ಚೆಂಡು ಹಿಡಿಯುವಾಗ ಕಣ್ಣಿಗೆ ಚೆಂಡು ಬಡೆದು ವಿಕೆಟ್ ಕೀಪರ್‌ಗೆ ಗಾಯ: ಇಲ್ಲಿದೆ ವಿಡಿಯೋ
ಇತ್ತೀಚಿಗೆ ಅಕ್ಟೋಬರ್ 27 ರಿಂದ ಆಸ್ಟ್ರೇಲಿಯಾದಲ್ಲಿ ಮಹಿಳೆಯರ ಬಿಗ್ ಬ್ಯಾಷ್ ಟಿ20 ಕ್ರಿಕೆಟ್ ಲೀಗ್ ಆರಂಭವಾಗಿದೆ. 10ನೇ ಆವೃತ್ತಿಯ ಟೂರ್ನಿ ಆರಂಭವಾಗಿದೆ. ಈಗಾಗಲೇ ಈ ಪಂದ್ಯದಲ್ಲಿ 5 ಪಂದ್ಯ ಆಡಲಾಗಿದೆ. ಮಂಗಳವಾರ ಟೂರ್ನಿಯಲ್ಲಿ ಘಟನೆ ನಡೆದಿದೆ. ಈ ಘಟನೆ ನಿಜಕ್ಕೂ ಮೈದಾನದಲ್ಲಿದ್ದ ಆಟಗಾರರ ಭಯ ಹೆಚ್ಚಿಸಿದೆ.
ಸಿಡ್ನಿ ಮೈದಾನದಲ್ಲಿ ನಡೆದ ಆಡಿಲೇಡ್ ಸ್ಟ್ರೈಕರ್ಸ್ ಮತ್ತು ಸಿಡ್ನಿ ಸಿಕ್ಸರ್ಸ್ ನಡುವಿನ ಪಂದ್ಯದಲ್ಲಿ, ಅಡಿಲೇಡ್ ತಂಡದ ವಿಕೆಟ್ ಕೀಪರ್ ಬ್ರಿಡ್ಜೆಟ್ ಪ್ಯಾಟರ್ಸನ್ ಅವರು ವಿಕೆಟ್ ಹಿಂದೆ ಚೆಂಡನ್ನು ಹಿಯುವ ವೇಳೆ ಗಾಯಕ್ಕೆ ತುತ್ತಾಗಿದ್ದಾರೆ. ಇವರು ಚೆಂಡನ್ನು ಹಿಡಿಯುವ ವೇಳೆ ಅವರಿಗೆ ಗಾಯವಾಗಿದ್ದು ತಕ್ಷಣ ಮೈದಾನದಿಂದ ಹೊರಗುಳಿಯಬೇಕಾಯಿತು.

ಆಗಿದ್ದು ಏನು?
ಆಡಿಲೇಡ್ ಸ್ಟ್ರೈಕರ್ಸ್ ಮತ್ತು ಸಿಡ್ನಿ ಸಿಕ್ಸರ್ಸ್ ಪಂದ್ಯ ನಡೆಯುತ್ತಿತ್ತು.ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಡಿಲೇಡ್ ಸ್ಟ್ರೈಕರ್ಸ್ 20 ಓವರ್‌ಗಳಲ್ಲಿ 171 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು ಹಿಂಬಾಲಿಸಿದ ಸಿಡ್ನಿ ಸಿಕ್ಸರ್ಸ್ ಬ್ಯಾಟಿಂಗ್ ಮಾಡುವಾಗ, ತಮ್ಮ ಎರಡನೇ ಓವರ್ ಮಾಡಲು ಡಾರ್ಸಿ ಬ್ರೌನ್ ಮುಂದಾದರು. ವೇಗದ ಬೌಲರ್ ಡಾರ್ಸಿ ಬ್ರೌನ್ ತಮ್ಮ ಎರಡನೇ ಓವರ್‌ನ ನಾಲ್ಕನೇ ಎಸೆತ ಬೌಲ್ ಮಾಡಿದರು.
