Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಖವಾಜಾ ಅದ್ಭುತ ಕ್ಯಾಚ್‌ಗೆ ಬಲಿಯಾದ ವಿರಾಟ್ ಕೊಹ್ಲಿ: ವೈರಲ್ ವಿಡಿಯೋ

Adelaide Test: Usman Khawaja takes a blinder to stun Virat Kohli - Watch

ಅಡಿಲೇಡ್, ಡಿಸೆಂಬರ್ 6: ಅಡಿಲೇಡ್ ಸ್ಟೇಡಿಯಂನಲ್ಲಿ ಗುರುವಾರ (ಡಿಸೆಂಬರ್ 6) ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ವಿರಾಟ್ ಕೊಹ್ಲಿ ಕೇವಲ 3 ರನ್ನಿಗೆ ವಿಕೆಟ್ ಒಪ್ಪಿಸಿದ್ದರು. ಅದ್ಭುತ ಕ್ಯಾಚ್ ಮೂಲಕ ಕೊಹ್ಲಿಯನ್ನು ಪೆವಿಲಿಯನ್‌ಗೆ ಅಟ್ಟಿದ ಉಸ್ಮಾನ್ ಖವಾಜಾ ಆಸೀಸ್ ತಂಡದ ಹೀರೋ ಎನಿಸಿದರು.

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ಪರ ಕಣಕ್ಕಿಳಿದಿದ್ದ ಕೊಹ್ಲಿ 10.3 ಓವರ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ಎಸೆತಕ್ಕೆ ಬ್ಯಾಟ್ ಬೀಸಿದರು. ಕೊಹ್ಲಿ ಬ್ಯಾಟ್‌ಗೆ ತಾಗಿ ಚಿಮ್ಮಿದ ಚೆಂಡನ್ನು ಸ್ಲಿಪ್‌ನಲ್ಲಿ ನಿಂತಿದ್ದ ಖವಾಜಾ ಹಾರಿ ಕ್ಯಾಚ್ ಮಾಡಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.

ಮೊದಲ ಇನ್ನಿಂಗ್ಸ್‌ಗೆ ಇಳಿದಿರುವ ಭಾರತ, ಗುರುವಾರ (ಡಿಸೆಂಬರ್ 6) ದಿನದಾಂತ್ಯಕ್ಕೆ ಚೇತೇಶ್ವರ ಪೂಜಾರ ಅವರ ಶತಕದ (123 ರನ್‌) ನೆರವಿನಿಂದ 87.5 ಓವರ್‌ಗೆ 9 ವಿಕೆಟ್ ಕಳೆದು 250 ರನ್ ಪೇರಿಸಿದೆ. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝೆಲ್ವುಡ್, ಕಮಿನ್ಸ್, ನಾಥನ್ ಲಿಯಾನ್ ತಲಾ 2 ವಿಕೆಟ್ ಕೆಡವಿ ಭಾರತೀಯರನ್ನು ಕಟ್ಟಿ ಹಾಕಿದರು.

Story first published: Thursday, December 6, 2018, 15:52 [IST]
Other articles published on Dec 6, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+