ಡ್

Acting President Of Cricket South Africa Resigns

ಕ್ರಿಕೆಟ್ ದಕ್ಷಿಣ ಆಫ್ರಿಕಾದ ಹಂಗಾಮಿ ಅಧ್ಯಕ್ಷರಾಗಿದ್ದ ಬೆರೆಸ್ ಫೋರ್ಡ್ ವಿಲಿಯಮ್ಸ್ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಕ್ರಿಕೆಟ್ ದಕ್ಷಿಣ ಆಫ್ರಿಕಾ ಇ ಸುದ್ದಿಯನ್ನು ಖಚಿತಪಡಿಸಿದ್ದು ತಕ್ಷಣದಿಂದಲೇ ಜಾರಿಗೆ ಬರುವಂತೆ ತಮ್ಮ ರಾಜೀನಾಮೆಯನ್ನು ಸಲ್ಲಿದ್ದಾರೆ ಎಂದು ತಿಳಿಸಿದೆ.

ವಿಲಿಯಮ್ಸ್ ಅವರು ಕ್ರಿಕೆಟ್ ಬಗ್ಗೆ ತೀವ್ರ ಒಲವು ಹೊಂದಿದ್ದಾರೆ. ಕ್ರಿಕೆಟ್‌ಗೆ ಸೇವೆ ಸಲ್ಲಿಸಲು ಇದು ಅತ್ಯುತ್ತಮ ಸಂದರ್ಭವಾಗಿದೆ. ಆಟದ ಮೇಲಿನ ಪ್ರೀತಿಯಿಂದಾಗಿ ವಿಲಿಯಮ್ಸ್ ಅವರು ರಾಜೀನಾಮೆ ನೀಡಿದ್ದಾರೆ ಎಂದು ಸಿಎಸ್ಎ ಟ್ವಿಟ್ಟರ್‌ನಲ್ಲಿ ಸ್ಪಷ್ಟಪಡಿಸಿದೆ.

ಸಿಎಸ್ಎ ಸದಸ್ಯರ ಮಂಡಳಿ ಮತ್ತು ಮಂಡಳಿಯ ಸದಸ್ಯರಾದ ಜಾನ್ ಮೊಗೊಡಿ, ಏಂಜೆಲೊ ಕ್ಯಾರೊಲಿಸ್ಸೆನ್, ಡೊನೊವನ್ ಮೇ, ಮತ್ತು ಟೆಬೊಗೊ ಸಿಕೊ ಕೂಡ ಮಂಡಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಕ್ರಿಕೆಟಿಂಗ್ ಸಂಸ್ಥೆ ಭಾನುವಾರ ದೃಢಪಡಿಸಿದೆ. ಹಾಗಿದ್ದರೂ ಎಲ್ಲಾ ನಾಲ್ಕು ಸದಸ್ಯರು ಸದಸ್ಯರ ಮಂಡಳಿಯ ಭಾಗವಾಗಿ ಉಳಿಯಲಿದ್ದಾರೆ.

ಶುಕ್ರವಾರ ಸಿಎಸ್‌ಎ ಪತ್ರಿಕಾಗೋಷ್ಠಿಯನ್ನು ನಡೆಸಿತ್ತು. ಆ ಮಾಧ್ಯಮ ಸಂವಾದದಲ್ಲಿ ಉಲ್ಲೇಖಿಸಿರುವಂತೆ, ಸಿಎಸ್ಎ ಮಂಡಳಿ ಈ ವಾರ ಸಭೆ ಸೇರಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗೆ ಉತ್ತಮ ಸ್ಥಾನ ನೀಡುವ ಕುರಿತಾಗಿ ಚರ್ಚೆಗಳನ್ನು ನಡೆಸಲಾಗಿತ್ತು. ಕ್ರಿಕೆಟ್‌ ಸೌತ್ ಆಫ್ರಿಕಾ ಮತ್ತು ಕ್ರಿಕೆಟ್‌ನ ಹಿತಾಸಕ್ತಿಗಾಗಿ ಇಗಿನ ಮಂಡಳಿ ಕೆಳಗಿಳಿಯಬೇಕಾಗುವ ಸಂದರ್ಭ ಬಂದರೆ ಮಂಡಳಿ ಹಾಗೆ ಮಾಡಲು ಸಿದ್ದವಿದೆ ಎಂದಿ ಬಾನುವಾರದ ಹೇಳಿಕೆಯಲ್ಲಿ ತಿಳಿಸಿದೆ

Story first published: Sunday, October 25, 2020, 18:37 [IST]
Other articles published on Oct 25, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+