ಐಪಿಎಲ್ 2021: ಹರಾಜು ಪಟ್ಟಿಯಿಂದ ಹೊರಬಿದ್ದರೂ 'ಅಚ್ಚರಿಯ ಕರೆ'ಯ ನಿರೀಕ್ಷೆಯಲ್ಲಿ ಶ್ರೀಶಾಂತ್

ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದು ಶಿಕ್ಷೆ ಅನುಭವಿಸಿದ ಬಳಿಕ ಕೇರಳದ ವೇಗಿ ಶ್ರೀಶಾಂತ್ ಈಗ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ. ಈ ಬಾರಿಯ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇರಳ ತಂಡವನ್ನು ಪ್ರತಿನಿಧಿಸುವ ಮೂಲಕ ಶ್ರೀಶಾಂತ್ ದೇಶಿಯ ಕ್ರಿಕೆಟ್‌ಗೆ ಪುನಾರಂಭ ಮಾಡಿದ್ದಾರೆ. ಆದರೆ ಐಪಿಎಲ್‌ಗೆ ಮರಳುವ ಶ್ರೀಶಾಂತ್ ಆಸೆಗೆ ತಣ್ಣೀರು ಬಿದ್ದಿದೆ.
ಹೌದು, ಈ ಬಾರಿಯ ಐಪಿಎಲ್‌ನ ಮಿನಿ ಹರಾಜಿಗೆ ಅಂತಿಮ ಪಟ್ಟಿಯನ್ನು ಬಿಸಿಸಿಐ ಗುರುವಾರ ಬಿಡುಗಡೆಗೊಳಿಸಿತು. ಈ 292 ಆಟಗಾರರ ಈ ಅಂತಿಮ ಪಟ್ಟಿಯಲ್ಲಿ ಶ್ರೀಶಾಂತ್ ಸ್ಥಾನವನ್ನು ಪಡೆದಿಲ್ಲ. ಯಾವುದೇ ಫ್ರಾಂಚೈಸಿ ಶ್ರೀಶಾಂತ್ ಕೊಳ್ಳಲು ಮನಸು ಮಾಡದಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ಪಟ್ಟಿಯಿಂದ ಶ್ರೀಶಾಂತ್ ಹೊರಬಿದ್ದಿದ್ದಾರೆ.
ಆದರೆ ಐಪಿಎಲ್ ಹರಾಜಿನಿಂದ ಹೊರ ಬಿದ್ದರೂ ಶ್ರೀಶಾಂತ್ ತಾನು ಬಿಟ್ಟುಕೊಡಲಾರೆ ಎಂದಿದ್ದಾರೆ. ನನಗೆ ಇನ್ನೂ 38 ವರ್ಷ. ಈ ಬಾರಿಯ ಐಪಿಎಲ್‌ನಲ್ಲಿ ಅವಕಾಶ ಪಡೆಯದಿದ್ದರೆ ಮುಂದಿನ ಐಪಿಎಲ್ ಇದೆ. ಅದಕ್ಕಾಗಿ ನಾನು ಪ್ರಯತ್ನಿಸಲಿದ್ದೇನೆ. ಇಷ್ಟಕ್ಕೆ ಬೇಸರದಿಂದ ಕೈಕಟ್ಟಿ ಕೂರಲಾರೆ ಎಂದಿದ್ದಾರೆ ಶ್ರೀಶಾಂತ್.
ಇಷ್ಟು ಮಾತ್ರವಲ್ಲ, ಅಂತಿಮ ಪಟ್ಟಿಯಿಂದ ಹೊರ ಬಿದ್ದ ನಂತರವೂ ಶ್ರೀಶಾಂತ್ ಈ ಬಾರಿಯ ಐಪಿಎಲ್‌ನಲ್ಲಿ ಆಡುವ ಆಸೆಯನ್ನು ಕೈಬಿಟ್ಟಿಲ್ಲ ಎಂದಿದ್ದಾರೆ. ಇದಕ್ಕಾಗಿ ಶ್ರೀಶಾಂತ್ ಕ್ರಿಸ್ ಗೇಲ್ ಅವರ ಉದಾಹರಣೆಯನ್ನು ಮುಂದಿಟ್ಟಿದ್ದಾರೆ. ಹರಾಜಿನಿಂದ ಹೊರಬಿದ್ದ ನಂತರ ಕ್ರಿಸ್ ಗೇಲ್ ಅಂತಿಮ ಕ್ಷಣದಲ್ಲಿ ಅಚ್ಚರಿಯ ಕರೆಯನ್ನು ಸ್ವೀಕರಿಸಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದರು. ನಾನು ಕೂಡ ಅಂತದ್ದೇ ನಿರೀಕ್ಷೆಯನ್ನು ಹೊಮದಿದ್ದೇನೆ ಎಂದು ಶ್ರೀಶಾಂತ್ ಹೇಳಿದ್ದಾರೆ.
ನನಗಿನ್ನೂ 38 ವರ್ಷ. ಈ ಬಾರಿಯ ಐಪಿಎಲ್‌ನಲ್ಲಿ ಅವಕಾಶ ಸಿಗದಿದ್ದರೂ ಪರವಾಗಿಲ್ಲ. ನಾನು ನನ್ನ ಪ್ರಯತ್ನವನ್ನು ಮುಂದುವರಿಸುತ್ತೇನೆ. ಮುಂದಿನ ಬಾರಿಯ ಐಪಿಎಲ್‌ನಲ್ಲಿ ಅವಕಾಶವನ್ನು ಪಡೆದುಕೊಳ್ಳುವಂತೆ ನನ್ನ ಪ್ರಯತ್ನವನ್ನು ಮುಂದುವರಿಸಲಿದ್ದೇನೆ ಎಂದು ಶ್ರೀಶಾಂತ್ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications