ಆಫ್ಘನ್‌ರಿಗೆ ನಿದ್ದೆಯಲ್ಲೂ ಕಾಡುವ ಮ್ಯಾಕ್ಸ್‌ವೆಲ್ ಏಕಾಂಗಿ ಹೋರಾಟ
ಚಾಂಪಿಯನ್ಸ್ ಟ್ರೋಫಿ ರೋಚಕ ಘಟ್ಟದ ಮುಖ ಮಾಡಿದೆ. ಲೀಗ್ ಹಂತದ ಕೊನೆಯ ಪಂದ್ಯಗಳು ನಡೆಯುತ್ತಿವೆ. ಭಾರತ ಸಹ "ಎ" ಗುಂಪಿನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು, 4 ಅಂಕಗಳೊಂದಿಗೆ ಸೆಮಿಫೈನಲ್ ಪ್ರವೇಶಿಸುವ ಕನಸು ಕಾಣುತ್ತಿದೆ. ಇನ್ನು "ಬಿ" ಗುಂಪಿನ ಫೈಟ್ ರೋಚಕತೆ ಹುಟ್ಟಿಸಿದೆ. ಈ ಗುಂಪಿನಲ್ಲಿ ಇನ್ನು ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ತಂಡಗಳಿಗೆ ಉಪಾಂತ್ಯ ತಲುಪುವ ವಿಶ್ವಾಸ ಇದೆ. ಇದೇ ವೇಳೆ ಅಫ್ಘಾನಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವೆ ಬಿಗ್ ಮ್ಯಾಚ್ ಲಾಹೋರ್‌ನಲ್ಲಿ ನಡೆಯಲಿದೆ.
ಈಗಾಗಲೇ ಇದೇ ಅಂಗಳದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಅಬ್ಬರಿಸಿರುವ ಆಫ್ಘಾನಿಸ್ತಾನ ಮತ್ತೊಂದು ಗೆಲುವಿನ ಹುಡುಕಾಟದಲ್ಲಿದೆ. ಈ ವೇಳೆ ತಂಡದ ಆತ್ಮ ವಿಶ್ವಾಸವೂ ಇಮ್ಮಡಿಯಾಗಿದೆ. ಆದರೆ ಅಫ್ಘಾನಿಸ್ತಾನ ತಂಡಕ್ಕೆ ಕನಸಿನಲ್ಲೂ ಆಸ್ಟ್ರೇಲಿಯಾದ ಆ ಸ್ಟಾರ್ ಪ್ಲೇಯರ್ ಬಹುವಾಗಿ ಕಾಟ ನೀಡಿದ್ದಾರೆ. ಭಾರತದಲ್ಲಿ ನಡೆದ ಪಂದ್ಯದಲ್ಲಿ ಅಮೋಘ ಏಕಾಂಗಿ ಪ್ರದರ್ಶನ ನೀಡಿರುವ ಆಲ್‌ರೌಂಡರ್, ಅಫ್ಘಾನಿಸ್ತಾನ ತಂಡಕ್ಕೆ ಬಹುವಾಗಿ ಕಾಡಿದ್ದರು.

ಅಂದು ಮುಂಬೈನ ವಾಂಖೇಡೆ ಅಂಗಳದಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಗ್ಲೇನ್ ಮ್ಯಾಕ್ಸ್‌ವೆಲ್ ಅವರ ಏಕಾಂಗಿ ಹೋರಾಟ, ಅಫ್ಘಾನಿಸ್ತಾನ ತಂಡವನ್ನು ಬಹುವಾಗಿ ಕಾಡಿದೆ. ಒಂದು ಅರ್ಥದಲ್ಲಿ ಆಸೀಸ್ ವಿಶ್ವ ವಿಜೇತ ಪಟ್ಟವನ್ನು ಅಲಂಕರಿಸುವಲ್ಲಿ ಈ ಇನಿಂಗ್ಸ್ ಮಹತ್ವ ಪಡೆದಿತ್ತು ಎಂದು ಹೇಳಿದರೆ ತಪ್ಪಾಗಲರಾದು.
ಆಗಿದ್ದು ಏನು?
ಮುಂಬೈನಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ಇಬ್ರಾಹಿಂ ಜರ್ದಾನ್ ಅವರ ಅಮೋಘ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 291 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಲು ಇಳಿದ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಆಸೀಸ್ ಒಂದು ಹಂತದಲ್ಲಿ 18.3 ಓವರ್‌ಗಳಲ್ಲಿ 7 ವಿಕೆಟ್‌ಗೆ 91 ರನ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಎಲ್ಲರೂ ಈ ಪಂದ್ಯವನ್ನು ಆಸೀಸ್ ಕೈಚೆಲ್ಲುತ್ತದೆ ಎಂದೇ ಭಾವಿಸಿದ್ದರು. ಆದರೆ ಆಗಿದ್ದೇ ಬೇರೆ.

ಆಸ್ಟ್ರೇಲಿಯಾದ ಆಲ್‌ರೌಂಡರ್ ಒನ್ ಮ್ಯಾನ್ ಆರ್ಮಿ ರೀತಿ ಆಡಿದ ಆ ಅಮೋಘ ಇನಿಂಗ್ಸ್ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಹಾಗೆ ಉಳಿದಿದೆ. ಏಳು ವಿಕೆಟ್ ಕಳೆದುಕೊಂಡಾಗ ನಾಯಕ ಪ್ಯಾಟ್ ಕಮಿನ್ಸ್ ಅವರೊಂದಿಗೆ 8ನೇ ವಿಕೆಟ್‌ಗೆ ಮ್ಯಾಕ್ಸ್‌ವೆಲ್ ಆಡಿದ ಆಟ, ಅಫ್ಘಾನಿಸ್ತಾನ ಆಟಗಾರರಿಗೆ ಬರೆ ನೀಡಿತು. ಗೆಲುವಿನ ಕನಸಿನಲ್ಲಿದ್ದ ಆಫ್ಘನ್ ತಂಡಕ್ಕೆ ಗ್ಲೇನ್ ಮ್ಯಾಕ್ಸ್ ವೆಲ್ ತಮ್ಮ ಬಿಗ್ ಹಿಟ್‌ಗಳ ಮೂಲಕ ಬರೆ ನೀಡಿದರು. ಗಾಯಕ್ಕೆ ತುತ್ತಾದರೂ ಧೃತಿ ಗೆಡದ ಮ್ಯಾಕ್ಸ್‌ವೆಲ್ ಅಮೋಘ ಇನಿಂಗ್ಸ್ ಕಟ್ಟಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.
ಗ್ಲೇನ್ ಮ್ಯಾಕ್ಸ್‌ವೆಲ್ 128 ಎಸೆತಗಳಲ್ಲಿ 21 ಬೌಂಡರಿ, 10 ಅಮೋಘ ಸಿಕ್ಸರ್ ಸಹಾಯದಿಂದ ಅಜೇಯ 201 ರನ್ ಸಿಡಿಸಿ ಅಬ್ಬರಿಸಿದರು. ಈ ಮೂಲಕ ಸೋಲುವ ಪಂದ್ಯದಲ್ಲಿ ಗೆಲುವಿನ ದೀಪ ಬೆಳಗಿಸಿದರು. ಶುಕ್ರವಾರ ಮತ್ತೆ ಇವರು ಅಫ್ಘಾನಿಸ್ತಾನ ವಿರುದ್ಧ ಮೈದಾನ ಪ್ರವೇಶಿಸಲಿದ್ದು, ಎಲ್ಲರ ಕಣ್ಣುಗಳು ಮ್ಯಾಕ್ಸ್‌ವೆಲ್ ಮೇಲೆ ನೆಟ್ಟಿರುತ್ತವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications