ಟಿ20 ವಿಶ್ವಕಪ್ ತಂಡ ಆಯ್ಕೆ ಮಾಡಿದ ಬಾಲಿವುಡ್ ನಟ ಸುನಿಲ್ ಶೆಟ್ಟಿ : ಬಲಿಷ್ಠ ತಂಡದಲ್ಲಿ ಯಾರಿದ್ದಾರೆ ಯಾರಿಲ್ಲ!

ಕೊರೊನಾ ವೈರಸ್ ಕಾರಣದಿಂದಾಗಿ ಸಾಮಾಜಿಕ ಜಾಲತಾಣ ಈ ಹಿಂದೆ ಎಂದೂ ಇಲ್ಲದಷ್ಟು ಚಟುವಟಿಕೆಯಿಂದಿದೆ. ಲಾಕ್‌ಡೌನ್ ಕಾರಣದಿಂದಾಗಿ ಮನೆಗಳಲ್ಲೇ ಇರುವ ಜನರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಇದು ಸಾಮಾನ್ಯ ಜನರಿಗೆ ಮಾತ್ರವಲ್ಲ ಸೆಲೆಬ್ರಿಟಿಗಳೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಕಾಲ ಕಳೆಯುತ್ತಿದ್ದಾರೆ.
ಹೀಗೆ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಅನುಭವಗಳನ್ನು ಹೇಳಿಕೊಳ್ಳುವುದು, ಫೇವರೀಟ್ ಆಟಗಾರ, ರೋಲ್ ಮಾಡೆಲ್, ಕಠಿಣ ಬೌಲರ್, ಉತ್ತಮ ಪಾರ್ಟ್‌ನರ್ ಹೀಗೆ ಹಲವಾರು ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಜೊತೆಗೆ ಆಲ್‌ಟೈಮ್ ಫೇವರೀಟ್ ತಂಡಗಳನ್ನು ಕೂಡ ಅನೇಕ ಕ್ರಿಕೆಟಿಗರು ಹೆಸರಿಸಿದ್ದಾರೆ.
ಇದೇ ರೀತಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ತಮ್ಮ ನೆಚ್ಚಿನ ಟಿ20 ವಿಶ್ವಕಪ್ ತಂಡವನ್ನು ಹೆಸರಿಸಿದ್ದಾರೆ. ಸುನಿಲ್ ಶೆಟ್ಟಿ ಹೆಸರಿಸಿದ 14 ಆಟಗಾರರ ಟಿ20 ವಿಶ್ವಕಪ್ ತಂಡದಲ್ಲಿ ಯಾರೆಲ್ಲಾ ಅವಕಾಶ ಪಡೆದುಕೊಂಡಿದ್ದಾರೆ ಅನ್ನೋದನ್ನು ಮುಂದೆ ನೋಡೋಣ..

ಬಲಿಷ್ಠ ಟಾಪ್ ಆರ್ಡರ್ ಹೆಸರಿಸಿದ ಬಾಲಿವುಡ್ ಅಣ್ಣ!
ಇನ್ನಿಂಗ್ಸ್ ಆರಂಭಿಸಲು ರೋಹಿತ್ ಜೊತೆಗೆ ಕೆಎಲ್ ರಾಹುಲ್ ಅವರನ್ನು ಸುನಿಲ್ ಶೆಟ್ಟಿ ಆಯ್ಕೆ ಮಾಡಿಕೊಂಡಿದ್ದಾರೆ. ಮಂಗಳೂರು ಮೂಲದವರೇ ಆದ ರಾಹುಲ್ ಹಾಗೂ ಸುನಿಲ್ ಶೆಟ್ಟಿ ವೈಯಕ್ತಿಕವಾಗಿಯೂ ಆಪ್ತರಾಗಿದ್ದಾರೆ! ಚುಟುಕು ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಇತ್ತೀಚೆಗೆ ಮಿಂಚಿರುವ ರಾಹುಲ್ ಸುನಿಲ್ ಶೆಟ್ಟಿ ಮನಸ್ಸಿನಲ್ಲೂ ಆರಂಭಿಕಾಗಿಯೇ ಸೂಕ್ತ ಎನಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿಯನ್ನು ಕೂಡ ಅವರ ಮೂರನೇ ಕ್ರಮಾಂಕದಿಂದ ಬದಲಾವಣೆ ಮಾಡುವ ಮನಸು ಮಾಡಿಲ್ಲ ಸುನಿಲ್ ಶೆಟ್ಟಿ.

