Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2007ರ 'ವಿಶ್ವಕಪ್' ಫೈನಲ್ ನೆನೆಪಿಸಿದ '2020 ಐಪಿಎಲ್' ಫೈನಲ್

After 2007 world cup Mahela Jayawardene will face Ricky Ponting again

ನವೆಂಬರ್ 10 ರಂದು ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಐಪಿಎಲ್ ಫೈನಲ್ ಪಂದ್ಯ ನಡೆಯುತ್ತಿದೆ. ಐದನೇ ಬಾರಿ ಐಪಿಎಲ್ ಗೆಲ್ಲುವ ತವಕದಲ್ಲಿ ಮುಂಬೈ ಇದ್ದರೆ, ಚೊಚ್ಚಲ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಬೇಕು ಎಂದು ಡೆಲ್ಲಿ ಪ್ರಯತ್ನಿಸುತ್ತಿದೆ.

2020ರ ಐಪಿಎಲ್ ಫೈನಲ್ ಪಂದ್ಯ ಮುಂಬೈ ವರ್ಸಸ್ ಡೆಲ್ಲಿ ಎಂದೇ ಎಲ್ಲರೂ ನೋಡುತ್ತಿದ್ದಾರೆ, ಆದ್ರೆ, ಈ ಪಂದ್ಯ 2007ರ ಏಕದಿನ ವಿಶ್ವಕಪ್ ಫೈನಲ್ ನೆನೆಪಿಸುತ್ತಿದೆ ಎನ್ನುವುದು ವಿಶೇಷ. 2007 ವಿಶ್ವಕಪ್ ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಸೆಣಸಾಡಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಪಂದ್ಯ ಗೆದ್ದು ವಿಶ್ವಕಪ್ ಎತ್ತಿ ಹಿಡಿದಿತ್ತು. ಈ ಪಂದ್ಯಕ್ಕೂ ಐಪಿಎಲ್ 2020 ಫೈನಲ್‌ಗೂ ಏನ್ ಸಂಬಂಧ? ಮುಂದೆ ಓದಿ...

ರಿಕಿ ಪಾಂಟಿಂಗ್ ವರ್ಸಸ್ ಜಯವರ್ಧನೆ

ರಿಕಿ ಪಾಂಟಿಂಗ್ ವರ್ಸಸ್ ಜಯವರ್ಧನೆ

2007 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದು ರಿಕಿ ಪಾಂಟಿಂಗ್. ಶ್ರೀಲಂಕಾ ತಂಡವನ್ನು ಮುನ್ನಡೆಸಿದ್ದು ಮಹೇಲ ಜಯವರ್ಧನೆ. ಈ ಇಬ್ಬರು ಸೂಪರ್ ಕ್ಲಾಸ್ ಆಟಗಾರರು ಈಗ 2020ರ ಫೈನಲ್‌ನಲ್ಲಿ ಸೆಣಸಾಡುತ್ತಿದ್ದಾರೆ.

ಯಾರ ಮಾಸ್ಟರ್ ಮೈಂಡ್‌ ಗೆಲ್ಲುತ್ತೆ?

ಯಾರ ಮಾಸ್ಟರ್ ಮೈಂಡ್‌ ಗೆಲ್ಲುತ್ತೆ?

ಅಂದು 2007ರ ವಿಶ್ವಕಪ್‌ ಫೈನಲ್‌ನಲ್ಲಿ ಮೈದಾನಕ್ಕಿಳಿದು ಹೋರಾಡಿದ್ದ ಇಬ್ಬರು ದಿಗ್ಗಜ ಆಟಗಾರರು, ಇಂದು ಐಪಿಎಲ್‌ನಲ್ಲಿ ಆಟಗಾರರ ಹಿಂದೆ ನಿಂತು ಆಟವಾಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಮಹೇಲ ಜಯವರ್ಧನೆ, ಡೆಲ್ಲಿ ತಂಡದ ಮುಖ್ಯ ಕೋಚ್ ಆಗಿ ರಿಕಿ ಪಾಂಟಿಂಗ್ ಕಾರ್ಯನಿರ್ವಹಿಸುತ್ತಿದ್ದಾರೆ.

ಮುಂಬೈ ಪರ ಕಪ್ ಗೆದ್ದಿರುವ ರಿಕಿ ಪಾಂಟಿಂಗ್

ಮುಂಬೈ ಪರ ಕಪ್ ಗೆದ್ದಿರುವ ರಿಕಿ ಪಾಂಟಿಂಗ್

ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ರಿಕಿ ಪಾಂಟಿಂಗ್ ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೋಚ್ ಆಗಿ ಕೆಲಸ ಮಾಡಿದ್ದರು. 2015ರಲ್ಲಿ ಮುಂಬೈ ಐಪಿಎಲ್ ಗೆಲುವಿನ ಹಿಂದೆ ಆಸಿಸ್ ಮಾಜಿ ನಾಯಕ ಇದ್ದರು. ಆ ಅನುಭವ ಈಗ ಡೆಲ್ಲಿ ಪರ ಕೆಲಸ ಮಾಡಬಹುದು. ಮುಂಬೈ ತಂಡವನ್ನು ಬಹಳ ಹತ್ತಿರದಿಂದ ತಿಳಿದಿರುವ ಪಾಂಟಿಂಗ್, ಡೆಲ್ಲಿ ಗೆಲುವಿಗೆ ರಣತಂತ್ರ ರೂಪಿಸಬಹುದು. 2018ರಿಂದ ಡೆಲ್ಲಿ ತಂಡದ ಕೋಚ್ ಆಗಿ ರಿಕಿ ಇದ್ದಾರೆ.

ಜಯವರ್ಧನೆ ಬಲ ನೆಚ್ಚಿಕೊಂಡಿರುವ ರೋಹಿತ್ ಪಡೆ

ಜಯವರ್ಧನೆ ಬಲ ನೆಚ್ಚಿಕೊಂಡಿರುವ ರೋಹಿತ್ ಪಡೆ

2017 ರಿಂದ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿ ಮಹೇಲ ಜಯವರ್ಧನೆ ಕಾರ್ಯನಿರ್ವಹಿಸುತ್ತಿದ್ದಾರೆ. 2017 ಮತ್ತು 2019ರಲ್ಲಿ ಐಪಿಎಲ್ ಗೆಲುವಿನ ಹಿಂದೆ ಜಯವರ್ಧನೆ ಇದ್ದರು. ಎದುರಾಳಿ ತಂಡದಲ್ಲಿರುವ ರಿಕಿ ಪಾಂಟಿಂಗ್ ಕುರಿತು ಚೆನ್ನಾಗಿ ಬಲ್ಲ ಜಯವರ್ಧನೆ ಪ್ರತಿ ರಣತಂತ್ರ ರೂಪಿಸಬಹುದು. 2007 ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಳ್ಳಲು ಒಂದು ಅವಕಾಶ ಇದಾಗಿದೆ.

Story first published: Tuesday, November 10, 2020, 17:01 [IST]
Other articles published on Nov 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+