ಈ ಬಾರಿಯ ಐಪಿಎಲ್ ನಲ್ಲಿ ಗಮನ ಸೆಳೆದ ಕ್ರಿಕೆಟ್ ತಾರೆಯರ ಮಕ್ಕಳು
ಈ ಬಾರಿಯ ಐಪಿಎಲ್ ನಲ್ಲಿ ವಿವಿಧ ದೇಶಗಳ ಆಟಗಾರರು ದೇಶೀಯ ಕ್ರಿಕೆಟ್ ಸ್ಟಾರ್ ಗಳ ಜತೆಗೆ ಪ್ರೇಕ್ಷಕರಿಗೆ ಕ್ರಿಕೆಟ್ ರಸದೌತಣ ನೀಡಿದ್ದಾರೆ, ನೀಡುತ್ತಿದ್ದಾರೆ.
ಆದರೆ, ಈ ಬಾರಿಯ ಐಪಿಎಲ್ ಪಂದ್ಯಾವಳಿಯು ಈ ಸ್ಟಾರ್ ಗಳಿಗೇ ಸ್ಟಾರ್ ಎನಿಸಿರುವ ಪುಟಾಣಿಗಳನ್ನು ನೋಡಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಈ ಕ್ರಿಕೆಟಿಗರೇ, ಈ ಪುಟಾಣಿ ಗಳ ದೊಡ್ಡ ಅಭಿಮಾನಿಗಳಾಗಿದ್ದಾರೆ.[ರೈನಾ ನೋಡಲು ರೈನಾ ಬಂದಾಗ, ಪಂದ್ಯ ಕೆಲಕ್ಷಣ ನಿಂತಾಗ]
ಯಾರಿವರು ಅಂತೀರಾ? ಇವರು ಕ್ರಿಕೆಟಿಗರ ಸಂತಾನ. ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್, ಹರ್ಭಜನ್ ಸಿಂಗ್, ಯೂಸುಫ್ ಪಠಾಣ್ ಮುಂತಾದವರು ಈ ಬಾರಿ ತಾವು ಹೋದಲ್ಲೆಲ್ಲಾ ತಮ್ಮ ಕುಟುಂಬವನ್ನೂ ಕೊಂಡೊಯ್ಯಿದ್ದು , ಈ ಬಾರಿ ಅವರ ಮಕ್ಕಳೂ ಮಾಧ್ಯಮಗಳ ಕ್ಯಾಮೆರಾಗಳನ್ನು ಆಕರ್ಷಿಸಿದವು.
ಈ ಬಾರಿಯ ಐಪಿಎಲ್ ನಲ್ಲಿ ಹೀಗೆ ಮಾಧ್ಯಮಗಳನ್ನು ಆಕರ್ಷಿಸಿದ ಕ್ರಿಕೆಟ್ ಆಟಗಾರರ ಮಕ್ಕಳ ಸಂಕ್ಷಿಪ್ತ ಮಾಹಿತಿ, ಫೋಟೋ ಸಹಿತ ನಿಮಗಾಗಿ.....[ಐಪಿಎಲ್ ಉದಯೋನ್ಮುಖ ಆಟಗಾರರ ಪ್ರಶಸ್ತಿ ರೇಸಿನಲ್ಲಿ ಯಾರು ಮುಂದೆ?]

ಪುತ್ರ, ಪತ್ನಿಯೊಂದಿಗೆ ಸಂಭ್ರಮದ ಕ್ಷಣ
ದಕ್ಷಿಣ ಆಫ್ರಿಕಾ ಕ್ರಿಕೆಟ್ ನ ದೈತ್ಯ ಪ್ರತಿಭೆ ಎಬಿ ಡಿವಿಲಿಯರ್ಸ್ ಈ ಬಾರಿಯ ಐಪಿಎಲ್ ನಲ್ಲಿ ತಮ್ಮ ಪುತ್ರ ಹಾಗೂ ಪತ್ನಿಯೊಂದಿಗೆ ಕಾಣಿಸಿಕೊಂಡು ಗಮನ ಸೆಳೆದರು.

