IPL ಸರ್ವಕಾಲಿಕ ತಂಡ ಪ್ರಕಟಿಸಿದ ಗಿಲ್‌ಕ್ರಿಸ್ಟ್: ವಿರಾಟ್, ಗೇಲ್‌ಗೆ ಇಲ್ಲ ಸ್ಥಾನ
ಆಸ್ಟ್ರೇಲಿಯಾದ ಮಾಜಿ ಆಟಗಾರ ಆಂಡ್ ಗಿಲ್‌ಕ್ರಿಸ್ಟ್ ಆಲ್‌ಟೈಮ್ ಐಪಿಎಲ್ ಪ್ಲೇಯಿಂಗ್ ಇಲೆವೆನ್ ಘೋಷಣೆ ಮಾಡಿದ್ದಾರೆ. ಇವರ ಆಲ್ ಟೈಮ್ ತಂಡದಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಯುನಿರ್ವಸಲ್ ಬಾಸ್ ಖ್ಯಾತಿ ಕ್ರಿಸ್ ಗೇಲ್ ಅವರಿಗೆ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಹಾಗಿದ್ದರೆ ಗಿಲ್ ಕ್ರಿಸ್ಟ್ ಆಯ್ಕೆ ಮಾಡಿದ ತಂಡದಲ್ಲಿ ಯಾವೆಲ್ಲಾ ಆಟಗಾರರು ಸ್ಥಾನ ಪಡೆದಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಐಪಿಎಲ್ ವಿಜೇತ ತಂಡದ ನಾಯಕ ಗಿಲ್‌ಕ್ರಿಸ್ಟ್ ತಮ್ಮ ಸರ್ವಕಾಲಿಕ ಪ್ಲೇಯಿಂಗ್ ಇಲೆವೆನ್‌ನಲ್ಲಿ, ಲೀಗ್‌ನಲ್ಲಿ ಅತಿ ಹೆಚ್ಚು ರನ್, ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಸ್ಥಾನ ನೀಡಿಲ್ಲ. ಇನ್ನು ಅಚ್ಚರಿಯ ಸಂಗತಿ ಅಂದರೆ ಇವರ ತಂಡದಲ್ಲಿ ಐಪಿಎಲ್‌ನಲ್ಲಿ ವೇಗದ ಶತಕ ಬಾರಿಸಿದ ಸರದಾರ ಕ್ರಿಸ್ ಗೇಲ್‌ಗೂ ಸ್ಥಾನವಿಲ್ಲ. ಇವರಿಬ್ಬರೂ ಐಪಿಎಲ್‌ನಲ್ಲಿ ಅತಿ ಹೆಚ್ಚು ದಾಖಲೆಗಳನ್ನು ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ತಂಡದಲ್ಲಿ ಯಾರಿಗೆ ಸ್ಥಾನ?
ಗಿಲ್‌ಕ್ರಿಸ್ಟ್ ಪ್ರಕಟಿಸಿದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಡೇವಿಡ್ ವಾರ್ನರ್ ಹಾಗೂ ರೋಹಿತ್ ಶರ್ಮಾ ಅವರನ್ನು ಆರಂಭಿಕ ಆಟಗಾರರಾಗಿ ಸೇರಿಸಿಕೊಂಡಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಮಿಸ್ಟರ್ ಕನ್ಸಿಸ್ಟಂಟ್ ಎಂದೇ ಖ್ಯಾತಿ ಪಡೆದಿರುವ ಸುರೇಶ್ ರೈನಾ ಸ್ಥಾನ ಪಡೆದಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ 360 ಡಿಗ್ರಿ ಶಾಟ್‌ಗಳನ್ನು ಬಾರಿಸ ಬಲ್ಲ ಕಲೆಗಾರ ಸೂರ್ಯಕುಮಾರ್ ಯಾದವ್‌ಗೆ ಸ್ಥಾನ ಲಭಿಸಿದೆ. ಇನ್ನು ಆಲ್‌ರೌಂಡರ್ ರೂಪದಲ್ಲಿ ಕೀರನ್ ಪೋಲಾರ್ಡ್, ಸುನಿಲ್ ನರೈನ್ ಕಾಣಿಸಿಕೊಂಡಿದ್ದಾರೆ. ಇನ್ನು ಈ ತಂಡದ ನಾಯಕತ್ವವನ್ನು ಗಿಲ್‌ಕ್ರಿಸ್ಟ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಆಯ್ಕೆ ಮಾಡಿದ್ದಾರೆ.

ಗಿಲ್‌ಕ್ರಿಸ್ಟ್ ಪ್ರಕಟಿತ ತಂಡದಲ್ಲಿ ವೇಗದ ಬೌಲರ್‌ಗಳಾಗಿ ಯಾರ್ಕರ್ ಸ್ಪೇಷಲಿಸ್ಟ್‌ಗಳು ಸ್ಥಾನ ಪಡೆದಿದ್ದಾರೆ. ಶ್ರೀಲಂಕಾದ ಲಸಿತ್ ಮಲಿಂಗ್ ಹಾಗೂ ಜಸ್ಪ್ರಿತ್ ಬುಮ್ರಾ ಸ್ಥಾನ ಪಡೆದಿದ್ದಾರೆ. ಇನ್ನು ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ ಸಹ ಸ್ಥಾನ ಪಡೆದಿದ್ದಾರೆ. ಸ್ಪಿನ್ ಬೌಲರ್‌ಗಳ ರೂಪದಲ್ಲಿ ರವೀಂದ್ರ ಜಡೇಜಾ ಹಾಗೂ ಸುನಿಲ್ ನರೈನ್ ಸ್ಥಾನ ಪಡೆದಿದ್ದಾರೆ.
ಆಡಮ್ ಗಿಲ್‌ಕ್ರಿಸ್ಟ್ ಅವರ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್ : ಡೇವಿಡ್ ವಾರ್ನರ್, ರೋಹಿತ್ ಶರ್ಮಾ, ಸುರೇಶ್ ರೈನಾ, ಸೂರ್ಯ ಕುಮಾರ್ ಯಾದವ್, ಕೀರಾನ್ ಪೊಲಾರ್ಡ್, ಎಂಎಸ್ ಧೋನಿ (ನಾಯಕ), ಸುನಿಲ್ ನರೈನ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಲಸಿತ್ ಮಾಲಿಂಗ ಮತ್ತು ಭುವನೇಶ್ವರ್ ಕುಮಾರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications