For Quick Alerts
ALLOW NOTIFICATIONS  
For Daily Alerts
 

Ahses 2023: ಮೊದಲ ದಿನದಾಟದಲ್ಲೇ ಇಂಗ್ಲೆಂಡ್ ಡಿಕ್ಲೇರ್; ಬೆನ್ ಸ್ಟೋಕ್ಸ್ ನಿರ್ಧಾರಕ್ಕೆ ಮಾಜಿ ನಾಯಕ ಬೇಸರ

ಶುಕ್ರವಾರ, ಜೂನ್ 16ರಂದು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಮೊದಲ ಆಶಸ್ ಟೆಸ್ಟ್‌ ಪಂದ್ಯದ ಮೊದಲನೇ ದಿನದಂದು ಆತಿಥೇಯ ಇಂಗ್ಲೆಂಡ್ ತಂಡ 8 ವಿಕೆಟ್‌ಗೆ 393 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು.

ಮೊದಲನೇ ದಿನವೇ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರ ಡಿಕ್ಲೇರ್ ನಿರ್ಧಾರದ ಬಗ್ಗೆ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಬೇಸರ ಮತ್ತು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Ahses 2023: Kevin Pietersen Upset On Decision To Declared By Ben Stokes On Day 1

ಮಾನಸಿಕ ಅನುಕೂಲಕ್ಕಾಗಿಯಾದರೂ ಇಂಗ್ಲೆಂಡ್ 400 ರನ್‌ಗಳ ಗಡಿ ದಾಟಬೇಕಿತ್ತು ಎಂದು ಕೆವಿನ್ ಪೀಟರ್ಸನ್ ಒತ್ತಿ ಹೇಳಿದ್ದಾರೆ. 2022ರಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಮರುನಿಗದಿಪಡಿಸಿದ ಟೆಸ್ಟ್‌ ಪಂದ್ಯದ ಉದಾಹರಣೆಯನ್ನು ಉಲ್ಲೇಖಿಸಿ, ಕೆವಿನ್ ಪೀಟರ್ಸನ್ ಆತಿಥೇಯರಿಗೆ 2ನೇ ದಿನ ಆಸ್ಟ್ರೇಲಿಯಾ ಸಮರ್ಥವಾಗಿ ತಿರುಗೇಟು ನೀಡಬಹುದು ಎಂದು ಎಚ್ಚರಿಸಿದ್ದಾರೆ.

ಕಳೆದ ವರ್ಷದ ಟೆಸ್ಟ್‌ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 416 ರನ್ ಗಳಿಸಿದ್ದರೂ, ಪಂದ್ಯವನ್ನು ಸೋತಿತು. ನಾಲ್ಕನೇ ಇನ್ನಿಂಗ್ಸ್‌ನಲ್ಲಿ 378 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಇಂಗ್ಲೆಂಡ್ ಅಂತಿಮವಾಗಿ ಆ ಪಂದ್ಯವನ್ನು ಐತಿಹಾಸಿಕವಾಗಿ ಗೆದ್ದಿತು.

Ahses 2023: Kevin Pietersen Upset On Decision To Declared By Ben Stokes On Day 1

ಮೊದಲ ದಿನದಾಟದ ನಂತರ ಸ್ಕೈ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್, "ಡಿಕ್ಲೇರ್ ನಿರ್ಧಾರ ಸರಿಯಾದ ಕ್ರಮವೇ ಎಂದು ಕಂಡುಕೊಳ್ಳಬೇಕು. ನಾನು ಯಾವಾಗಲೂ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 400-450 ರನ್ ಗಳಿಸಲು ಬಯಸುತ್ತೇನೆ. ಇದು ತಂಡದ ಮಾನಸಿಕ ಅನುಕೂಲಕ್ಕಾಗಿ ಮುಖ್ಯವಾಗಿದೆ, ಮುಂದೆ ಕಾದು ನೋಡಬೇಕು," ಎಂದಿದ್ದಾರೆ.

ಜೋ ರೂಟ್ (118) ಮತ್ತು ಆಲಿ ರಾಬಿನ್ಸನ್ (17) ಕ್ರೀಸ್‌ನಲ್ಲಿ ಆಡುತ್ತಿದ್ದಾಗ ಇಂಗ್ಲೆಂಡ್ 8 ವಿಕೆಟ್‌ಗೆ 393 ರನ್ ಗಳಿಸಿದ್ದಾಗ ನಾಯಕ ಬೆನ್ ಸ್ಟೋಕ್ಸ್ ಡಿಕ್ಲೇರ್ ನಿರ್ಧಾರ ತೆಗೆದುಕೊಂಡರು.

ಆ ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜಾ ಬ್ಯಾಟಿಂಗ್‌ನೊಂದಿಗೆ ಆಸ್ಟ್ರೇಲಿಯಾ ತಂಡ ನಾಲ್ಕು ಓವರ್‌ಗೆ 14 ರನ್ ಗಳಿಸಿದೆ.

ಇಂಗ್ಲೆಂಡ್‌ ತಂಡದ ಮೊದಲ ಇನ್ನಿಂಗ್ಸ್‌ನಲ್ಲಿ ಗಾಯದಿಂದ ಚೇತರಿಸಿಕೊಂಡು ಬಂದು ಆಡಿದ ವಿಕೆಟ್ ಕೀಪರ್ ಜಾನಿ ಬೈರ್‌ಸ್ಟೋವ್ 78 ರನ್ ಗಳಿಸಿದರು. ಝಾಕ್ ಕ್ರಾಲಿ ಕೂಡ 61 ರನ್‌ಗಳ ಕೊಡುಗೆ ನೀಡಿದರು. ಜೋ ರೂಟ್ ದಾಖಲೆಯ ಶತಕ ಬಾರಿಸಿದರು.

ಪ್ರವಾಸಿ ತಂಡದ ಪರ ನಾಥನ್ ಲಿಯಾನ್ ಅತ್ಯುತ್ತಮ ಬೌಲರ್ ಎನಿಸಿದ್ದು, ಅವರು 149 ರನ್‌ ನೀಡಿ ನಾಲ್ಕು ವಿಕೆಟ್ ಪಡೆದರೆ, ಜೋಶ್ ಹ್ಯಾಜಲ್‌ವುಡ್ ಎರಡು ವಿಕೆಟ್ ಪಡೆದರು. ಸ್ಕಾಟ್ ಬೋಲ್ಯಾಂಡ್ ಮತ್ತು ಕ್ಯಾಮರೂನ್ ಗ್ರೀನ್ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಮತ್ತೊಂದೆಡೆ, ಡೇವಿಡ್ ವಾರ್ನರ್ ವಿರುದ್ಧ ಸ್ಟುವರ್ಟ್ ಬ್ರಾಡ್ ಅವರ ಅತ್ಯುತ್ತಮ ದಾಖಲೆ ಹೊಂದಿರುವ ಕಾರಣ, ಡಿಕ್ಲೇರ್ ಮಾಡಿಕೊಳ್ಳಲು ಬೆನ್ ಸ್ಟೋಕ್ಸ್ ನಿರ್ಧಾರ ಮಾಡಿರಬಹುದು ಎಂದು ಇಂಗ್ಲೆಂಡ್ ಮಾಜಿ ನಾಯಕ ನಾಸರ್ ಹುಸೇನ್ ಅಭಿಪ್ರಾಯಪಟ್ಟರು.

Story first published: Saturday, June 17, 2023, 13:01 [IST]
Other articles published on Jun 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+