ತನ್ನ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ನೀಡಿದ ಆ್ಯಡಂ ಜಂಪಾ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬಯೋ ಬಬಲ್‌ಗೆ ಸಂಬಂಧಿಸಿ ತಾನು ನೀಡಿದ್ದ ಹೇಳಿಕೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪಿನ್ನರ್ ಆ್ಯಡಂ ಜಂಪಾ ಸ್ಪಷ್ಟನೆ ನೀಡಿದ್ದಾರೆ. ತಾನು ಇದುವರೆಗೆ ನೋಡಿದ ಬಯೋ ಬಬಲ್‌ಗಳಲ್ಲಿ ಐಪಿಎಲ್‌ದು ಅತೀ ದುರ್ಬಲ ಬಯೋಬಬಲ್ ಎಂಬರ್ಥದಲ್ಲಿ ಜಂಪಾ ಹೇಳಿಕೆ ನೀಡಿದ್ದರು.
ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆತಂಕಗೊಂಡಿರುವ ಪ್ರಮುಖ ಆಟಗಾರರು ಐಪಿಎಲ್ ತೊರೆಯತೊಡಗಿದ್ದಾರೆ. ಇದೇ ಕಾರಣಕ್ಕೆ ಆರ್‌ಸಿಬಿ ಪರ ಆಡುವ ಆಸ್ಟ್ರೇಲಿಯಾದ ಕೇನ್ ರಿಚರ್ಡ್ಸನ್ ಮತ್ತು ಆ್ಯಡಂ ಜಂಪಾ ಕೂಡ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ.
ಆಸ್ಟ್ರೇಲಿಯಾಕ್ಕೆ ತಲುಪಿದ ಬಳಿಕ ಮಾತನಾಡಿರುವ ಜಂಪಾ, 'ಸಂದೇಶದ ಮೂಲಕ ಕಾಳಜಿ ತೋರಿದ ಎಲ್ಲರಿಗೂ ಧನ್ಯವಾದಗಳು. ಕೇನ್ ರಿಚರ್ಡ್ಸನ್ ಮತ್ತು ನಾನು ಇಬ್ಬರೂ ಮೆಲ್ಬರ್ನ್‌ಗೆ ಸುರಕ್ಷಿತವಾಗಿ ತಲುಪಿದ್ದೇವೆ,' ಎಂದಿದ್ದಾರೆ.
'ಐಪಿಎಲ್‌ನ ದುರ್ಬಲ ಬಯೋ ಬಬಲ್ ಎನ್ನುವ ನನ್ನ ಕಾಮೆಂಟ್‌ನಿಂದ ನನಗೆ ಬಯೋ ಬಬಲ್‌ನ ಒಳಗೆ ವೈರಸ್ ಬರಬಹುದು ಎಂಬ ಭಾವನೆಯಿದೆ ಎಂದರ್ಥವಲ್ಲ. ಬಿಸಿಸಿಐ ಮತ್ತು ಆರ್‌ಸಿಬಿ ಸುರಕ್ಷತೆ ದೃಷ್ಟಿಯಲ್ಲಿ ಎಲ್ಲಾ ಕ್ರಮ ತೆಗೆದುಕೊಳ್ಳುತ್ತಿದೆ. ಟೂರ್ನಮೆಂಟ್ ಸುರಕ್ಷಿತರ ಕೈಯಲ್ಲಿದೆ. ಯಶಸ್ವಿಯಾಗಲಿದೆ,' ಎಂದು ಜಂಪಾ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications