Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ನ್ಯೂಜಿಲೆಂಡ್: ಎರಡನೇ ಟಿ20 ಪಂದ್ಯಕ್ಕೂ ಮಳೆಯ ಕಾಟ!

After 1st match washout at Wellington now rainy day awaits for 2nd t20I match of the series

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಟಿ20 ವಿಶ್ವಕಪ್‌ನ ಬಳಿಕ ದ್ವಿಪಕ್ಷೀಯ ಸರಣಿಯಲ್ಲಿ ಮುಖಾಮುಖಿಯಾಗುತ್ತಿದೆ. ವೈಟ್‌ಬಾಲ್ ಸರಣಿ ಇದಾಗಿದ್ದು ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಆದರೆ ಈ ಸರಣಿಗೆ ಮಳೆ ಇನ್ನಿಲ್ಲದಷ್ಟು ಕಾಟ ಕೊಡುತ್ತಿದ್ದು ಮೊದಲ ಪಂದ್ಯ ಸಂಪೂರ್ಣವಾಗಿ ಮಳೆಗೆ ಆಹುತಿಯಾಗಿತ್ತು. ಇದೀಗ ಎರಡನೇ ಪಂದ್ಯ ಕೂಡ ಮಳೆಗೆ ಆಹುತಿಯಾಗುವ ಸಾಧ್ಯತೆಯಿದೆ.

ಮೌಂಟ್‌ ಮೌಂಗುನ್ಯೂಯಿನಲ್ಲಿ ಎರಡನೇ ಪಂದ್ಯ ಆಯೋಜನೆಯಾಗಿದ್ದು ಈಗಾಗಲೇ ಎರಡೂ ತಂಡಗಳು ಕೂಡ ಪಂದ್ಯ ನಡೆಯುವ ತಾಣಕ್ಕೆ ಆಗಮಿಸಿದೆ. ಆದರೆ ಪಂದ್ಯ ನಡೆಯುವ ದಿನವಾದ ಭಾನುವಾರ ಇಲ್ಲಿ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ ಅಂತ್ಯವಾದ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತದಿಂದ ನಿರ್ಗಮಿಸಿತ್ತು. ನ್ಯೂಜಿಲೆಂಡ್ ತಂಡ ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸಿ ನಿರ್ಗಮಿಸಿದರೆ ಭಾರತ ಇಂಗ್ಲೆಂಡ್ ವಿರುದ್ಧ ಆಘಾತಕಾರಿಯಾಗಿ ಸೋಲುಂಡು ಹೊರಬಿದ್ದಿತ್ತು. ಹೀಗಾಗಿ ಎರಡು ತಂಡಗಳು ಕೂಡ ಹೊಸ ಸರಣಿಯ ಮೂಲಕ ಹೊಸ ಆರಂಭವನ್ನು ಪಡೆಯುವತ್ತ ಎದುರು ನೋಡುತ್ತಿದೆ. ಆದರೆ ಮಳೆ ಎರಡು ತಂಡಗಳ ಆಟಗಾರರಿಗೆ ಮಾತ್ರವಲ್ಲದೆ ಅಭಿಮಾನಿಗಳಿಗೂ ಬೇಸರ ಮೂಡಿಸಿದೆ.

ನ್ಯೂಜಿಲೆಂಡ್ ಸ್ಕ್ವಾಡ್ ಹೀಗಿದೆ: ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಗ್ಲೆನ್ ಫಿಲಿಪ್ಸ್, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಆಡಮ್ ಮಿಲ್ನೆ, ಲಾಕ್ ಫರ್ಗುಸನ್, ಬ್ಲೇರ್ ಟಿಕ್ನರ್, ಮೈಕೆಲ್ ಬ್ರೇಸ್‌ವೆಲ್, ಇಶ್ ಸೋಧಿ

ಭಾರತ ಸ್ಕ್ವಾಡ್: ಹಾರ್ದಿಕ್ ಪಾಂಡ್ಯ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಶುಬ್ಮನ್ ಗಿಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಕುಲದೀಪ್ ಯಾದವ್, ಹರ್ಷಲ್ ಪಟೇಲ್

Story first published: Saturday, November 19, 2022, 23:54 [IST]
Other articles published on Nov 19, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+