ಮಧ್ಯಮ ಕ್ರಮಾಂಕದಲ್ಲಿ ಯಾರೆಲ್ಲಾ?
ಟಿ20 ವಿಶ್ವಕಪ್‌ನ 14 ಆಟಗಾರರ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಜೊತೆಗೆ ವಿಕೆಟ್ ಕೀಪರ್ ಆಗಿ ಮಾಜಿ ನಾಯಕ ಧೋನಿ ಹೆಸರನ್ನು ಆಯ್ಕೆ ಮಾಡಿದ್ದಾರೆ. ಹೀಗಾಗಿ ಸುನಿಲ್ ಶೆಟ್ಟಿ ತಂಡದಲ್ಲಿ ರಿಷಭ್ ಪಂತ್ ಅವಕಾಶವನ್ನು ಪಡೆದುಕೊಂಡಿಲ್ಲ. ಇನ್ನು ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯಾ, ವಿಜಯ್ ಶಂಕರ್ ಮತ್ತು ರವೀಂದ್ರ ಜಡೇಜಾ ಕೂಡ ತಂಡದಲ್ಲಿದ್ದಾರೆ.

ಬೌಲಿಂಗ್ ವಿಭಾಗ
ಇಬ್ಬರು ಸ್ಪಿನ್ನರ್‌ಗಳು ಮತ್ತು ನಾಲ್ವರು ವೇಗಿಗಳನ್ನು ಸುನಿಲ್ ಶೆಟ್ಟಿ ಹೆಸರಿಸಿದ್ದಾರೆ. ಕುಲ್‌ದೀಪ್ ಯಾದವ್ ಮತ್ತು ಯುಜುವೇಂದ್ರ ಚಾಹಲ್ ಸ್ಪಿನ್ ವಿಭಾಗದಲ್ಲಿದ್ದರೆ ಬೂಮ್ರಾ, ಶಮಿ, ಭುವನೇಶ್ವರ್ ಕುಮಾರ್ ಜೊತೆಗೆ ದೀಪಕ್ ಚಾಹರ್ ಬಾಲಿವುಡ್ ನಟ ಸುನಿಲ್ ಶೆಟ್ಟಿಯವರ ವಿಶ್ವಕಪ್ ತಂಡದಲ್ಲಿ ಅವಕಾಶವನ್ನು ಪಡೆದುಕೊಂಡಿದ್ದಾರೆ

ಸುನಿಲ್ ಶೆಟ್ಟಿ ಹೆಸರಿಸಿದ ಸಂಪೂರ್ಣ ಟಿ20 ವಿಶ್ವಕಪ್ ತಂಡ
ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಎಂ.ಎಸ್.ಧೋನಿ, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ದೀಪಕ್ ಚಹರ್, ಭುವನೇಶ್ವರ್ ಕುಮಾರ್.

ಆಕಾಶ್‌ವಾಣಿಯಲ್ಲಿ ಸುನಿಲ್ ಶೆಟ್ಟಿ
ಸುನಿಲ್ ಶೆಟ್ಟಿ ಮಾಜಿ ಕ್ರಿಕೆಟಿಗ ವೀಕ್ಷಕವಿವರಣೆಕಾರ ಆಕಾಶ್ ಚೋಪ್ರಾ ನಡೆಸಿಕೊಡುವ ಆಕಾಶ್‌ವಾಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಈ ಟಿ20 ವಿಶ್ವಕಪ್ ತಂಡವನ್ನು ಹೆಸರಿಸಿದ್ದಾರೆ. ಸ್ವತಃ ಕ್ರಿಕೆಟ್ ಅಭಿಮಾನಿಯಾಗಿರುವ ಸುನಿಲ್ ಶೆಟ್ಟಿ ಸೆಲೆಬ್ರಿಟಿ ಕ್ರಿಕೆಟ್‌ನಲ್ಲಿ ಅಟಗಾರನಾಗಿಯೂ ಹಿಂದೆ ಪಾಲ್ಗೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications