ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್ ಹಗಲು ರಾತ್ರಿ ನಡೆಯಲಿದ್ದು, ಈ ಟೆಸ್ಟ್ ಪಂದ್ಯಕ್ಕೆ ಆಡಿಲೇಡ್ ಅಂಗಳ ಆತಿಥ್ಯ ವಹಿಸಲಿದೆ. ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿ ಅತಿಥೇಯ ಆಸ್ಟ್ರೇಲಿಯಾ ತಂಡ ಇದ್ದು, ಇದಕ್ಕಾಗಿ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ಪರ್ತ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಸೋಲು ಕಂಡಿರುವ ಕಾಂಗರೂ ಪಡೆ, ಟೆಸ್ಟ್ ಸರಣಿಯಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಹೀಗಾಗಿ ಆಸ್ಟ್ರೇಲಿಯಾ ಎರಡನೇ ಟೆಸ್ಟ್ ಗೆಲಲ್ಲು ತನ್ನ ತಂಡದಲ್ಲಿ ಅನ್‌ಕ್ಯಾಪ್ಡ್ ಆಲ್‌ರೌಂಡರ್‌ಗೆ ಸ್ಥಾನ ನೀಡಿದೆ.
ಆಸ್ಟ್ರೇಲಿಯಾ ತನ್ನ ತಂಡದಲ್ಲಿ ಬ್ಯೂ ವೆಬ್ ಸ್ಟರ್‌ಗೆ ತಂಡದಲ್ಲಿ ಸ್ಥಾನ ನೀಡಿದೆ. ಇವರು ಶೆಫೀಲ್ಡ್ ಶೀಲ್ಡ್‌ನಲ್ಲಿ ಟ್ಯಾಸ್ಮೇನಿಯಾದ ಪರವಾಗಿ ಆಡಿದ್ದರು. ಇವರು ಮಿಚೆಲ್ ಮಾರ್ಷ್‌ಗೆ ಬ್ಯಾಕ್‌ಅಪ್ ಆಗಿ ತಂಡದಲ್ಲಿ ಸೇರಿಸಿಕೊಂಡಿದೆ. ವೆಬ್‌ಸ್ಟರ್ ಅವರು ತವರಿನಲ್ಲಿ ನಡೆದ ಭಾರತ ಎ ವಿರುದ್ಧ ಪಂದ್ಯದಲ್ಲಿ ಆಡಿದ್ದಾರೆ. ಎರಡೂ ಪಂದ್ಯಗಳಲ್ಲಿ ವೆನ್‌ಸ್ಟರ್ ಸ್ಥಿರ ಪ್ರದರ್ಶನ ನೀಡಿದ್ದಾರೆ. ಭಾರತ ಎ ವಿರುದ್ಧ ಸರಣಿಯಲ್ಲಿ ಇವರು ಆಸ್ಟ್ರೇಲಿಯಾ ಎ ಪರ ಸ್ಥಿರ ಪ್ರದರ್ಶನ ನೀಡಿದ್ದರು. ಅಲ್ಲದೆ ಆ ಸರಣಿಯಲ್ಲಿ 145 ರನ್ ಸಿಡಿಸಿ ಭರವಸೆ ಮೂಡಿಸಿದ್ದರು. ತಮ್ಮನ್ನು ತಂಡಕ್ಕೆ ಸೇರಿಸಿಕೊಂಡ ನಿರ್ಧಾರದಿಂದ ವೆಬ್‌ಸ್ಟರ್ ಫುಲ್ ಖುಷ್ ಆಗಿದ್ದಾರೆ.

ಈ ಬಗ್ಗೆ ವೆಬ್‌ಸ್ಟರ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಇವರು ಭಾರತ ಎ ವಿರುದ್ಧ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ ಪರಿಣಾಮವೇ ನನಗೆ ತಂಡದಲ್ಲಿ ಆಡಲು ಅವಕಾಶ ಸಿಕ್ಕಿದೆ. ಎ ತಂಡದ ಪರ ಆಡುತ್ತಿದ್ದೀರಿ ಎಂದರೆ ನೀವು ನಿಮ್ಮ ರಾಷ್ಟ್ರೀಯ ತಂಡವನ್ನು ಸೇರುವ ಒಂದು ಹೆಜ್ಜೆ ಹಿಂದೆ ನಿಂತಿದ್ದೀರಿ ಎಂದು ಅರ್ಥ. ರಾಷ್ಟ್ರೀಯ ತಂಡದ ಆಯ್ಕೆದಾರ ಜಾರ್ಜ್ ಬೇಯ್ಲಿ ನನಗೆ ಕರೆ ಮಾಡಿದಾಗ ನನಗೆ ಅತೀವ ಸಂತಸವಾಯಿತು ಎಂದು ತಿಳಿಸಿದ್ದಾರೆ.
ಅಡಿಲೇಡ್ ಮತ್ತು ಗಬ್ಬಾ ಪಿಚ್‌ಗಳಲ್ಲಿ ತಿರುವು ಇದೆ ಹಾಗಾಗಿ ಮಧ್ಯಮ ಕ್ರಮಾಂಕದ ಪಾತ್ರಕ್ಕಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆಂದು ನಾನು ಭಾವಿಸುತ್ತೇನೆ ಎಂದು ವೆಬ್‌ಸ್ಟರ್ ತಿಳಿಸಿದ್ದಾರೆ. ಆಸ್ಟ್ರೇಲಿಯಾ ತಂಡಕ್ಕೆ ಇವರು ಎಂಟ್ರಿ ನೀಡಿರುವುದರಿಂದ ಆಸೀಸ್ ಬೌಲಿಂಗ್ ಲೈನ್ ಅಪ್ ಇನ್ನಷ್ಟು ಬಲಾಢ್ಯವಾಗುತ್ತದೆ. ವೆಬ್‌ಸ್ಟರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 5000ಕ್ಕೂ ಹೆಚ್ಚಿನ ರನ್ ಹಾಗೂ 150ರ ಆಸುಪಾಸಿನಲ್ಲಿ ವಿಕೆಟ್ ಪಡೆದಿದ್ದಾರೆ.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಾಥನ್ ಲಿಯಾನ್, ಮಿಚ್ ಮಾರ್ಷ್, ನಾಥನ್ ಮೆಕ್‌ಸ್ವೀನಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಬ್ಯೂ ವೆಬ್‌ಸ್ಟರ್