ಐಪಿಎಲ್ ಹೊಸ ಫ್ರಾಂಚೈಸಿಗೆ ಸೂಪರ್ ಸ್ಟಾರ್ ಮೋಹನ್ ಲಾಲ್ ಓನರ್?
ಹತ್ತು ಹಲವು ರೋಮಾಂಚಕ ಕ್ಷಣಗಳು, ಸತತ ಸೂಪರ್ ಓವರ್,ಯಾರ್ಕರ್, ಭರ್ಜರಿ ಸಿಕ್ಸರ್ ಗಳ ನಡುವೆ ಮರಳುಗಾಡಿನಲ್ಲಿ ಐಪಿಎಲ್ 2020 ಯಶಸ್ವಿಯಾಗಿದೆ. ಇದೇ ಖುಷಿಯಲ್ಲಿ ಇನ್ನು ನಾಲ್ಕು ತಿಂಗಳಲ್ಲೇ ಮತ್ತೆ ಐಪಿಎಲ್ ಹಬ್ಬ ಆಯೋಜಿಸಲು ಬಿಸಿಸಿಐ ಮುಂದಾಗಿದೆ.
ರೋಹಿತ್ ಶರ್ಮಾ ನೇತೃತ್ವದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತೆ ಪ್ರಶಸ್ತಿಯನ್ನು ಗೆದ್ದು ಐದನೇ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿದೆ. ಮೊದಲ ಬಾರಿಗೆ ಫೈನಲ್‌ನಲ್ಲಿ ಆಡಿದ ಖುಷಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಿಂತಿರುಗಿದೆ. ಮುಂದಿನ ಸೀಸನ್ ಪ್ರಾರಂಭದ ಬಗ್ಗೆ ಈಗಾಗಲೇ ಅನೇಕ ಸುದ್ದಿಗಳು ಬರುತ್ತಿವೆ.
ಜೊತೆಗೆ ಮುಂದಿನ ಸೀಸನ್ ನಲ್ಲಿ ಹೊಸ ತಂಡ ಯಾವ ರಾಜ್ಯ ಅಥವಾ ಯಾವ ನಗರದಿಂದ ಹೊರ ಬರಲಿದೆ ಎಂಬ ಕುತೂಹಲ ಮೂಡಿದೆ. ಫೈನಲ್ ಪಂದ್ಯ ವೀಕ್ಷಿಸಲು ಆಗಮಿಸಿದ್ದ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಹೊಸ ಫ್ರಾಂಚೈಸಿಯ ಓನರ್ ಆಗುತ್ತಾರೆ ಎಂಬ ಸುದ್ದಿ ಹಬ್ಬಿದೆ.
ಜೊತೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅಥವಾ ಅವರ ಸೋದರರು ಐಪಿಎಲ್ ತಂಡ ಹೊಂದಲು ಬಯಸಿದ್ದಾರೆ ಸುದ್ದಿಯಿದೆ. ಇತ್ತೀಚೆ ಶ್ರೀಲಂಕಾ ಲೀಗ್ ನಲ್ಲಿ ಇವರು ಹೂಡಿಕೆ ಮಾಡಿದ್ದಾರೆ. ಶಾರುಖ್ ಖಾನ್ ಜೂಹಿ ಚಾವ್ಲಾ, ಪ್ರೀತಿ ಜಿಂಟಾ ಈಗಾಗಲೇ ಐಪಿಎಲ್ ಫ್ರಾಂಚೈಸಿ ಜೊತೆ ಗುರುತಿಸಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಅವರು ಫ್ರಾಂಚೈಸಿ ವ್ಯವಹಾರದಿಂದ ದೂರ ಉಳಿದಿದ್ದಾರೆ.

ಬೈಜುಸ್ ಹಾಗೂ ಮೋಹನ್ ಲಾಲ್ ತಂಡ
ಮೊಬೈಲ್ ಅಪ್ಲಿಕೇಷನ್ ಕಂಪನಿ 'ಬೈಜುಸ್ ಹಾಗೂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಇಬ್ಬರು ಸದ್ಯಕ್ಕೆ ಹೊಸ ಫ್ರ್ಯಾಂಚೈಸಿಗಾಗಿ ಬಿಡ್ ಸಲ್ಲಿಸಲು ಮುಂದಾಗಿರುವ ಪ್ರತಿಸ್ಪರ್ಧಿಗಳಾಗಿದ್ದರೆ. ಆದರೆ ಯಾವ ರಾಜ್ಯ ಅಥವಾ ನಗರದಿಂದ ಫ್ರಾಂಚೈಸಿ ಬಯಸಿದ್ದಾರೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಬೈಜುಸ್ ಜೊತೆ ಸೇರಿ ಮೋಹನ್ ಲಾಲ್ ಅವರು ಒಂದೇ ಫ್ರಾಂಚೈಸಿಗೆ ಹೂಡಿಕೆ ಮಾಡಬಹುದು ಎಂಬ ಸುದ್ದಿಯೂ ಹಬ್ಬಿದೆ. ಈ ಕುರಿತಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಜೋರಾಗಿ ನಡೆದಿದೆ.

ಹರಾಜಿನಲ್ಲಿ ಹೊಸ ತಂಡವೊಂದು ಹಾಜರಾಗಲಿದೆ
2021ರ ಏಪ್ರಿಲ್-ಮೇ ತಿಂಗಳಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 14 ಆಯೋಜಿಸಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈಗಾಗಲೇ ಘೋಷಿಸಿದ್ದಾರೆ. ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಯಾವಾಗಲೂ ಡಿಸೆಂಬರ್ ನಲ್ಲಿ ನಡೆಯುತ್ತಿತ್ತು. ಆದರೆ ಈ ಬಾರಿ ಜನವರಿ 2021ರಲ್ಲಿ ನಡೆಯಲಿದೆ. ಈ ಬಾರಿಯ ಹರಾಜಿನಲ್ಲಿ ಹೊಸ ತಂಡವೊಂದು ಹಾಜರಾಗಲಿದೆ ಎಂಬುದು ಸದ್ಯದ ಕುತೂಹಲವಾಗಿದೆ.

ಯಾವ ರಾಜ್ಯ ಅಥವಾ ನಗರದಿಂದ ಹೊಸ ತಂಡ
ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕೇರಳದಿಂದ ಕೊಚ್ಚಿ ಟಸ್ಕರ್ಸ್, ಗುಜರಾತ್ ರಾಜ್ಯದಿಂದ ಗುಜರಾತ್ ಲಯನ್ಸ್, ಮಹಾರಾಷ್ಟ್ರದಿಂದ ಪುಣೆ ವಾರಿಯರ್ಸ್, ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡಗಳು ಐಪಿಎಲ್‌ನಲ್ಲಿ ಆಡಿವೆ. ಈ ಮೂರು ತಂಡಗಳಲ್ಲಿ ಒಂದಕ್ಕೆ ಮತ್ತೆ ಅವಕಾಶ ದೊರಕುವ ಸಾಧ್ಯತೆ ಇದೆ.

ತಂಡಗಳ ಹೆಸರು ಬದಲಾವಣೆಗೂ ಅವಕಾಶ
ಕೊಚ್ಚಿ ಟಸ್ಕರ್ಸ್ ತಂಡ 2011 ರ ಒಂದು ಐಪಿಎಲ್ ಸರಣಿಯಲ್ಲಿ ಮಾತ್ರವೇ ಆಡಿತು. ಪುಣೆ ವಾರಿಯರ್ಸ್ ತಂಡವು 2011 ರಿಂದ 2013 , ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡವು 2016 ರಿಂದ 2018, ಗುಜರಾತ್ ಲಯನ್ಸ್ 2016 ರಿಂದ 2018 ರ ವರೆಗೆ ಆಡಿತ್ತು. ಡೆಕ್ಕನ್ ಚಾರ್ಜರ್ಸ್ ತಂಡವು 2008 ರಿಂದ 2012ರ ತನಕ ಆಡಿತ್ತು. ನಂತರ ಇದೇ ತಂಡ ಸನ್‌ರೈಸರ್ಸ್ ಹೈದರಾಬಾದ್ ಆಗಿ ಬದಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications