Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rashid Khan: ಟೀಮ್ ಸೌಥಿ ದಾಖಲೆಯ ಮೇಲೆ ರಾಶೀದ್ ಖಾನ್ ಕಣ್ಣು

ಏಷ್ಯಾ ಕಪ್‌ಗೆ ಯುಎಇನಲ್ಲಿ ಭರದ ಸಿದ್ಧತೆಗಳು ನಡೆದಿವೆ. ಇತ್ತ ಅಫ್ಘಾನಿಸ್ತಾನ ಸಹ ತನ್ನ ತಂಡವನ್ನು ಪ್ರಕಟಿಸಿದೆ. ಅಫ್ಘಾನಿಸ್ತಾನ ತಂಡವನ್ನು ಈ ಬಾರಿ ರಾಶೀದ್ ಖಾನ್ ಮುನ್ನಡೆಸಲಿದ್ದಾರೆ. ಇವರು ಈಗಾಗಲೇ ತಮ್ಮ ಸ್ಪಿನ್ ಮೋಡಿಯಿಂದ ಎದುರಾಳಿಗಳನ್ನು ಕಾಡಿದ್ದಾರೆ. ರಾಶೀದ್ ಖಾನ್‌ ಏಷ್ಯಾ ಕಪ್‌ನಲ್ಲೂ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಇವರು ಏಷ್ಯಾ ಕಪ್‌ನಲ್ಲಿ ನಾಲ್ಕು ವಿಕೆಟ್‌ ಪಡೆದಿದ್ದೇ ಆದಲ್ಲಿ ಮತ್ತೊಂದು ದಾಖಲೆಗೆ ತಮ್ಮ ಹೆಸರನ್ನು ನಮೂದಿಸಿದ್ದಾರೆ.

ರಾಶೀದ್ ಖಾನ್‌ ತಮ್ಮ ಲೆಗ್‌ ಸ್ಪಿನ್ ಹಾಗೂ ಗೂಗ್ಲಿ ಗಳಿಂದಲೇ ಹೆಸರುವಾಸಿಯಾಗಿರುವ ಆಟಗಾರ. ಇವರು ಈಗಾಗಲೇ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ತಮ್ಮ ಛಾಪು ಮೂಡಿಸಿದ ಪ್ಲೇಯರ್. ಇವರು ವಿಶ್ವದ ನಾನಾ ಲೀಗ್‌ಗಳಲ್ಲೂ ತಮ್ಮ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಾಡುವ ಬೌಲರ್. ರಾಶೀದ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲೂ ಅಮೋಘ ಸಾಧನೆ ಮಾಡಿದ್ದಾರೆ. ಇವರು ಈಗಾಗಲೇ ಅಫ್ಘಾನಿಸ್ತಾನ ಪರ 96 ಟಿ20 ಪಂದ್ಯಗಳನ್ನು ಆಡಿದ್ದು, 161 ವಿಕೆಟ್‌ ಪಡೆದಿದ್ದಾರೆ. ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ರಾಶೀದ್‌ಗೆ ಎರಡನೇ ಸ್ಥಾನ.

Afghan spinner Rashid Khan on the verge of breaking T20I world record

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ದಾಖಲೆ ಟೀಮ್ ಸೌಥಿ ಹೆಸರಿನಲ್ಲಿದೆ. ಇವರು 126 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 164 ವಿಕೆಟ್‌ ಪಡೆದಿದ್ದಾರೆ. ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ ರಾಶೀದ್‌ ಇನ್ನು ಮೂರು ವಿಕೆಟ್‌ ಪಡೆದರೆ, ಇವರ ಸಾಧನೆಯ ಸಮಕ್ಕೆ ನಿಲ್ಲಲಿದ್ದಾರೆ. ಇನ್ನು 4 ವಿಕೆಟ್‌ ಪಡೆದಿದ್ದೇ ಆದಲ್ಲಿ, ಸೌಥಿ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. ಈ ಮೂಲಕ ರಾಶೀದ್ ಖಾನ್‌ ಹೊಸ ವಿಶ್ವದಾಖಲೆಯನ್ನು ಬರೆಯುವ ಕನಸಿನಲ್ಲಿದ್ದಾರೆ.

T20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಐವರು ಬೌಲರ್ಸ್‌
ಟೀಮ್ ಸೌಥಿ, ನ್ಯೂಜಿಲೆಂಡ್‌, 126 ಪಂದ್ಯ 163 ವಿಕೆಟ್‌
ರಾಶೀದ್ ಖಾನ್‌, ಅಫ್ಘಾನಿಸ್ತಾನ್, 96 ಪಂದ್ಯ, 161 ವಿಕೆಟ್‌
ಇಶ್‌ ಸೋದಿ, ನ್ಯೂಜಿಲೆಂಡ್‌, 126 ಪಂದ್ಯ, 150 ವಿಕೆಟ್‌
ಶಾಕೀಬ್ ಅಲ್‌ ಹಸನ್, 129 ಪಂದ್ಯ, 149 ವಿಕೆಟ್‌
ಮುಸ್ತಾಫಿಜುರ್ ರಹಮಾನ್‌, 111 ಪಂದ್ಯ, 139 ವಿಕೆಟ್‌

ವಿಶೇಷ ಕ್ಲಬ್‌ಗೆ ರಾಶೀದ್‌ ಎಂಟ್ರಿ

ಅಫ್ಘಾನಿಸ್ತಾನ ತಂಡದ ಪರ ರಾಶೀದ್ ಖಾನ್‌ ಮತ್ತೊಂದು ದಾಖಲೆ ನಿರ್ಮಿಸಲಿದ್ದಾರೆ. ಇವರು ಏಷ್ಯಾ ಕಪ್‌ನಲ್ಲಿ ಇನ್ನು ಐದು ಪಂದ್ಯಗಳನ್ನು ಆಡಿದಲ್ಲಿ, ಅಫ್ಘಾನಿಸ್ತಾನದ ಪರ 100 ಟಿ20 ಪಂದ್ಯಗಳನ್ನು ಆಡಿದ ಹಿರಿಮೆಗೆ ಪಾತ್ರರಾಗಲಿದ್ದಾರೆ. ಇವರಿಗೂ ಮೊದಲು ಮೊಹಮ್ಮದ್‌ ನಬಿ 132 ಪಂದ್ಯಗಳನ್ನು ಆಡಿ ಅಗ್ರ ಸ್ಥಾನದಲ್ಲಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ನಜೀಬುಲ್ಲಾ ಜದ್ರಾನ್ ಇದ್ದು ಇವರು 107 ಪಂದ್ಯಗಳನ್ನು ಆಡಿದ್ದಾರೆ.

Story first published: Tuesday, August 26, 2025, 14:07 [IST]
Other articles published on Aug 26, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+