ಟಿ20 ಮತ್ತು ಏಕದಿನ ಸರಣಿಗಾಗಿ ಶ್ರೀಲಂಕಾ ಪ್ರವಾಸಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಭಾರತ ತಂಡಗಳನ್ನು ಪ್ರಕಟಿಸುತ್ತಿದ್ದಂತೆ, ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ನಿರೀಕ್ಷೆಗಳು ತ್ವರಿತವಾಗಿ ತಲೆಕೆಳಗಾದವು.
ರೋಹಿತ್ ಶರ್ಮಾ ನಿವೃತ್ತಿಯ ನಂತರ, ಭಾರತ ತಂಡದ ನೂತನ ಟಿ20 ನಾಯಕನಾಗಿ ನೇಮಕಗೊಳ್ಳುವ ನಿರೀಕ್ಷೆಯಿತ್ತು. ಆದರೆ ಭಾರತ ತಂಡದ ಹೊಸ ನಿರ್ವಹಣಾ ರಚನೆ, ವಿಶೇಷವಾಗಿ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ಬರುವುದರೊಂದಿಗೆ, ವಿಷಯಗಳ ಬಗ್ಗೆ ವಿಭಿನ್ನ ದೃಷ್ಟಿಕೋನವನ್ನು ಹೊಂದಲಾಯಿತು.

ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಕೈಯಲ್ಲಿ ಟಿ20 ನಾಯಕತ್ವದ ಬ್ಯಾಟನ್ ಹಸ್ತಾಂತರಿಸಿದರು. ಇನ್ನು ಉಪನಾಯಕತ್ವವು ಶುಭ್ಮನ್ ಗಿಲ್‌ಗೆ ನೀಡಲಾಯಿತು.
ಹಾರ್ದಿಕ್ ಪಾಂಡ್ಯ ಅವರ ಸ್ಥಿರತೆ ಮತ್ತು ಫಿಟ್ನೆಸ್ ಮನವರಿಕೆಯಾಗದ ಕಾರಣ, ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಸೂರ್ಯಕುಮಾರ್ ಯಾದವ್ ನಾಯಕನ ಪಾತ್ರವನ್ನು ವಹಿಸಬೇಕೆಂದು ಬಯಸಿದರು.
ಪಿಟಿಐ ವರದಿ ಪ್ರಕಾರ, ಇದೀಗ ಭಾರತ ತಂಡಕ್ಕೆ ಗೌತಮ್ ಗಂಭೀರ್ ಅವರ ಆಗಮನವು ಒಂದು ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಹೇಳಿಕೊಂಡಿದೆ. ಆದರೆ ಭಾರತ ತಂಡದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರಿಗೆ ಹಾರ್ದಿಕ್ ಪಾಂಡ್ಯ ಅವರ ಯುದ್ಧತಂತ್ರದ ಅರಿವಿನ ಬಗ್ಗೆ ಮನವರಿಕೆಯಾಗಲಿಲ್ಲ. ಇದು ಯಶಸ್ವಿ ನಾಯಕತ್ವದ ಅವಧಿಗೆ ಅಗತ್ಯವಾಗಿರುತ್ತದೆ.

ಭಾರತದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಪ್ರವೇಶವು ಹಾರ್ದಿಕ್ ಪಾಂಡ್ಯ ಅವರ ರಾಷ್ಟ್ರೀಯ ನಾಯಕತ್ವದ ನಿರೀಕ್ಷೆಯನ್ನು ನಿಸ್ಸಂಶಯವಾಗಿ ಅಡ್ಡಿಪಡಿಸಿದೆ.
ಆದರೆ, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಸಹ ಹಾರ್ದಿಕ್ ಪಾಂಡ್ಯ ಅವರು ಅಂತಾರಾಷ್ಟ್ರೀಯ ನಾಯಕನಾಗಿ ನಿರೀಕ್ಷಿಸುವಷ್ಟು ಯುದ್ಧತಂತ್ರದಲ್ಲಿ ಸಮರ್ಥರಾಗಿದ್ದಾರೆ ಎಂದು ಸಂಪೂರ್ಣವಾಗಿ ಮನವರಿಕೆ ಮಾಡಲಿಲ್ಲ ಎಂದು ಪಿಟಿಐ ವರದಿ ಹೇಳಿದೆ.
ಹಾರ್ದಿಕ್ ಪಾಂಡ್ಯಗೆ ಸ್ವಲ್ಪ ಕೈ ಹಿಡಿಯುವ ಅಗತ್ಯವಿದೆ. ಗುಜರಾತ್ ಟೈಟನ್ಸ್‌ನಲ್ಲಿ ಆಶಿಶ್ ನೆಹ್ರಾ ಅದನ್ನು ಮಾಡಿದರು. ಮುಂಬೈ ಇಂಡಿಯನ್ಸ್‌ನಲ್ಲಿ ಮಾರ್ಕ್ ಬೌಚರ್ ಆ ವ್ಯಕ್ತಿಯಾಗಿರಲಿಲ್ಲ. ಸಾಮಾನ್ಯ ಪ್ರತಿಕ್ರಿಯೆಯ ಪ್ರಕಾರ, ಭಾರತೀಯ ಡ್ರೆಸ್ಸಿಂಗ್ ರೂಮ್‌ನಲ್ಲಿರುವ ಕಿರಿಯ ಆಟಗಾರರು ಹಾರ್ದಿಕ್ ಪಾಂಡ್ಯಗಿಂತ ಸೂರ್ಯಕುಮಾರ್ ಯಾದವ್‌ಗೆ ಉತ್ತಮವಾಗಿ ಪ್ರತಿಕ್ರಿಯಿಸುವ ಅವಕಾಶವನ್ನು ಹೊಂದಿದ್ದಾರೆ.
ಇದೀಗ ಹಾರ್ದಿಕ್ ಪಾಂಡ್ಯ ಮುಂದಿರುವ ಹಾದಿ ಏನೆಂದರೆ? ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುವುದಾಗಿದೆ ಮತ್ತು ಸರಣಿ ಗೆಲ್ಲಿಸಬೇಕಿದೆ.
ಅಲ್ಲದೆ, ಹಾರ್ದಿಕ್ ಪಾಂಡ್ಯ ಭಾರತದ ಪಂದ್ಯಗಳಿಗಾಗಿ ಕಾಯಲು ಸಾಧ್ಯವಿಲ್ಲ. ಏಕೆಂದರೆ ಅವರು ತಮ್ಮ ಕೆಳಮಟ್ಟದ ಅಂತಾರಾಷ್ಟ್ರೀಯ ಪ್ರದರ್ಶನವನ್ನು ಸುಧಾರಿಸಲು ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕಾಗುತ್ತದೆ. ಕಳೆದ 19 ತಿಂಗಳುಗಳಲ್ಲಿ ಎರಡು ವೈಟ್ ಬಾಲ್ ಸ್ವರೂಪಗಳಲ್ಲಿ ಶೇಕಡಾ 50ರಷ್ಟು ಅಂದರೆ, 69 ಪಂದ್ಯಗಳನ್ನು ಆಡಿದ್ದಾರೆ.
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಕಳೆದ 19 ತಿಂಗಳುಗಳಲ್ಲಿ ಭಾರತದ 79 ಟಿ20 ಪಂದ್ಯಗಳಲ್ಲಿ 46 ಮತ್ತು 59 ಏಕದಿನ ಪಂದ್ಯಗಳಲ್ಲಿ 23 ಪಂದ್ಯಗಳನ್ನು ಆಡಿದ್ದಾರೆ.
ಭಾರತೀಯ ಕ್ರಿಕೆಟ್ ಯಾವಾಗಲೂ ಟ್ವಿಸ್ಟ್ ಮತ್ತು ತಿರುವುಗಳಿಂದ ತುಂಬಿರುತ್ತದೆ. ಮುಂದಿನ ವರ್ಷ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗಲು ಹಾರ್ದಿಕ್ ಪಾಂಡ್ಯ ಬಯಸಿದರೆ, ಬರೋಡಾ ತಂಡಕ್ಕಾಗಿ ವಿಜಯ್ ಹಜಾರೆ ಟ್ರೋಫಿಯನ್ನು ಡಿಸೆಂಬರ್‌ನಲ್ಲಿ ಆಡಬೇಕಾಗುತ್ತದೆ.
ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಮಹತ್ವಾಕಾಂಕ್ಷೆಯು ಬೃಹತ್ ಅಡ್ಡಗೋಡೆ ಎದುರಿಸಿದೆ. ಆದರೆ ಕ್ರಿಕೆಟ್‌ನಲ್ಲಿ ಕೊನೆಯ ಚೆಂಡು ಬೌಲ್ ಮಾಡುವವರೆಗೂ ಅದು ಮುಗಿಯುವುದಿಲ್ಲ.