For Quick Alerts
ALLOW NOTIFICATIONS  
For Daily Alerts
 

ರಾತ್ರೋ ರಾತ್ರಿ ಶ್ರೀಮಂತಿಕೆಯಲ್ಲಿ ವಿರಾಟ್‌ ಕೊಹ್ಲಿಯನ್ನು ಹಿಂದಿಕ್ಕಿದ ಭಾರತದ ಮಾಜಿ ಕ್ರಿಕೆಟ್ ಆಟಗಾರ

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ಆಟದಿಂದ ವಿಶ್ವದಲ್ಲಿ ಸಖತ್ ಫೇಮಸ್. ಇವರ ಆಟದ ಜೊತೆಗೆ ಫಿಟ್ನೆಸ್‌ ವಿಚಾರದಲ್ಲೂ ಅವರ ಖ್ಯಾತಿಯನ್ನು ಪಡೆದಿದ್ದಾರೆ. ಇಷ್ಟೇ ಅಲ್ಲಾ ಇವರು ಗಳಿಕೆಯ ವಿಚಾರದಲ್ಲೂ ಬೇರೆ ಕ್ರಿಕೆಟ್‌ ಆಟಗಾರರಗಿಂತ ಸಖತ್‌ ಮುಂದಿದ್ದಾರೆ. ವಿಶ್ವದಲ್ಲಿ ಮುಂಚೂಣಿಯಲ್ಲಿರುವ ಶ್ರೀಮಂತ ಕ್ರಿಕೆಟ್ ಆಟಗಾರರ ಪಟ್ಟಿಯಲ್ಲಿ ವಿರಾಟ್‌ಗೆ ಸ್ಥಾನ. ಆದರೆ ಭಾರತದ ಮಾಜಿ ಆಟಗಾರರೊಬ್ಬರು ಈಗ ವಿರಾಟ್‌ ಕೊಹ್ಲಿ ಗಳಿಕೆಗಿಂತ ಹೆಚ್ಚಿನ ಮೌಲ್ಯ ಹೊಂದಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಅವರನ್ನು ಶ್ರೀಮಂತಿಕೆಯ ವಿಚಾರದಲ್ಲಿ ಹಿಂದಿಕ್ಕಿದವರು ಮಾಜಿ ಆಟಗಾರ ಅಜಯ್‌ ಜಡೇಜಾ. ಅವರು ಈಗ ನಿವ್ವಳ ಮೌಲ್ಯದ ವಿಷಯದಲ್ಲಿ ವಿರಾಟ್ ಕೊಹ್ಲಿಯನ್ನು ಸಹ ಹಿಂದೆ ಬಿಟ್ಟಿದ್ದಾರೆ. ಸದ್ಯ ಜಡೇಜಾ ವಿರಾಟ್ ಕೊಹ್ಲಿಗಿಂತಲೂ ಶ್ರೀಮಂತರು.

Ajay Jadeja Overtakes Virat Kohli in Wealth After Being Declared Heir to Jamnagar Royal Family

ರಾತ್ರೋ ರಾತ್ರಿ ಶ್ರೀಮಂತ ಆಗಿದ್ದು ಹೇಗೆ

ಜಡೇಜಾರನ್ನು ಗುಜರಾತ್‌ನ ಜಾಮ್‌ನಗರದ ರಾಜಮನೆತನದ ಉತ್ತರಾಧಿಕಾರಿ ಎನ್ನಾಗಿ ಘೋಷಿಸಲಾಗಿದೆ. ಜಾಮ್‌ನಗರದ ಹೊಸ ಜಾಮ್ ಸಾಹೇಬ್ ಎಂದು ಜಡೇಜಾ ಅವರನ್ನು ಕರೆಯಲಾಗುವುದು. ಜಾಮ್‌ನಗರದ ರಾಜಮನೆತನಕ್ಕೆ ಸೇರಿದ ಶತ್ರುಶಾಲಿ ಸಿಂಗ್ ಜಿ ಮಹಾರಾಜ್ ಈ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ಅವರು "ದಸರೆಯ ಶುಭ ಸಮಯದಲ್ಲಿ ನಾನು ಅಜಯ್ ಜಡೇಜಾರನ್ನು ಜಾಮ್‌ ಸಾಬೇಬ್ ಎಂದು ಆಯ್ಕೆ ಮಾಡಿದ್ದೇನೆ" ಎಂದು ತಿಳಿಸಿದ್ದಾರೆ.

ಜಡೇಜಾ ಒಟ್ಟು ಆಸ್ತಿ ಎಷ್ಟು?

ರಾಜಮನೆತನದ ಉತ್ತರಾಧಿಕಾರಿಯನ್ನಾಗಿ ಜಡೇಜಾರನ್ನು ನೇಮಕ ಮಾಡುತ್ತಿದ್ದಂತೆ, ಅವರ ಶ್ರೀಮಂತಿಕೆಯ ಬಗ್ಗೆ ಅಭಿಮಾನಿಗಳು ಚರ್ಚೆಗಳನ್ನು ಆರಂಭಿಸಿದ್ದಾರೆ. ಉತ್ತರಾಧಿಕಾರಿ ಸ್ಥಾನವನ್ನು ಅಲಂಕರಿಸುವ ಮೊದಲು ಅಜಯ್‌ ಸುಮಾರು 250 ಕೋಟಿ ಆಸ್ತಿಯನ್ನು ಹೊಂದಿದ್ದರು. ಉತ್ತರಾಧಿಕಾರಿ ಎಂಬ ಪದ ಅವರ ಹೆಸರಿನ ಹಿಂದೆ ನಮೂದಿಸುತ್ತಿದ್ದಂತೆ ಅವರ ಸಂಪತ್ತಿನಲ್ಲಿ ಭಾರೀ ಏರಿಕೆ ಆಗಿದೆ. ಈಗ ಶ್ರೀಮಂತ ಕ್ರಿಕೆಟ್‌ ಆಟಗಾರರ ಲೀಸ್ಟ್‌ನಲ್ಲಿ ಜಡೇಜಾ ಮುಂಚೂಣಿಗೆ ಬಂದಿದ್ದಾರೆ. ಕೊಹ್ಲಿ ಅವರನ್ನು ಹಿಂದಿಕ್ಕಿ ಸದ್ಯ ಎಲ್ಲರ ಚಿತ್ತ ಕದ್ದಿದ್ದಾರೆ.

Ajay Jadeja Overtakes Virat Kohli in Wealth After Being Declared Heir to Jamnagar Royal Family

ಈ ಮೊದಲು ಅಜಯ್ ಜಡೇಜಾ ಅವರ ಆದಾಯದ ಮೂಲ ವೀಕ್ಷಕ ವಿವರಣೆ ಹಾಗೂ ತರಬೇತಿ ನೀಡುತ್ತಿದ್ದರು. ಇವರು ಭಾರತ ಕಂಡ ಉತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು. ಇವರ ಮೌಲ್ಯ ಈಗ 1450 ಕೋಟಿ ರೂ.ಗೆ ಏರಿಕೆಯಾಗಿದೆ. ಈ ಲೆಕ್ಕಾಚಾರದಲ್ಲಿ ಈಗ ಜಡೇಜಾ, ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ. ಈಗ ಜಡೇಜಾ ಅದೃಷ್ಟ ಬದಲಾಗಿದೆ.

ಜಡೇಜಾ ವೃತ್ತಿಜೀವನ

ಭಾರತದ ಪರ ಜಡೇಜಾ 1992 ರಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಆಡಿದರು. ಇವರು 15 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 26.18 ಸರಾಸರಿಯಲ್ಲಿ 576 ರನ್ ಗಳಿಸಿದ್ದಾರೆ. ಅಲ್ಲದೆ ಇವರು 196 ಏಕದಿನ ಪಂದ್ಯಗಳಲ್ಲಿ 37.47 ಸರಾಸರಿಯೊಂದಿಗೆ 5359 ರನ್ ಸೇರಿಸಿದ್ದಾರೆ.

Story first published: Wednesday, October 16, 2024, 15:11 [IST]
Other articles published on Oct 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+