ಗಮನ ಸೆಳೆದ ಪುಟಾಣಿ
ಆರ್ ಸಿಬಿ ತಂಡದ ಆರಂಭಿಕ ಆಟಗಾರ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ನ ದೈತ್ಯ ಪ್ರತಿಭೆ ಕ್ರಿಸ್ ಗೇಲ್ ಮಗಳೀಕೆ. ಈ ಹುಡುಗಿ ಹುಟ್ಟಿದ್ದು 2015ರಲ್ಲಿ. ಈಕೆಯ ಹೆಸರು ಬ್ಲಷ್.

ಜನ್ಮದಿನಾಚರಣೆ ಆಚರಿಸಿಕೊಂಡ ಬೇಬಿ
ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಜತೆಗೆ ಕಾಣಿಸಿಕೊಳ್ಳುತ್ತಿದ್ದ ಈ ಹುಡುಗಿ ಅಪ್ಪನಿಗೆ ಸ್ಫೂರ್ತಿ ತುಂಬುತ್ತಿದ್ದಳೋ ಏನೋ ಎಂಬಂತೆ ಅಂಟಿಕೊಂಡಿರುತ್ತಿದ್ದಳು. ಅಂದಹಾಗೆ, ಈ ಬಾರಿಯ ಐಪಿಎಲ್ ವೇಳೆಯಲ್ಲೇ ಈ ಹುಡುಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ವಿಶೇಷ.

ಮುಂಬೈ ಟೀಮಿನಲ್ಲಿ ಲಿಟಲ್ ಮಾಸ್ಟರ್
ಈ ಹುಡುಗಿ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಮಗಳು ಹಿನಾಯಾ. ಭಜ್ಜಿ ಈಕೆಯನ್ನು ವಿಮಾನದಲ್ಲಿ ಕುಳ್ಳಿರಿಸಿಕೊಂಡರೆ ಸಾಕು ಮುಂಬೈ ತಂಡದ ಎಲ್ಲಾ ಸದಸ್ಯರೆಡೆಗೂ ಒಂದು ರೌಂಡ್ ಹೊಡೆಯುತ್ತಿದ್ದಳು. ಹಾಗೆ ರೌಂಡ್ ಹೊಡೆಯುವ ಸಮಯದಲ್ಲಿ ಪಾರ್ಥೀವ್ ಪಟೇಲ್ ಜತೆಗಿದ್ದಾಗ ತಗೆದೆ ಫೋಟೋ.

ಎಲ್ಲೆಲ್ಲೂ ನಗುವಿನ ಕಲರವ
ಮೊದಲೇ ಹೇಳಿದಂತೆ ಮುಂಬೈ ಇಂಡಿಯನ್ಸ್ ತಂಡದ ಮುದ್ದು ಕಣ್ಮಣಿ ಈ ಹಿನಾಯಾ. ವಿಮಾನದಲ್ಲಿ ಪ್ರಯಾಣಿಸುವ ವೇಳೆ, ಮಿಚೆಲ್ ಜಾನ್ಸನ್ ಜತೆಗೆ ತೆಗೆಸಿಕೊಂಡ ಫೋಟೋ ಇದು.

ಝಿವಾ ಮುಗುಳು
ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯವರ ಮಗಳು ಝೀವಾ. ಮಗಳೊಂದಿಗೆ ಈ ಬಾರಿಯ ಐಪಿಎಲ್ ನಲ್ಲಿ ಟೂರ್ ಹೊಡೆಯುತ್ತಿದ್ದ ಧೋನಿ, ಆಗಾಗ ಆಕೆಯೊಂದಿಗಿನ ಫೋಟೋವನ್ನು ಇನ್ ಸ್ಟಾ ಗ್ರಾಂನಲ್ಲಿ ಹಾಕುತ್ತಿದ್ದರು.

ಏನು ಖುಷಿ, ಏನು ಸೊಗಸು?
ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ ಅವರ ಮುದ್ದಿನ ಮಗಳು ಗ್ರಾಸಿಯಾ. ತನ್ನ ಅಪ್ಪನನ್ನು ಮೈದಾನದಲ್ಲಿ ಪ್ರೋತ್ಸಾಹಿಸಲು ತನ್ನ ತಾಯಿಯೊಂದಿಗೆ ಆಗಮಿಸಿದ್ದಳು ಈಕೆ. ಬಿಡುವಿನ ಸಮಯದಲ್ಲಿ ಅಪ್ಪ ಮಗಳದ್ದೇ ಸಾಮ್ರಾಜ್ಯ. ರೈನಾ ಪತ್ನಿಗೆ ಇವರಿಬ್ಬರ ಫೋಟೋ ಕ್ಲಿಕ್ಕಿಸುವುದಷ್ಟೇ ಕೆಲಸ!

ಶಿಖರ್ ಧವನ್ ವಿತ್ ಹಿಸ್ ಸನ್
ಸನ್ ರೈಸರ್ಸ್ ಹೈದರಾಬಾದ್ ತಂಡ ಆರಂಭಿಕ ಆಟಗಾರ ಶಿಖರ್ ಧವನ್ ಪುತ್ರ ಜಿಮ್ ನಲ್ಲಿ ಕಸರತ್ತು ತೋರಲು ಮುಂದಾಗಿರುವ ಪೋಟೋ ಇದು. ಈ ಸೆಲ್ಫಿ ಫೋಟೋವನ್ನು ಶಿಖರ್ ಧವನ್ ಪ್ರಕಟಿಸಿದ್ದಾರೆ.

ನಾಯಕನ ಜತೆಗೆ ಸೆಲ್ಫಿ
ಮೊದ್ಲೇ ಹೇಳಿದ್ವಲ್ವಾ.... ? ಹರ್ಭಜನ್ ಸಿಂಗ್ ಮಗಳು ಹಿನಾಯಾ, ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿಗೂ ಅಚ್ಚುಮೆಚ್ಚು. ಆಕೆಯೊಂದಿಗಿನ ಸುಂದರ ಕ್ಷಣವೊಂದನ್ನು ವಿರಾಟ್ ಅವರು, ಸೆಲ್ಫೀ ಮೂಲಕ ಸೆರೆ ಹಿಡಿದಿದ್ದು ಹೀಗೆ.

ಅಪ್ಪ ಅಂದ್ರೆ ಆಕಾಶ?
ಈ ಫೋಟೋದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ನ ಆಲ್ರೌಂಡರ್ ಯೂಸುಫ್ ಪಠಾಣ್ ಅವರ ಇಬ್ಬರು ಪುತ್ರರನ್ನು ಕಾಣಬಹುದು. ಅಪ್ಪನ ಹೆಗಲೇರಿ ಹೇಗೆ ಕುಳಿತಿವೆ ನೋಡಿ. ಈ ಫೋಟೋ ನೋಡಿದರೆ, ಮುದ್ದು ಬಾರದಿರದೇ?

ಇಬ್ಬರು ಮಕ್ಕಳೊಂದಿಗೆ ದಿಲ್ಲಿ ಬ್ಯಾಟ್ಸ್ ಮನ್
ಕಿಂಗ್ಸ್ ಇಲೆವೆನ್ ಪಂಜಾಬ್ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಅವರ ಫೋಟೋ ಇದು. ಈ ಫೋಟೋದಲ್ಲಿ, ಸೆಹ್ವಾಗ್, ಪತ್ನಿ ಆರತಿ ಹಾಗೂ ಮಕ್ಕಳಾದ ಆರ್ಯವೀರ್ ಹಾಗೂ ವೇದಾಂತ್ ಜತೆಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications