For Quick Alerts
ALLOW NOTIFICATIONS  
For Daily Alerts
 

ಭಾರತದ ಏಕದಿನ ತಂಡದ 23ನೇ ನಾಯಕ ರಹಾನೆ

By Mahesh

ಹರಾರೆ, ಜುಲೈ 10: ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಎಂಎಸ್ ಧೋನಿ ಎಲ್ಲರಿಂದಲೂ ನಾನು ಪಾಠ ಕಲಿತ್ತಿದ್ದೇನೆ ಈಗ ಅದನ್ನು ಪ್ರಯೋಗಿಸುವ ಅವಕಾಶ ಸಿಕ್ಕಿದೆ ಎಂದು ಅಜಿಂಕ್ಯ ರಹಾನೆ ಭಾರತದ ಏಕದಿನ ತಂಡದ 23ನೇ ನಾಯಕರಾಗಿ ಕಣಕ್ಕಿಳಿದಿದ್ದಾರೆ.

ಜಿಂಬಾಬ್ವೆ ಪ್ರವಾಸಲ್ಲಿ 3 ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಹಾಗೂ 2 ಟ್ವೆಂಟಿ 20 ಪಂದ್ಯಗಳ ಸರಣಿಗೆ ರಹಾನೆ ಕ್ಯಾಪ್ಟನ್. 27 ವರ್ಷ ವಯಸ್ಸಿನ ರಹಾನೆ ಮುಂಬೈನ ಆರಂಭಿಕ ಆಟಗಾರನಾಗಿ ಶುಕ್ರವಾರದಿಂದ ಟೀಂ ಇಂಡಿಯಾದ ನಾಯಕರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. 1974ರಲ್ಲಿ ಮೊದಲ ಬಾರಿಗೆ ಮುಂಬೈ ಮೂಲದ ಅಜಿತ್ ವಾಡೇಕರ್ ಅವರು ತಂಡವನ್ನು ಮುನ್ನಡೆಸಿದ್ದರು.

Ajinkya Rahane becomes India's 23rd ODI captain

ಎಂಎಸ್ ಧೋನಿ ಅತಿ ಹೆಚ್ಚು ಏಕದಿನ ಪಂದ್ಯಕ್ಕೆ ನಾಯಕರಾಗಿರುವ ದಾಖಲೆ ಹೊಂದಿದ್ದಾರೆ. 181 ಪಂದ್ಯಗಳಲ್ಲಿ ನಾಯಕರಾಗಿ 101 ಗೆಲುವು ಸಾಧಿಸಿ ಒಳ್ಳೆ ಫಲಿತಾಂಶ ನೀಡಿದ ಯಶಸ್ವಿ ಕ್ಯಾಪ್ಟನ್. ಜುಲೈ 10, 2015ಕ್ಕೆ ಅನ್ವಯವಾಗುವಂತೆ ಏಕದಿನ ನಾಯಕರುಗಳ ಪಟ್ಟಿ ಇಂತಿದೆ:

1. ಅಜಿತ್ ವಾಡೇಕರ್ -1974 (2 ಪಂದ್ಯಗಳು)
2. ಶ್ರೀನಿವಾಸ್ ವೆಂಕಟರಾಘವನ್ 197 ರಿಂದ 79 (7)
3. ಬಿಷನ್ ಸಿಂಗ್ ಬೇಡಿ- 1976 ರಿಂದ 78 (4)
4. ಸುನಿಲ್ ಗವಾಸ್ಕರ್ -1980 ರಿಂದ 85 (37)
5. ಜಿ ಆರ್ ವಿಶ್ವನಾಥ್ -1981 (1)
6. ಕಪಿಲ್ ದೇವ್ - 1982-1987 (74)
7. ಸೈಯದ್ ಕಿರ್ಮಾನಿ- 1983 (1)
8. ಮೋಹಿಂದರ್ ಅಮರ್ ನಾಥ್- 1984 (1)
9. ರವಿಶಾಸ್ತ್ರಿ- 1987-1991 (11)
10. ದಿಲೀಪ್ ವೆಂಗ್ ಸರ್ಕಾರ್- 1987- 1989 (18)
11. ಕ್ರಿಸ್ ಶ್ರೀಕಾಂತ್ -1989 (13)
12. ಮೊಹಮ್ಮದ್ ಅಜರುದ್ದೀನ್ -1990-1999 (174)
13. ಸಚಿನ್ ತೆಂಡೂಲ್ಕರ್- 1996-2000 (73)
14. ಅಜಯ್ ಜಡೇಜ- 1998-1999 (13)
15. ಸೌರವ್ ಗಂಗೂಲಿ- 1999- 2005 (146)
16. ರಾಹುಲ್ ದ್ರಾವಿಡ್- 2000 -2007 (79)
17. ಅನಿಲ್ ಕುಂಬ್ಳೆ- 2002 (1)
18. ವಿರೇಂದರ್ ಸೆಹ್ವಾಗ್ -2003-2012 (12)
19. ಎಂಎಸ್ ಧೋನಿ- 2007 -2015 (181)
20. ಸುರೇಶ್ ರೈನಾ- 2010 ರಿಂದ 14 (12)
21. ಗೌತಮ್ ಗಂಭೀರ್- 2010 ರಿಂದ 11 (6)
22. ವಿರಾಟ್ ಕೊಹ್ಲಿ -2013 ರಿಂದ 14 (17)
23. ಅಜಿಂಕ್ಯ ರಹಾನೆ - 2015 (1)

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+