ಜಸ್‌ಪ್ರೀತ್ ಬೂಮ್ರಾ ಮದುವೆ ಗಾಳಿ ಸುದ್ದಿಗೆ ಪ್ರತಿಕ್ರಿಯಿದ ಅನುಪಮಾ ತಾಯಿ

ನವದೆಹಲಿ: ಇತ್ತೀಚೆಗೆ ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಹೆಚ್ಚು ಸುದ್ದಿಯಲ್ಲಿದ್ದಾರೆ. ಅದು ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಕೆಲ ಪಂದ್ಯಗಳಿಂದ ಹೊರಗಿರುವುದಕ್ಕಷ್ಟೇ ಅಲ್ಲ, ಬೂಮ್ರಾ ಮದುವೆಯಾಗುತ್ತಿದ್ದಾರೆ ಎಂಬ ಗುಸು ಗುಸು ಕೂಡ ಕೇಳಿಬರುತ್ತಿವೆ.
ವರದಿಯೊಂದರ ಪ್ರಕಾರ, ಜಸ್‌ಪ್ರೀತ್ ಬೂಮ್ರಾ ಅವರು ಮದುವೆಯ ಸಿದ್ಧತೆಯಲ್ಲಿದ್ದಾರೆ. ಇದೇ ಕಾರಣಕ್ಕೆ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಕೆಲ ಪಂದ್ಯಗಳಲ್ಲಿ ಬೂಮ್ರಾ ಆಡದೆ ಮದುವೆ ಸಿದ್ಧತೆಯಲ್ಲಿ ತೊಡಗಿದ್ದರು ಎಂದು ಮೂಲವೊಂದು ಹೇಳಿತ್ತು.
ಜಸ್‌ಪ್ರೀತ್ ಮದುವೆಯ ಗಾಳಿಸುದ್ದಿಯಲ್ಲಿ ದಕ್ಷಿಣ ಭಾರತದ (ಮುಖ್ಯವಾಗಿ ಮಲಯಾಳಂ) ನಟಿ ಅನುಪಮಾ ಪರಮೇಶ್ವರನ್ ಹೆಸರು ಕೂಡ ಥಳುಕು ಹಾಕಿಕೊಂಡಿತ್ತು. ಕಾರಣ, ಬೂಮ್ರಾ ಮದುವೆಯಾಗುತ್ತಿರುವುದು ಅನುಪಮಾ ಅವರನ್ನೇ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ಅನುಪಮಾ ತಾಯಿಯೇ ಪ್ರತಿಕ್ರಿಯಿಸಿದ್ದಾರೆ.
'ಮನೋರಮಾ'ದೊಂದಿಗೆ ಮಾತನಾಡಿದ ಅನುಪಮಾ ತಾಯಿ ಸುನಿತಾ, ಅನುಪಮಾ ಅವರನ್ನು ಬೂಮ್ರಾ ವರಿಸುತ್ತಿದ್ದಾರೆ ಎಂಬ ಗಾಳಿಸುದ್ದಿಗಳ ವರದಿಯನ್ನು ತಳ್ಳಿಹಾಕಿದ್ದಾರೆ. ಬೂಮ್ರಾ ಮತ್ತು ಅನುಪಮಾ ಸಾಮಾಜಿಕ ಜಾಲತಾಣದಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡಲಾರಂಭಿದಾಗ ಈ ಗಾಳಿಸುದ್ದಿ ಶುರುವಾಗಿದೆಯಷ್ಟೇ. ಇಂಥ ಗಾಳಿ ಸುದ್ದಿಗಳನ್ನೆಲ್ಲಾ ನಮ್ಮ ಕುಟುಂಬ ಗಂಭೀರವಾಗಿ ಪರಿಗಣಿಸಿಲ್ಲ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications