ಸಾಮಿ ವರ್ಣಭೇದ ಆರೋಪದ ಬೆನ್ನಲ್ಲೇ ವೈರಲ್ ಆಗ್ತಿದೆ ಇಶಾಂತ್ ಶರ್ಮಾ ಪೋಸ್ಟ್

ಕ್ರೀಡಾ ಲೋಕದಲ್ಲಿ 'ಬ್ಲಾಕ್ ಲೈವ್ಸ್ ಮ್ಯಾಟರ್' ಅಭಿಯಾನ ತೀವ್ರಗೊಳ್ಳುತ್ತಿದ್ದಂತೆಯೇ ಕ್ರಿಕೆಟ್‌ನಲ್ಲೂ ವರ್ಣಭೇದದ ಮಾತುಗಳು ಕೇಳಿಬರುತ್ತಿದೆ. ಐಪಿಎಲ್‌ನಲ್ಲಿ ಡ್ಯಾರೆ ಸಮಿ ಈ ಬಗ್ಗೆ ಗಂಭೀರ ಆರೋಪವನ್ನು ಮಾಡಿದ್ದರು. ಅದಾದ ಬಳಿಕ ಅದಕ್ಕೆ ಪೂರಕವಾಗಿ ಟೀಮ್ ಇಂಡಿಯಾ ಬೌಲರ್ ಇಶಾಂತ್ ಶರ್ಮಾ ಮಾಡಿದ ಪೋಸ್ಟ್ ಒಂದು ವೈರಲ್ ಆಗ್ತಿದೆ.
ಕಳೆದೆರಡು ದಿನಗಳ ಹಿಂದೆಯಷ್ಟೇ ಡ್ಯಾರೆನ್ ಸಮಿ ಐಪಿಎಲ್‌ನಲ್ಲೂ ನಾನು ನಿಂದನೆಗೆ ಒಳಗಾಗಿದ್ದೆ. ಆದರೆ ಅದು ಈಗ ನನಗೆ ಅರ್ಥವಾಗಿದೆ. ಅದರ ಅರ್ಥವೇನೆಂದು ನಾನು ಈಗಷ್ಟೇ ತಿಳಿಸುಕೊಂಡಿದ್ದೇನೆ ಎಂದು ಆಕ್ರೋಶದಿಂದ ಪೋಸ್ಟ್ ಮಾಡಿದ್ದರು. ಆದರೆ ಈ ಬಗ್ಗೆ ಹೆಚ್ಚಿನ ವಿಚಾರಗಳನ್ನೇನೂ ಹಂಚಿಕೊಂಡಿರಲಿಲ್ಲ.

ಮೆಚ್ಚುಗೆಯ ಮಾತು ಎಂದುಕೊಂಡಿದ್ದೆ
ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಡುತ್ತಿದ್ದಾಗ ಕೆಲ ಸಹ ಆಟಗಾರರು ತನ್ನನ್ನು ಹಾಗೂ ಶ್ರೀಲಂಕಾದ ತಿಸರ ಪೆರೆರ ಅವರನ್ನು 'ಕಾಲೂ' ಎಂದು ಕರಿಯುತ್ತಿದ್ದರು. ಆದರೆ ನಾನು ಅದು ಮೆಚ್ಚುಗೆಯ ಮಾತು ಎಂದುಕೊಂಡಿದ್ದೆ. ಆದರೆ ಅದರ ಅರ್ಥ ಈಗಷ್ಟೇ ತಿಳಿಯಿತು. ನಾನು ತುಂಬಾ ಕೋಪಗೊಂಡಿದ್ದೇನೆ ಎಂದು ಸಾಮಿ ಬರೆದುಕೊಂಡಿದ್ದರು.

2014ರ ಫೋಟೋ ವೈರಲ್
ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಹಳೆಯ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಇಶಾಂತ್ ಶರ್ಮಾ ತಂಡದ ಸಹ ಆಟಗಾರರ ಜೊತೆಗೆ ಇರುವ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡದ್ದರು.2014ರಲ್ಲಿ ಹಂಚಿಕೊಂಡಿದ್ದ ಈ ಫೋಟೋ ಈಗ ಮುನ್ನೆಲೆಗೆ ಬಂದು ದೊಡ್ಡ ಚರ್ಚೆಗೆ ಕಾರಣವಾಗಿದೆ.
View this post on InstagramMe, bhuvi, kaluu and gun sunrisers
A post shared by Ishant Sharma (@ishant.sharma29) on
'ಕಾಲು' ಎಂದು ಕರೆದಿದ್ದ ಇಶಾಂತ್
ಇಶಾಂತ್ ಶರ್ಮಾ ಅಂದು ಹಂಚಿಕೊಂಡಿದ್ದ ಫೋಟೋಗೆ ಹಾಕಿದ್ದ ಅಡಿಬರಹ ಈಗ ಚರ್ಚೆಯ ಕೇಂದ್ರ ಬಿಂದು. ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್ ಡ್ಯಾರೆನ್ ಸಾಮಿ ಹಾಗೂ ಡೇಲ್ ಸ್ಟೇನ್ ಈ ಫೋಟೋದಲ್ಲಿದ್ದಾರೆ. ಆದರೆ ಡ್ಯಾರನ್ ಸಾಮಿ ಅವರನ್ನು ಇಶಾಂತ್ 'ಕಾಲು' ಎಂದು ಸಂಬೋಧಿಸಿರುವುದು ಬೆಳಕಿಗೆ ಬಂದಿದೆ. ಇದು ಮತ್ತೊಂದು ಹಂತದ ಚರ್ಚೆಗೆ ಕಾರಣವಾಗಿದೆ.

ಪಠಾಣ್, ಪಾರ್ಥೀವ್ ಪ್ರತಿಕ್ರಿಯೆ
ಡ್ಯಾರೆನ್ ಸಮಿ ಮಾಡಿದ್ದ ಈ ಆರೋಪಕ್ಕೆ ತಂಡದ ಸಹ ಆಟಗಾರರಾಗಿದ್ದ ಪಾರ್ಥೀವ್ ಪಟೇಲ್ ಮತ್ತು ಇರ್ಫಾನ್ ಪಠಾಣ್ ಪ್ರತಿಕ್ರಿಯಿಸಿ ಅಂತಾ ಬೆಳವಣಿಗೆ ಆಗಿದ್ದು ನಮ್ಮ ಕಿವಿಗೆ ಬಿದ್ದಿಲ್ಲ ಎಂದು ಹೇಳಿದ್ದರು. ಆದರೆ ಇರ್ಫಾನ್ ಜನಾಂಗೀಯ ನಿಂದನೆಗಳು ಭಾರತೀಯ ದೇಸಿ ಕ್ರಿಕೆಟ್‌ನಲ್ಲೂ ಇತ್ತು. ದಕ್ಷಿಣ ಭಾರತದ ಕ್ರಿಕೆಟಿಗರು ಇದಕ್ಕೆ ಒಳಗಾಗುತ್ತಿದ್ದದ್ದು ದೇಸಿ ಕ್ರಿಕೆಟ್‌ನಲ್ಲಿ ನನ್ನ ಗಮನಕ್ಕೆ ಬಂದಿತ್ತು ಎಂದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications