ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಎರಡು ತಂಡಗಳು ಪೈಪೋಟಿಯ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ಪಡೆಯನ್ನು ಆಸ್ಟ್ರೇಲಿಯಾ ತಂಡ 240 ರನ್‌ಗಳಿಗೆ ಕಟ್ಟಿ ಹಾಕಿದೆ. ಈ ಮೂಲಕ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಸಾಧಾರಣ ಗುರಿಯನ್ನು ಪಡೆದುಕೊಂಡಿದೆ.
ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೌಲಿಂಗ್ ವಿಭಾಗ ಅದ್ಭುತ ಪ್ರದರ್ಶನ ನೀಡಿದ್ದು ಸಂಘಟಿತ ದಾಳಿ ನಡೆಸುವಲ್ಲಿ ಯಶಸ್ವುಯಾಗಿದೆ. ಆರಂಭದಲ್ಲಿ ಜೋಶ್ ಹೇಜಲ್‌ವುಡ್ ವಿರುದ್ಧ ರೋಹಿತ್ ಶರ್ಮಾ ಅಬ್ಬರದ ಪ್ರದರ್ಶನ ನೀಡುವ ಮೂಲಕ ಆಸಿಸ್ ವೇಗಿಗೆ ಹಿನ್ನಡೆಯುಂಟು ಮಾಡಿದರು. ಆದರೆ ರೋಹಿತ್ ವಿಕೆಟ್ ಕಳೆದುಕೊಂಡ ಬಳಿಕ ಹೇಜಲ್‌ವುಡ್ ಕೂಡ ಯಶಸ್ಸು ಕಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರವಾಗಿ ಸ್ಪಿನ್ನರ್ ಆಡಂ ಜಂಪಾ ಒಂದು ವಿಕೆಟ್ ಪಡೆದುಕೊಂಡರು. ಈ ಮೂಲಕ ಒಂದು ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಎನ್ನುವ ದಾಖಲೆಯನ್ನು ಸರಿಗಟ್ಟಿದ್ದಾರೆ. ಮುತ್ತಯ್ಯ ಮುರಳೀಧರನ್ ಹೆದರಿನಲ್ಲಿದ್ದ ಈ ದಾಖಲೆಗೆ ಸಮ ಸಾಧನೆ ಮಾಡಿದ್ದಾರೆ ಆಡಂ ಜಂಪಾ.
2007 ರಲ್ಲಿ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದ ವಿಶ್ವಕಪ್‌ನಲ್ಲಿ ಮುತ್ತಯ್ಯ ಮುರಳೀಧರನ್ 10 ಪಂದ್ಯಗಳಿಂದ 4.14 ರ ಎಕಾನಮಿ ದರದಲ್ಲಿ 23 ವಿಕೆಟ್‌ಗಳನ್ನು ಪಡೆದುಕೊಂಡಿದ್ದರಯ. ಆ ಟೂರ್ನಿಯಲ್ಲಿ ಅವರು ಎರಡು ನಾಲ್ಕು ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದರು.
ಇದೀಗ 2023ರ ವಿಶ್ವಕಪ್ ಟೂರ್ನಿಯಲ್ಲಿ ಆಡಂ ಝಂಪಾ ತನ್ನ ಅಭಿಯಾನವನ್ನು 5.36ರ ಎಕಾನಮಿಯಲ್ಲಿ 11 ಪಂದ್ಯಗಳಿಂದ 23 ವಿಕೆಟ್‌ಗಳನ್ನು ಪಡೆಯುವ ಮೂಲಕ ಮುಕ್ತಾಯಗೊಳಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಜಂಪಾ 10-0-44-1 ಅಂಕಿಅಂಶಗಳೊಂದಿಗೆ ಮುಗಿಸಿದರು. ಜಂಪಾ ಅವರು ಜಸ್ಪ್ರೀತ್ ಬುಮ್ರಾ ಅವರ ವಿಕೆಟ್ ಪಡೆಯುವ ಮೂಲಕ ಮುರಳೀಧರನ್ ಸಾಧನೆ ಸರಿಗಟ್ಟಿದ್ದಾರೆ. ಬ್ರಾಡ್ ಹಾಗ್ (2007) ಮತ್ತು ಶಾಹಿದ್ ಅಫ್ರಿದಿ (2011) ತಲಾ 21 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.