ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೂ ಮುನ್ನ ಆಸ್ಟ್ರೇಲಿಯಾ ತಂಡದ ಕೋಚಿಂಗ್ ಸ್ಟಾಫ್‌ನಲ್ಲಿ ದೊಡ್ಡ ಬದಲಾವಣೆಯಾಗಿದೆ. ಭವಿಷ್ಯದಲ್ಲಿ ಆಸ್ಟ್ರೇಲಿಯಾ ವೇಗದ ಬೌಲರ್‌ಗಳನ್ನು ತಯಾರು ಮಾಡಲು ಕ್ರಿಕೆಟ್ ಆಸ್ಟ್ರೇಲಿಯಾ ಆರ್‌ಸಿಬಿ ಮಾಜಿ ಕೋಚ್‌ಗೆ ಹೊಸ ಜವಾಬ್ದಾರಿ ನೀಡಲಾಗಿದೆ. ಅನುಭವಿ ಆಡಮ್ ಗ್ರಿಫಿತ್ ಅವರನ್ನು ಹೊಸ ರಾಷ್ಟ್ರೀಯ ವೇಗದ ಬೌಲಿಂಗ್ ತರಬೇತುದಾರರನ್ನಾಗಿ ಕ್ರಿಕೆಟ್ ಆಸ್ಟ್ರೇಲಿಯಾ ನೇಮಿಸಿಕೊಂಡಿದೆ.
ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್ ಮತ್ತು ಪ್ಯಾಟ್ ಕಮ್ಮಿನ್ಸ್ ಅವರ ವಯಸ್ಸು 30 ದಾಟಿದೆ. ಆದ್ದರಿಂದ ಟೆಸ್ಟ್ ಕ್ರಿಕೆಟ್‌ನಂತಹ ದೊಡ್ಡ ಪಂದ್ಯಗಳಿಗೆ ವೇಗದ ಬೌಲರ್‌ಗಳನ್ನು ಸಿದ್ಧಪಡಿಸುವ ಕೆಲಸವನ್ನು ಗ್ರಿಫಿತ್‌ಗೆ ವಹಿಸಲಾಗುತ್ತಿದೆ.

46 ವರ್ಷದ ಆಡಮ್ ಗ್ರಿಫಿತ್ ಅವರು ಆಸ್ಟ್ರೇಲಿಯಾ ಪುರುಷರ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಮತ್ತು ಪ್ರಸ್ತುತ ಬೌಲಿಂಗ್ ಕೋಚ್ ಡೇನಿಯಲ್ ವೆಟ್ಟೋರಿ ಅವರೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ. ಆಡಮ್ ಗ್ರಿಫಿತ್ ಕ್ರಿಕೆಟ್ ಆಸ್ಟ್ರೇಲಿಯಾದ ರಾಷ್ಟ್ರೀಯ ತಂಡಗಳ ಮುಖ್ಯಸ್ಥ ಬೆನ್ ಆಲಿವರ್ ಅವರಿಗೆ ರಿಪೋರ್ಟ್ ಮಾಡಲಿದ್ದಾರೆ.
ಆಡಮ್ ಗ್ರಿಫಿತ್ ಅವರು ಕೋಚಿಂಗ್ ಅಪಾರ ಅನುಭವ ಹೊಂದಿದ್ದಾರೆ. ಅವರು ಪಶ್ಚಿಮ ಆಸ್ಟ್ರೇಲಿಯಾ ಮತ್ತು ಪರ್ತ್ ಸ್ಕಾರ್ಚರ್ಸ್‌ನ ಹಿರಿಯ ಸಹಾಯಕ ಕೋಚ್, ಟ್ಯಾಸ್ಮೆನಿಯಾದ ಕೋಚಿಂಗ್ ನಿರ್ದೇಶಕ, ಟ್ಯಾಸ್ಮೆನಿಯಾ ಟೈಗರ್ಸ್ ಮತ್ತು ಹೋಬರ್ಟ್ ಹರಿಕೇನ್ಸ್‌ನ ಹೆಡ್‌ಕೋಚ್ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿನ ಐಪಿಎಲ್ 2024ರ ಆವೃತ್ತಿ ವರೆಗೂ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗ್ರಿಫಿತ್ ಈ ಹಿಂದೆ 2012 ಮತ್ತು 2016 ರಲ್ಲಿ ದ್ವಿಪಕ್ಷೀಯ ಪ್ರವಾಸಗಳಲ್ಲಿ ಮತ್ತು ಇಂಗ್ಲೆಂಡ್‌ನಲ್ಲಿ ನಡೆದ 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಪುರುಷರ ತಂಡದ ಕೋಚಿಂಗ್ ಸ್ಟಾಫ್‌ನ ಭಾಗವಾಗಿದ್ದರು.
ಆ್ಯಡಮ್ ಗ್ರಿಫಿತ್ ಎಂದಿಗೂ ಆಸ್ಟ್ರೇಲಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲಿಲ್ಲ. ಆದಾಗ್ಯೂ, ಅವರಿಗೆ ಪ್ರಥಮ ದರ್ಜೆ ಮತ್ತು ಲಿಸ್ಟ್-ಎ ಕ್ರಿಕೆಟ್‌ನ ಅನುಭವವಿದೆ. ಅವರು 50 ಪ್ರಥಮ ದರ್ಜೆ ಪಂದ್ಯಗಳಲ್ಲಿ 169 ವಿಕೆಟ್‌ಗಳನ್ನು ಪಡೆದರೆ, ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಅವರು 54 ಪಂದ್ಯಗಳನ್ನು ಆಡಿದ್ದು, 63 ವಿಕೆಟ್‌ಗಳನ್ನು ಬಾರಿಸಿದ್ದಾರೆ. ಇದಲ್ಲದೆ, ಅವರು ಆಡಿರುವ 12 ಟಿ20 ಪಂದ್ಯಗಳಲ್ಲಿ 19 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
ಪ್ಯಾಟ್ ಕಮ್ಮಿನ್ಸ್ (ನಾಯಕ), ಅಲೆಕ್ಸ್ ಕ್ಯಾರಿ (ವಿಕೆಟ್‌ಕೀಪರ್), ನಾಥನ್ ಎಲ್ಲಿಸ್, ಆರನ್ ಹಾರ್ಡಿ, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್‌ಕೀಪರ್), ಮಾರ್ನಸ್ ಲ್ಯಾಬುಸ್‌ಚಾಗ್ನೆ, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಟ್ ಶಾರ್ಟ್, ಮಿಚೆಲ್ ಸ್ಟಾರ್ಕ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್ , ಆಡಮ್ ಝಂಪಾ.