SA vs SL: ಏಕದಿನ ವಿಶ್ವಕಪ್‌ನಲ್ಲಿ ಅತಿ ವೇಗದ ಶತಕದ ಮೂಲಕ ವಿಶ್ವದಾಖಲೆ ನಿರ್ಮಿಸಿದ ಏಡೆನ್ ಮಾರ್ಕ್ರಾಮ್!
ಶನಿವಾರ, ಅಕ್ಟೋಬರ್ 7ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಬೃಹತ್ ಮೊತ್ತ ಕಲೆಹಾಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್‌ಗಳಲ್ಲಿ5 ವಿಕೆಟ್ ನಷ್ಟಕ್ಕೆ 428 ರನ್‌ಗಳನ್ನು ಗಳಿಸಿತು. ಈ ವೇಳೆ ಮೂವರು ಬ್ಯಾಟರ್‌ಗಳು ಶತಕ ಬಾರಿಸಿ ದಾಖಲೆ ನಿರ್ಮಿಸಿದರು.

ಆರಂಭಿಕ ಕ್ವಿಂಟನ್ ಡಿ ಕಾಕ್ 84 ಎಸೆತಗಳಲ್ಲಿ 12 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 100 ರನ್ ಗಳಿಸಿದರೆ, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ 110 ಎಸೆತಗಳಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ 108 ರನ್ ಬಾರಿಸಿದರು.
ಬಳಿಕ ಬಂದ ಮಧ್ಯಮ ಕ್ರಮಾಂಕದ ಬ್ಯಾಟರ್ ಏಡೆನ್ ಮಾರ್ಕ್ರಾಮ್ ಅತಿ ವೇಗದ ಏಕದಿನ ವಿಶ್ವಕಪ್ ಶತಕವನ್ನು ದಾಖಲಿಸಿದರು. ಏಡೆನ್ ಮಾರ್ಕ್ರಾಮ್ ಔಟಾಗುವ ಮುನ್ನ 54 ಎಸೆತಗಳಲ್ಲಿ 14 ಬೌಂಡರಿ ಹಾಗೂ 3 ಸಿಕ್ಸರ್ ಸಹಾಯದಿಂದ 106 ರನ್ ಬಾರಿಸಿದರು.
ದಕ್ಷಿಣ ಆಫ್ರಿಕಾ ಪರ ಅತಿವೇಗದ ಏಕದಿನ ಶತಕ
31 - ಎಬಿ ಡಿವಿಲಿಯರ್ಸ್ - ವೆಸ್ಟ್ ಇಂಡೀಸ್ ವಿರುದ್ಧ, ಜೋಹಾನ್ಸ್‌ಬರ್ಗ್, 2015
44 - ಮಾರ್ಕ್ ಬೌಚರ್ - ಜಿಂಬಾಬ್ವೆ ವಿರುದ್ಧ, ಪೊಟ್ಚೆಫ್‌ಸ್ಟ್ರೂಮ್, 2006
49 - ಏಡೆನ್ ಮಾರ್ಕ್ರಾಮ್ - ಶ್ರೀಲಂಕಾ ವಿರುದ್ಧ, ದೆಹಲಿ, 2023
52 - ಎಬಿ ಡಿವಿಲಿಯರ್ಸ್ - ವೆಸ್ಟ್ ಇಂಡೀಸ್ ವಿರುದ್ಧ, ಸಿಡ್ನಿ, 2015

2011ರ ವಿಶ್ವಕಪ್ ಆವೃತ್ತಿಯಲ್ಲಿ ಐರ್ಲೆಂಡ್ ಬ್ಯಾಟರ್ ಕೆವಿನ್ ಒ'ಬ್ರಿಯನ್ ಅವರ 50 ಎಸೆತಗಳಲ್ಲಿ ಶತಕವನ್ನು ಅಳಿಸಿಹಾಕುವ ಮೂಲಕ, ಏಕದಿನ ವಿಶ್ವಕಪ್‌ನಲ್ಲಿ ಏಡೆನ್ ಮಾರ್ಕ್ರಾಮ್ ಬಿರುಸಿನ 49 ಎಸೆತಗಳಲ್ಲಿ ಶತಕ ಗಳಿಸಿದರು.
ಏಕದಿನ ವಿಶ್ವಕಪ್‌ನಲ್ಲಿ ವೇಗದ ಶತಕಗಳು (ಎಸೆತಗಳಿಂದ)
ಏಡೆನ್ ಮಾರ್ಕ್ರಾಮ್ - ಶ್ರೀಲಂಕಾ ವಿರುದ್ಧ - 49 ಎಸೆತ - ದೆಹಲಿ, 2023
ಕೆವಿನ್ ಒ'ಬ್ರೇನ್ - ಇಂಗ್ಲೆಂಡ್ ವಿರುದ್ಧ - 50 ಎಸೆತ - ಬೆಂಗಳೂರು, 2011
ಗ್ಲೆನ್ ಮ್ಯಾಕ್ಸ್‌ವೆಲ್ - ಶ್ರೀಲಂಕಾ ವಿರುದ್ಧ - 51 ಎಸೆತ - ಸಿಡ್ನಿ, 2015
ಎಬಿ ಡಿವಿಲಿಯರ್ಸ್ - ವೆಸ್ಟ್ ಇಂಡೀಸ್ ವಿರುದ್ಧ - 52 ಎಸೆತ - ಸಿಡ್ನಿ, 2015
ಇನ್ನು ಒಂದೇ ತಂಡದಿಂದ ಒಂದೇ ಇನ್ನಿಂಗ್ಸ್‌ನಲ್ಲಿ (3) ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಕ್ಷಿಣ ಆಫ್ರಿಕಾ ತನ್ನದೇ ಆದ ದಾಖಲೆಯನ್ನು ಸರಿಗಟ್ಟಿದೆ. 2015ರಲ್ಲಿ ಎರಡು ಬಾರಿ ಈ ಸಾಧನೆ ಮಾಡಿತ್ತು. ಒಂದೇ ಇನ್ನಿಂಗ್ಸ್‌ನಲ್ಲಿ ಮೂರು ಶತಕಗಳನ್ನು ದಾಖಲಿಸಿದ ಇನ್ನೊಂದು ತಂಡ ಇಂಗ್ಲೆಂಡ್.

ಒಂದೇ ತಂಡದ ಮೂವರು ಆಟಗಾರರು ಒಂದೇ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿರುವುದು
ದಕ್ಷಿಣ ಆಫ್ರಿಕಾ - ವೆಸ್ಟ್ ಇಂಡೀಸ್ ವಿರುದ್ಧ - ಜೋಹಾನ್ಸ್‌ಬರ್ಗ, 2015
ದಕ್ಷಿಣ ಆಫ್ರಿಕಾ - ಭಾರತ ವಿರುದ್ಧ - ಮುಂಬೈ, 2015
ಇಂಗ್ಲೆಂಡ್ - ನೆದರ್ಲ್ಯಾಂಡ್ಸ್ ವಿರುದ್ಧ - ಆಮ್ಸ್ಟೆಲ್ವೀನ್, 2022
ದಕ್ಷಿಣ ಆಫ್ರಿಕಾ - ಶ್ರೀಲಂಕಾ ವಿರುದ್ಧ - ದೆಹಲಿ 2023
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications