Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

BCCI ಆಯ್ಕೆ ಸಮಿತಿಯ ಕದ ತಟ್ಟುತ್ತಿರುವ ಟೀಮ್ ಇಂಡಿಯಾ ಸ್ಟಾರ್ ಪ್ಲೇಯರ್‌

ಟೀಮ್ ಇಂಡಿಯಾ ಕಳೆದ ಬಾರಿ ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದ್ದಾಗ, ವಿರಾಟ್‌ ಕೊಹ್ಲಿ ಕೇವಲ ಒಂದು ಟೆಸ್ಟ್‌ ಪಂದ್ಯವನ್ನು ಆಡಿ ಹೊರನಡೆದರು. ಕಾಂಗರೂ ನಾಡಿನಲ್ಲಿ ಉಳಿದ ನಾಲ್ಕು ಟೆಸ್ಟ್‌ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದು ಸ್ಟಾರ್ ಪ್ಲೇಯರ್ ಅಜಿಂಕ್ಯ ರಹಾನೆ. ತಂಡ ಮೊದಲ ಟೆಸ್ಟ್‌ನಲ್ಲಿ ಸೋಲು ಕಂಡಿದ್ದರೂ, ಬಳಿಕ ಭಾರತ ಅಬ್ಬರಿಸುವ ಪ್ರಮುಖ ಪಾತ್ರವಾಹಿಸಿದ ನಾಯಕ.

ಟೀಮ್ ಇಂಡಿಯಾದ ಟೆಸ್ಟ್‌ ತಂಡದ ಖಾಯಂ ಸದಸ್ಯ ಎಂದೇ ಬಿಂಬಿತವಾಗಿದ್ದ ಅಜಿಂಕ್ಯ ರಹಾನೆ, ಸುಮಾರು 400 ದಿನಗಳಕ್ಕಿಂತಲೂ ಹೆಚ್ಚಿನ ದಿನಗಳಿಂದ ತಂಡದಿಂದ ದೂರ ಉಳಿದಿದ್ದಾರೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಮತ್ತೆ ತಂಡವನ್ನು ಸೇರಿಕೊಳ್ಳುವ ಕನಸು ಕಾಣುತ್ತಿದ್ದಾರೆ. ಆದರೆ ಇವರ ಆಸೆ ಫಲಿಸುತ್ತಿಲ್ಲ. ಆದರೆ ಮಂಗಳವಾರ ಅಜಿಂಕ್ಯ ರಹಾನೆ ಇರಾನಿ ಟ್ರೋಫಿಯಲ್ಲಿ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದರು.

Ajinkya Rahane Eyes India Test Team Comeback After Stellar Irani Cup Performance

ಕಮ್‌ಬ್ಯಾಕ್‌ ಕನಸಿನಲ್ಲಿ ಅಜಿಂಕ್ಯಾ

ಬಾಂಗ್ಲಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಟೀಮ್ ಇಂಡಿಯಾದ ಅನುಭವಿ ಅಜಿಂಕ್ಯ ರಹಾನೆ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಇವರು ಮತ್ತೆ ಟೆಸ್ಟ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ಕನಸು ಕಾಣುತ್ತಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಟೆಸ್ಟ್‌ ಸರಣಿಯ ಬಳಿಕ, ಭಾರತ ತಂಡ ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯನ್ನು ಆಡಬೇಕಿದೆ. ಈ ಸರಣಿಗೆ ಇನ್ನು ತಂಡವನ್ನು ಆಯ್ಕೆ ಮಾಡಿಲ್ಲ. ಈ ಸರಣಿಗೆ ತಂಡವನ್ನು ಆಯ್ಕೆ ಮಾಡುವ ವೇಳೆ ತಮ್ಮನ್ನು ಸಹ ಪರಿಗಣಿಸಿ ಎಂದು ಅಜಿಂಕ್ಯ ರಹಾನೆ ಬಿಸಿಸಿಐ ಆಯ್ಕೆ ಸಮಿತಿಗೆ ಒತ್ತಾಯಿಸಿದ್ದಾರೆ.

ಬಿಸಿಸಿಐ ಆಯ್ಕೆ ಸಮಿತಿಯ ಕದ ತಟ್ಟಿರುವ ರಹಾನೆ

ಅಜಿಂಕ್ಯ ರಹಾನೆ ಭಾರತದ ಪರ ತಮ್ಮ ಕೊನೆಯ ಟೆಸ್ಟ್‌ ಪಂದ್ಯವನ್ನು 20 ಜುಲೈ 2023ರಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಆಡಿದ್ದರು. ಅಲ್ಲಿಂದ ಇವರು ಟೆಸ್ಟ್‌ ತಂಡವನ್ನು ಸೇರುವ ಕನಸು ಕಾಣುತ್ತಿದ್ದಾರೆ. ಆದರೆ ಆಸೆ ಫಲಿಸಲಿಲ್ಲ. ಮಂಗಳವಾರ ಇರಾನಿ ಕಪ್‌ನಲ್ಲಿ ಅಜಿಂಕ್ಯ ರಹಾನೆ ಅಮೋಘ ಬ್ಯಾಟಿಂಗ್ ನಡೆಸಿ, ಎಲ್ಲರ ಚಿತ್ತ ಕದ್ದಿದ್ದಾರೆ.

ಇರಾನಿ ಕಪ್‌ನಲ್ಲಿ ಅಮೋಘ ಬ್ಯಾಟಿಂಗ್

ಮಂಗಳವಾರದಿಂದ ಲಕ್ನೋನಲ್ಲಿ ಆರಂಭವಾದ ಇರಾನಿ ಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ, ದಿನದಾಟದ ಮುಕ್ತಾಯಕ್ಕೆ 4 ವಿಕೆಟ್‌ಗೆ 237 ರನ್‌ ಸೇರಿಸಿತ್ತು. ಈ ವೇಳೆ ಮುಂಬೈ ತಂಡದ ಅಜಿಂಕ್ಯ ರಹಾನೆ ನಾಯಕನ ಆಟವಾಡಿ ಗಮನ ಸೆಳೆದರು. ಇವರು 197 ಎಸೆತಗಳನ್ನು ಎದುರಿಸಿ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 86 ರನ್‌ ಸಿಡಿಸಿ ಅಬ್ಬರಿಸಿದ್ದಾರೆ. ಬುಧವಾರ ಮೊದಲಾವಧಿಯಲ್ಲಿ ಶತಕ ಬಾರಿಸುವ ಹುಮ್ಮಸ್ಸಿನಲ್ಲಿದ್ದಾರೆ.

Ajinkya Rahane Eyes India Test Team Comeback After Stellar Irani Cup Performance

ಅಜಿಂಕ್ಯ ರಹಾನೆ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಟೀಮ್ ಇಂಡಿಯಾ ಸೇರುವ ಕನಸು ಹೊಂದಿದ್ದು, ಈ ಹಿನ್ನೆಲೆ ಇರಾನಿ ಕಪ್‌ನಲ್ಲಿ ನೀಡಿದ ಪ್ರದರ್ಶನ ಕೈ ಹಿಡಿಯುತ್ತದಾ ಎಂಬುದನ್ನು ಕಾದು ನೋಡಬೇಕಿದೆ.

Story first published: Tuesday, October 1, 2024, 17:43 [IST]
Other articles published on Oct 1, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+