For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ಸೋಲಿನ ಬೆನ್ನಲ್ಲೇ ಇದೇನು ಹರಿದಾಡುತ್ತಿರುವ ಹೊಸ ಸುದ್ದಿ

After Loosing Match Against Delhi Capitals, Discussion In Social Media About Devdutt Padikkal

ಸತತ ಎರಡು ಗೆಲುವಿನಿಂದ ಲಯ ಕಂಡುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಸೋಲು ಅನುಭವಿಸಿದೆ.

ಆ ಮೂಲಕ, ಆಡಿದ ಐದು ಪಂದ್ಯದಲ್ಲಿ ಮೂರರಲ್ಲಿ ಗೆದ್ದು , ಎರಡರಲ್ಲಿ ಸೋತಿರುವ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ದುಬೈ ಇಂಟರ್‌ ನ್ಯಾಷನಲ್ ಮೈದಾನದಲ್ಲಿ ಕೊಹ್ಲಿ ಪಡೆ, ಟಾಸ್‌ ಗೆದ್ದು ಫೀಲ್ಡ್ ಆಯ್ಕೆ ಮಾಡಿಕೊಂಡಿತ್ತು.

ಹೈಸ್ಕೋರಿಂಗ್ ಮ್ಯಾಚ್ ನಲ್ಲಿ ಡೆಲ್ಲಿ ತಂಡ 196ರನ್ ಹೊಡೆದರೆ, ಇದಕ್ಕೆ ಪ್ರತಿರೋಧ ನೀಡಲು ಆಗದೇ, ರಾಯಲ್ ಚಾಲೆಂಜರ್ಸ್ ಕೇವಲ 137 ರನ್ ಗಳಿಸಿ, 59 ರನ್ನಿನಿಂದ ಶರಣಾಗಿದೆ.

ಸೋಮವಾರದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋತ ನಂತರ, ಸಾಮಾಜಿಕ ತಾಣದಲ್ಲಿ ಇದಕ್ಕೆ ಕಾರಣ ಯಾರು ಎನ್ನುವುದರ ಬಗ್ಗೆ ವ್ಯಂಗ್ಯವಾದ ಚರ್ಚೆ ಆರಂಭವಾಗಿದೆ.

ಐಪಿಎಲ್ ಹರಾಜು

ಐಪಿಎಲ್ ಹರಾಜು

ಐಪಿಎಲ್ ಹರಾಜಿನಲ್ಲಿ ಇಪ್ಪತ್ತು ಲಕ್ಷಕ್ಕೆ ದೇವದತ್ ಪಡಿಕ್ಕಲ್ , ರಾಯಲ್ ಚಾಲೆಂಜರ್ಸ್ ಪಾಲಾಗಿದ್ದರು. ಇಪ್ಪತ್ತು ವರ್ಷದ ಪಡಿಕ್ಕಲ್, ಹಾಲೀ ಸರಣಿಯ ಮೂಲಕ ಐಪಿಎಲ್ ಗೆ ಪಾದಾರ್ಪಣೆ ಮಾಡಿದ್ದಾರೆ. ಆಡಿದ ಮೊದಲ ಪಂದ್ಯದಲ್ಲೇ ಅರ್ಧ ಶತಕ ಬಾರಿಸುವ ಮೂಲಕ ಎಲ್ಲರ ಗಮನ ಸೆಳಿದಿದ್ದರು.

ಬೆಂಗಳೂರು ವರ್ಸಸ್ ಪಂಜಾಬ್

ಬೆಂಗಳೂರು ವರ್ಸಸ್ ಪಂಜಾಬ್

ಮೊದಲ ಪಂದ್ಯದಲ್ಲಿ ಬೆಂಗಳೂರು ತಂಡ, ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ದ ಹತ್ತು ರನ್ ಗಳ ಜಯ ಸಾಧಿಸಿತ್ತು. ಪಡಿಕ್ಕಲ್ ಆ ಪಂದ್ಯದಲ್ಲಿ 56 ರನ್ ಗಳಿಸಿದ್ದರು. ಇದಾದ ನಂತರದ ಪಂದ್ಯದಲ್ಲಿ ಆರ್‌ಸಿಬಿ ತಂಡ, ಪಂಜಾಬ್ ವಿರುದ್ದ 97 ರನ್ ಗಳಿಂದ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಪಡಿಕ್ಕಲ್ ಹೊಡೆದದ್ದು ಕೇವಲ ಒಂದು ರನ್.

ಮುಂಬೈ ತಂಡದ ವಿರುದ್ದ ಆರ್‌ಸಿಬಿ

ಮುಂಬೈ ತಂಡದ ವಿರುದ್ದ ಆರ್‌ಸಿಬಿ

ಇದಾದ ನಂತರ ಮುಂಬೈ ತಂಡದ ವಿರುದ್ದ ಆರ್‌ಸಿಬಿ ಸೂಪರ್ ಓವರ್ ನಲ್ಲಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ 54 ರನ್ ಅನ್ನು, ನಂತರ ರಾಜಸ್ಥಾನ ವಿರುದ್ದ ಎಂಟು ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು. ಆ ಪಂದ್ಯದಲ್ಲೂ ಮಿಂಚಿದ್ದ ಪಡಿಕ್ಕಲ್ 63 ರನ್ ಹೊಡೆದಿದ್ದರು.

ಪಡಿಕ್ಕಲ್ ಬೇಗ ಔಟಾದರೆ, ಟಿವಿ ಆಫ್ ಮಾಡೋದು ಒಳ್ಳೆಯದು

ಪಡಿಕ್ಕಲ್ ಬೇಗ ಔಟಾದರೆ, ಟಿವಿ ಆಫ್ ಮಾಡೋದು ಒಳ್ಳೆಯದು

ಈಗ, ಸೋಮವಾರದ ಪಂದ್ಯದಲ್ಲಿ ಡೆಲ್ಲಿ ವಿರುದ್ದ ಬೆಂಗಳೂರು ತಂಡ ಸೋತಿತ್ತು. ಈ ಪಂದ್ಯದಲ್ಲಿ ಪಡಿಕ್ಕಲ್ ಹೊಡೆದದ್ದು ಕೇವಲ ನಾಲ್ಕು ರನ್. ಅಲ್ಲಿಗೆ, ಪಡಿಕ್ಕಲ್ ಆಡುವ ಪಂದ್ಯವನ್ನು ಮಾತ್ರ ಆರ್‌ಸಿಬಿ ಗೆಲ್ಲುತ್ತದೆ. ಇಲ್ಲಾಂದರೆ ಬೆಂಗಳೂರು ತಂಡ ಸೋಲುತ್ತದೆ. ಹಾಗಾಗಿ, ಪಡಿಕ್ಕಲ್ ಬೇಗ ಔಟಾದರೆ, ಟಿವಿ ಆಫ್ ಮಾಡೋದು ಒಳ್ಳೆಯದು ಎನ್ನುವ ವ್ಯಂಗ್ಯಭರಿತ ಚರ್ಚೆ, ಸಾಮಾಜಿಕ ತಾಣದಲ್ಲಿ ನಡೆಯುತ್ತಿದೆ.

Story first published: Tuesday, October 6, 2020, 11:40 [IST]
Other articles published on Oct 6, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+