ಈ ವೇಳೆ ಸಿಡ್ನಿ ಸಿಕ್ಸರ್ಸ್ ಎಲ್ಲಿಸ್ ಪೆರ್ರಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಡಾರ್ಸಿ ಬ್ರೌನ್ ಎಸೆದ ಚೆಂಡನ್ನು ಬ್ರಿಡ್ಜೆಟ್ ಪ್ಯಾಟರ್ಸನ್ ಹಿಡಿಯುವಲ್ಲಿ ವಿಫಲರಾಗಿ ಕಣ್ಣಿಗೆ ಪೆಟ್ಟು ಆಗಿದೆ. ಇವರಿಗೆ ಗಾಯವಾಗಿದ್ದನ್ನು ಕಂಡು ಉಳಿದ ಆಟಗಾರ್ತಿಯರು ಸಹ ಭಯಗೊಂಡಿದ್ದರು. ಚೆಂಡು ಪ್ಯಾಟರ್ಸನ್ ಅವರ ಕಣ್ಣಿಗೆ ಗಾಯವಾಗಿದೆ.
ಚೆಂಡು ಬೌನ್ಸ್ ಆಗಿದ್ದರಿಂದಾಗಿ ಬ್ರಿಜೆಟ್ ಪ್ಯಾಟರ್‌ಸನ್ ಚೆಂಡನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಅವರು ಆ ಚೆಂಡನ್ನು ಹಿಡಿಯಲು ಕೊಂಚ ವಿಫಲರಾದರು. ಚೆಂಡು ನೇರವಾಗಿ ಬೌನ್ಸ್ ಆಗಿದ್ದರಿಂದ ಅವರ ಕಣ್ಣಿಗೆ ಬಡಿದಿದೆ. ಚೆಂಡು ಕಣ್ಣಿಗೆ ಬಡೆಯುತ್ತಿದ್ದಂತೆ ಅವರು ನೋವಿನಿಂದ ಬಳಲಿದರು. ಬಳಿಕ ಅವಳು ನೆಲದ ಮೇಲೆ ಮಲಗಿದ್ರ. ಫಿಸಿಯೋ ಮತ್ತು ಇನ್ನೊಬ್ಬ ಸಹಾಯಕ ಸಿಬ್ಬಂದಿ ಮೈದಾನಕ್ಕೆ ಬಂದ ನಂತರ, ಬ್ರಿಡ್ಜೆಟ್‌ನನ್ನು ಹೊರಗೆ ಕರೆದೊಯ್ಯಲಾಯಿತು.
ಸ್ಟ್ರೈಕರ್ಸ್ ಗೆಲುವು
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಡಿಲೇಡ್ ಸ್ಟ್ರೈಕರ್ಸ್ ಉತ್ತಮ ಮೊತ್ತ ಕಲೆ ಹಾಕಿತು. ಈ ವೇಳೆ ಬ್ಯಾಟ್ ಮಾಡಿದ ಸ್ಟ್ರೈಕರ್ಸ್ ತಂಡದ ಪರ ಬ್ರಿಡ್ಜೆಟ್ ಪ್ಯಾಟರ್ಸನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 44 ರನ್‌ಬಾರಿಸಿದರು. ಉಳಿಂದತೆ ಓರ್ಲಾ ಪ್ರೆಂಡರ್‌ಗಾಸ್ಟ್ 39, ಅಮಂಡಾ-ಜೇಡ್ ವೆಲ್ಲಿಂಗ್ಟನ್ 40 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಇವರ ಆಟದ ಫಲವಾಗಿ ಸ್ಟ್ರೈಕರ್ಸ್ 20 ಓವರ್‌ಗಳಲ್ಲಿ 171 ರನ್ ಗಳಿಸಿದರು. ಗುರಿಯನ್ನು ಹಿಂಬಾಲಿಸದ ಸಿಡ್ನಿ ಸಿಕ್ಸರ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications