Ajinkya Rahane: ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ದಾಖಲೆ ಬರೆಯುವ ಸನಿಹದಲ್ಲಿ ರಹಾನೆ
ಬುಧವಾರ ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕಣಕ್ಕೆ ಇಳಿಯಲಿದೆ. ಉಭಯ ತಂಡಗಳು ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದಿದ್ದರಿಂದ ರೋಚಕತೆ ಹೆಚ್ಚಿಸಿದೆ. ಈ ಪಂದ್ಯದಲ್ಲಿ ಸ್ಟಾರ್ ಆಟಗಾರರು ಸಹ ಅಖಾಡ ಪ್ರವೇಶಿಸಲಿದ್ದು, ಎಲ್ಲರ ಚಿತ್ತ ಕದ್ದಿದೆ. ಇದೇ ವೇಳೆ ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.
ಆರ್‌ಸಿಬಿ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ 7 ವಿಕೆಟ್‌ಗಳಿಂದ ಸೋಲು ಕಂಡಿದೆ. ಆದರೆ ನಾಯಕ ಅಜಿಂಕ್ಯ ರಹಾನೆ ಮಾತ್ರ ತಮ್ಮ ಬ್ಯಾಟಿಂಗ್‌ನಿಂದ ಅಭಿಮಾನಿಗಳ ಮನ ಗೆದಿದ್ದಾರೆ. ಆಡಿದ 31 ಪಂದ್ಯಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಿಡಿಸಿರುವ ರಹಾನೆ 56 ರನ್ ಸಿಡಿಸಿದ್ದರು. ಈಗ ರಹಾನೆ ಮತ್ತೊಂದು ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ತಮ್ಮ ಸ್ಥಿರ ಬ್ಯಾಟಿಂಗ್ ಮುಂದು ವರೆಸಿದ್ದೇ ಆದಲ್ಲಿ ಇವರು ಕೆಕೆಆರ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ ಅವರ ದಾಖಲೆಯನ್ನು ಅಳಿಸಿ ಹಾಕಬಹುದು.

ಯಾವ ದಾಖಲೆಯ ಮೇಲೆ ರಹಾನೆ ಕಣ್ಣು?
ಕೋಲ್ಕತ್ತಾ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸಿದ ನಾಯಕ ಗೌತಮ್ ಗಂಭೀರ್ ಅವರ ದಾಖಲೆಯ ಮೇಲೆ ರಹಾಣೆ ಕಣ್ಣು ನೆಟ್ಟಿದ್ದಾರೆ. ಗೌತಮ್ ಗಂಭೀರ್ ಐಪಿಎಲ್‌ನಲ್ಲಿ ಆಡಿದ 154 ಪಂದ್ಯಗಳಲ್ಲಿ 492 ಬೌಂಡರಿ ಬಾರಿಸಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ರಹಾನೆ 9 ಬೌಂಡರಿ ಬಾರಿಸುವಲ್ಲಿ ಸಫಲರಾದಲ್ಲಿ ಈ ದಾಖಲೆಯನ್ನು ಅಳಿಸಿ ಹಾಕಬಹುದು.
ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ರಹಾನೆ 8 ಬೌಂಡರಿ ಬಾರಿಸಿದಲ್ಲೂ ಅವರ ದಾಖಲೆಯ ಸಮಕ್ಕೆ ನಿಲ್ಲಲಿದ್ದಾರೆ. ರಹಾನೆ 186 ಐಪಿಎಲ್ ಪಂದ್ಯಗಳಲ್ಲಿ 484 ಬೌಂಡರಿ ಸಿಡಿಸಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಕೀರ್ತಿ ಶಿಖರ್ ಧವನ್‌ಗೆ ಸಲ್ಲುತ್ತದೆ. ಇವರು ತಾವು ಆಡಿದ 222 ಪಂದ್ಯಗಳಲ್ಲಿ 768 ಬೌಂಡರಿ ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ 253 ಪಂದ್ಯದಲ್ಲಿ 709 ಬೌಂಡರಿಗಳನ್ನು ಬಾರಿಸಿದ ಹಿರಿಮೆಯನ್ನು ಹೊಂದಿದ್ದಾರೆ. ಇನ್ನು ಅತಿ ಹೆಚ್ಚು ಬೌಂಡರಿ ಬೌರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಡೇವಿಡ್ ವಾರ್ನರ್‌ಗೆ ಮೂರನೇ ಸ್ಥಾನ. ವಾರ್ನರ್ 663 ಬೌಂಡರಿ ಬಾರಿಸಿದ ಹಿರಿಮೆ ಹೊಂದಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಆಟಗಾರರು
- ಶಿಖರ್ ಧವನ್, 222 ಪಂದ್ಯ, 768 ಬೌಂಡರಿ
- ವಿರಾಟ್ ಕೊಹ್ಲಿ, 253 ಪಂದ್ಯ, 709 ಬೌಂಡರಿ
- ಡೇವಿಡ್ ವಾರ್ನರ್, 184 ಪಂದ್ಯ, 663 ಬೌಂಡರಿ
- ರೋಹಿತ್ ಶರ್ಮಾ, 258 ಪಂದ್ಯ, 599 ಬೌಂಡರಿ
- ಸುರೇಶ್ ರೈನಾ, 205 ಪಂದ್ಯ, 506 ಬೌಂಡರಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications