Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲಾರ್ಡ್ಸ್ ಮೈದಾನದಲ್ಲಿ ಬ್ಯಾಟ್ ಬೀಸಲಿರುವ ನಮ್ಮ ಸುದೀಪ್!

ಬೆಂಗಳೂರು, ಮೇ 03: ಕನ್ನಡ ಚಲನಚಿತ್ರ ನಟ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ತಂಡ ಕರ್ನಾಟಕ ಬುಲ್ಡೋಜರ್ಸ್ ನಾಯಕ ಕಿಚ್ಚ ಸುದೀಪ್ ಅವರು ಬುಧವಾರದಂದು ಶುಭ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

ಕ್ರಿಕೆಟ್ ಕಾಶಿ/ಮೆಕ್ಕಾ ಎಂದೆಲ್ಲ ಕರೆಸಿಕೊಳ್ಳುವ ಇಂಗ್ಲೆಂಡಿನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಪ್ರತಿಷ್ಠಿತ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಪಾಲ್ಗೊಳ್ಳಲು ಕಿಚ್ಚ ಸುದೀಪ್ ಅವರಿಗೆ ಆಹ್ವಾನ ಬಂದಿದೆ.[ಕೆಪಿಎಲ್ 2016: ಯಾವ ತಂಡಕ್ಕೆ ಎಷ್ಟು ಮೊತ್ತ ಬಹುಮಾನ?]


Actor Kiccha Sudeep gets invitation from Lord's participate corporate Cricket Day


ಈ ಸಂತಸದ ಸುದ್ದಿಯನ್ನು ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ. ಲಾರ್ಡ್ಸ್ ಮೈದಾನ ನೋಡುವುದು, ಆಡುವುದು, ಕಾಲ ಕಳೆಯುವುದು ಕ್ರಿಕೆಟ್ ಆಟಗಾರರು, ಅಭಿಮಾನಿಗಳ ಬಯಕೆಯಾಗಿರುತ್ತದೆ. [ಕೆಪಿಎಲ್ : ಕಿಚ್ಚ ಸುದೀಪ್ ರಾಕ್ ಸ್ಟಾರ್ಸ್ ತಂಡ]



ಅಪ್ಪಟ ಕ್ರಿಕೆಟ್ ಪ್ರೇಮಿ ಹಾಗೂ ಪಾರ್ಟ್ ಟೈಮ್ ಆಟಗಾರರಾಗಿರುವ ಸುದೀಪ್ ಅವರು ಈಗ 'ಕಾರ್ಪೋರೇಟ್ ಕ್ರಿಕೆಟ್ ಡೇ' ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೇ 11, 2017ರಂದು ಈ ಕಾರ್ಯಕ್ರಮ ನಿಗದಿಯಾಗಿದೆ.

43 ವರ್ಷ ವಯಸ್ಸಿನ ಸುದೀಪ್ ಅವರು ಕರ್ನಾಟಕ ಬುಲ್ಡೋಜರ್ಸ್, ರಾಕ್ ಸ್ಟಾರ್ಸ್ ತಂಡದ ಪರ ಬಲಗೈ ಬ್ಯಾಟ್ಸ್ ಮನ್, ವಿಕೆಟ್ ಕೀಪರ್,ಕ್ಯಾಪ್ಟನ್ ಆಗಿ ಆಡಿರುವ ಅನುಭವ ಹೊಂದಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+