ಭಾರತ ತಂಡದ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತನ್ನ ಹಿಡಿತವನ್ನು ಬಲಪಡಿಸಿದೆ. ಪಂದ್ಯದ ಎರಡನೇ ದಿನದಂತ್ಯಕ್ಕೆ ದಕ್ಷಿಣ ಆಫ್ರಿಕಾ 5 ವಿಕೆಟ್‌ಗೆ 256 ರನ್ ಗಳಿಸಿದ್ದು, 11 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿದೆ. ತಮ್ಮ ವೃತ್ತಿಜೀವನದ ಕೊನೆಯ ಟೆಸ್ಟ್ ಸರಣಿಯಲ್ಲಿ ಆಡಲು ಬಂದಿದ್ದ ಡೀನ್ ಎಲ್ಗರ್ ಅಮೋಘ ಬ್ಯಾಟಿಂಗ್ ವೇಳೆ ಶತಕ ಬಾರಿಸಿದರು.
ಸೆಂಚುರಿಯನ್ ನಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೇಲೆ ದಕ್ಷಿಣ ಆಫ್ರಿಕಾ ತಂಡ ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ಪಂದ್ಯದ ಮೊದಲ ದಿನ ವೇಗದ ಬೌಲರ್ ಕಗಿಸೊ ರಬಾಡ ಅವರ 5 ವಿಕೆಟ್‌ಗಳ ಕಬಳಿಸಿದರು. ಭಾರತದ ಕಡೆಯಿಂದ ಕೆಎಲ್ ರಾಹುಲ್ ಹರಿಣಗಳ ಬೌಲರ್‌ಗಳನ್ನು ಧೈರ್ಯದಿಂದ ಎದುರಿಸಿ ಶತಕ ಗಳಿಸಿದರು. ಈ ಅಪ್ರತಿಮ ಇನ್ನಿಂಗ್ಸ್‌ನಿಂದಾಗಿ ಭಾರತ ಹೇಗೋ 245 ರನ್‌ಗಳ ಸ್ಕೋರ್ ತಲುಪಿತು.

ದಕ್ಷಿಣ ಆಫ್ರಿಕಾದ ದಿಗ್ಗಜ ಡೀನ್ ಎಲ್ಗರ್ ಭಾರತ ವಿರುದ್ಧದ ಸರಣಿಗೂ ಮುನ್ನ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ವೃತ್ತಿಜೀವನದ ಕೊನೆಯ ಟೆಸ್ಟ್ ಸರಣಿಯಲ್ಲಿ ಈ ಶ್ರೇಷ್ಠ ಬ್ಯಾಟ್ಸ್‌ಮನ್ ಭರ್ಜರಿ ಬ್ಯಾಟಿಂಗ್ ಮಾಡಿ ಭರ್ಜರಿ ಶತಕ ಸಿಡಿಸಿದರು. ಅವರು 79 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು ಮತ್ತು 140 ಎಸೆತಗಳಲ್ಲಿ 19 ಬೌಂಡರಿಗಳ ಸಹಾಯದಿಂದ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಇದು ಸೆಂಚುರಿಯನ್‌ನಲ್ಲಿ ಈ ಬ್ಯಾಟ್ಸ್‌ಮನ್‌ನ ಮೊದಲ ಟೆಸ್ಟ್ ಶತಕವಾಗಿದೆ. ಎರಡನೇ ದಿನ ಎಲ್ಗರ್ 211 ಎಸೆತಗಳನ್ನು ಆಡಿ 140 ರನ್ ಗಳಿಸಿ ಅಜೇಯರಾಗಿ ಮರಳಿದ್ದು ಭಾರತಕ್ಕೆ ಸಮಸ್ಯೆಯಾಗಿದೆ.
ಸೆಂಚುರಿಯನ್ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಉತ್ತಮ ಸ್ಥಿತಿಯಲ್ಲಿದ್ದಂತೆ ಕಂಡರೂ, ಟೀಂ ಇಂಡಿಯಾ ಮೂರನೇ ದಿನದಲ್ಲಿ ಪುಟಿದೇಳಬಹುದು. ಪ್ರಸ್ತುತ ದಕ್ಷಿಣ ಆಫ್ರಿಕ 5 ವಿಕೆಟ್‌ಗೆ 256 ರನ್ ಸೇರಿಸಿದ್ದು, 11 ರನ್ ಮುನ್ನಡೆ ಸಾಧಿಸಿದೆ, ಆದ್ದರಿಂದ ದಿನದ ಮೊದಲ ಸೆಷನ್‌ನಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ತೇವಾಂಶದ ಲಾಭವನ್ನು ಪಡೆದುಕೊಂಡು ದಕ್ಷಿಣ ಆಫ್ರಿಕಾವನ್ನು ಆರಂಭಿಕ ಮುನ್ನಡೆ ಹಿಗ್ಗಿಸುವುದನ್ನು ತಡೆಯಬಹುದು. ಪಂದ್ಯದ ಎರಡನೇ ದಿನ ಇಬ್ಬರೂ ಬೌಲರ್‌ಗಳು ತಲಾ 2 ವಿಕೆಟ್ ಪಡೆದರು.

ಭಾರತ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಟೆಸ್ಟ್ ಸ್ವರೂಪಕ್ಕೆ ವಿದಾಯ ಘೋಷಿಸಿದ್ದ ದಕ್ಷಿಣ ಆಫ್ರಿಕಾದ ದಿಗ್ಗಜರು ಸ್ಫೋಟಕ ಆಟ ಪ್ರದರ್ಶಿಸಿದರು. ತಂಡಕ್ಕೆ ಆರಂಭಿಕ ಹಿನ್ನಡೆಯಾದ ಬಳಿಕ ಇನಿಂಗ್ಸ್ ನಿರ್ವಹಣೆ ಮಾತ್ರವಲ್ಲದೆ ಚುರುಕಿನ ಹೊಡೆತಗಳನ್ನು ಬಾರಿಸುವ ಮೂಲಕ ತಂಡವನ್ನು 150 ರನ್ ಗಳ ಗಡಿ ದಾಟಿಸಿದರು. ಆಕ್ರಮಣಕಾರಿ ಬ್ಯಾಟಿಂಗ್ ಮಾಡುವಾಗ ಪ್ರತಿ ಭಾರತೀಯ ಬೌಲರ್ ವಿರುದ್ಧವೂ ಪ್ರಬಲ ಹೊಡೆತಗಳನ್ನು ಬಾರಿಸಿದರು. ಇದು ಭಾರತದ ವಿರುದ್ಧ ಅವರ ಮೂರನೇ ಟೆಸ್ಟ್ ಶತಕ ಮತ್ತು ಅವರ ವೃತ್ತಿಜೀವನದಲ್ಲಿ 14 ನೇ ಶತಕವಾಗಿದೆ.