
ತೀವ್ರ ಟೀಕೆಗೆ ಗುರಿಯಾಗಿದ್ದ ಅಜಿಂಕ್ಯ ರಹಾನೆ
ಈ ವರ್ಷದುದ್ದಕ್ಕೂ ಬ್ಯಾಟಿಂಗ್ ವಿಚಾರದಲ್ಲಿ ಫಾರ್ಮ್‌ನಲ್ಲಿ ಇಲ್ಲದ ಬಗ್ಗೆ ಅಜಿಂಕ್ಯ ರಹಾನೆ ತೀವ್ರ ಟೀಕೆಗೆ ಗುರಿಯಾಗಿದ್ದರು. ಅನುಭವಿ ಬಲಗೈ ಬ್ಯಾಟ್ಸ್ಮನ್ ರಹಾನೆ ದ್ವಿತೀಯ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 61 ರನ್ ಬಾರಿಸಿದ್ದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ತಂಡದ ಪರ ದಾಖಲಾದ ಅತ್ಯಧಿಕ ರನ್ ಇದೇ ಆಗಿತ್ತು. ಇದು ಬಿಟ್ಟರೆ ಬೌಲರ್ ಮೊಹಮ್ಮದ್ ಶಮಿ ಬಾರಿಸಿದ್ದ 56 ರನ್ ಎರಡನೇ ವೈಯಕ್ತಿಕ ಅತ್ಯಧಿಕ ರನ್ ಆಗಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಆಂಗ್ಲರಿಗೆ ಉತ್ತಮ ರನ್ ಗುರಿ ನೀಡಿದ್ದರಿಂದ ಆಂಗ್ಲ ಬ್ಯಾಟಿಂಗ್ ಬಳಗ ಒತ್ತಡಕ್ಕೀಡಾಗಿತ್ತು. ಮುಖ್ಯವಾಗಿ ಇನ್ನಿಂಗ್ಸ್‌ನ ಕೊನೇ ಕ್ಷಣದಲ್ಲಿ ಬೌಲರ್‌ಗಳಾದ ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ ಅವರಿಂದ ಅನಿರೀಕ್ಷಿತ, ಬಿರುಸಿನ ರನ್ ಬಂದಿದ್ದು ಇಂಗ್ಲೆಂಡ್ ತಂಡವನ್ನು ಕಂಗೆಡಿಸಿತ್ತು. ಶಮಿ ಮತ್ತು ಬೂಮ್ರಾ (56+34 ರನ್) 90 ರನ್ ಜೊತೆಯಾಟ ನೀಡಿದ್ದರು. ಜೊತೆಗೆ ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತೀಯ ಬೌಲರ್‌ಗಳೂ ಕೂಡ ಮಾರಕ ಬೌಲಿಂಗ್ ದಾಳಿ ನಡೆಸಿದ್ದರು. ಈ ವೇಳೆ ಜಸ್‌ಪ್ರೀತ್ ಬೂಮ್ರಾ 3 ಮತ್ತು ಮೊಹಮ್ಮದ್ ಸಿರಾಜ್ 4 ವಿಕೆಟ್ ಮುರಿದು ಆಂಗ್ಲರನ್ನು ಕಾಡಿದ್ದರು. ಆರಂಭಿಕ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಬಾರಿಸಿದ್ದ 129 ರನ್ ಮತ್ತು ರೋಹಿತ್ ಶರ್ಮಾ ಬಾರಿಸಿದ್ದ 83 ರನ್ ಕೂಡ ತಂಡದ ಗೆಲುವಿನಲ್ಲಿ ಪ್ರಮುಖವೆನಿಸಿತ್ತು.
ರಹಾನೆ ಟ್ರೋಲ್‌ಗೀಡಾಗಲು ಪ್ರಮುಖ ಕಾರಣ
ಅಜಿಂಕ್ಯ ರಹಾನೆ ಟ್ರೋಲ್‌ಗೀಡಾಗಲು ಪ್ರಮುಖ ಕಾರಣವಿದೆ. ಸದ್ಯ ಭಾರತೀಯ ಟೆಸ್ಟ್ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ ಮತ್ತು ವಿರಾಟ್ ಕೊಹ್ಲಿ ಆಡುತ್ತಿದ್ದಾರೆ. 2020ರಿಂದಲೂ ಈ ಮೂವರ ಬ್ಯಾಟಿಂಗ್ ಸಾಧನೆ ಅಷ್ಟೇನೂ ಉತ್ತಮವಾಗಿಲ್ಲ. ಮೂವರೂ ಕೂಡ ಸ್ಥಿರ ಬ್ಯಾಟಿಂಗ್ ಫಾರ್ಮ್ ತೋರಿಕೊಂಡಿಲ್ಲ. ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲೂ ಮಧ್ಯಮ ಕ್ರಮಾಂಕದ ವೈಫಲ್ಯ ಮುಂದುವರೆದಿತ್ತು. ಆರಂಭಿಕ ಟೆಸ್ಟ್‌ನಲ್ಲಿ ರಹಾನೆ 5 ರನ್ ಗಳಿಸಿದ್ದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ರಹಾನೆಗೆ ಬ್ಯಾಟಿಂಗ್‌ಗೆ ಅವಕಾಶ ಸಿಕ್ಕಿರಲಿಲ್ಲ. ಮಳೆಯಿಂದಾಗಿ ಪಂದ್ಯ ನಿಲುಗಡೆಯಾಗಿ ಕೊನೆಗೆ ಡ್ರಾದೊಂದಿಗೆ ಪಂದ್ಯ ಅಂತ್ಯ ಕಂಡಿತ್ತು. ದ್ವಿತೀಯ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರಹಾನೆ ಕೇವಲ 1 ರನ್‌ಗೆ ಜೇಮ್ಸ್ ಆ್ಯಂಡರ್ಸನ್ ಓವರ್‌ನಲ್ಲಿ ಜೋ ರೂಟ್‌ಗೆ ಕ್ಯಾಚಿತ್ತು ನಿರ್ಗಮಿಸಿದ್ದರಿಂದ ಟ್ರೋಲರ್‌ಗಳ ಹಾವಳಿ ಜೋರಾಯ್ತು. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ರಹಾನೆ 61 ರನ್ ಬಾರಿಸಿ ಟ್ರೋಲರ್‌ಗಳ ಬಾಯಿ ಮುಚ್ಚಿದ್ದರು. ಜೊತೆಗೆ ಪಂದ್ಯವೂ ಗೆದ್ದಿದ್ದರಿಂದ ರಹಾನೆ ಖುಷಿಗೊಂಡಿದ್ದಾರೆ. ಇದೇ ಕಾರಣಕ್ಕೆ ರಹಾನೆ ಈಗ ಹೀಗೆ ಪೋಸ್ಟ್ ಹಾಕಿದ್ದಾರೆ. ಟ್ರೋಲರ್‌ಗಳೇ ಈಗ ಟ್ರೋಲ್‌ಗೀಡಾಗಿದ್ದಾರೆ, ಇದಕ್ಕೆ ನಗುವೇ ನನ್ನ ಪ್ರತಿಕ್ರಿಯೆ ಎಂಬರ್ಥದಲ್ಲಿ ರಹಾನೆ ಬರೆದುಕೊಂಡಿದ್ದಾರೆ.

ಎರಡೂ ಇನ್ನಿಂಗ್ಸ್‌ಗಳಲ್ಲಿ ಭಾರತದ ಸ್ಕೋರ್
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದಿಂದ ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 83, ಕೆಎಲ್ ರಾಹುಲ್ 129, ಚೇತೇಶ್ವರ್ ಪೂಜಾರ 9, ವಿರಾಟ್ ಕೊಹ್ಲಿ 42, ಅಜಿಂಕ್ಯ ರಹಾನೆ 1, ರಿಷಭ್ ಪಂತ್ 37, ರವೀಂದ್ರ ಜಡೇಜಾ 40, ಮೊಹಮ್ಮದ್ ಶಮಿ ೦, ಇಶಾಂತ್ ಶರ್ಮಾ 8 ರನ್ ಬಾರಿಸಿದರು. ಭಾರತ 126.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 364 ರನ್ ಗಳಿಸಿತ್ತು. ಭಾರತದ ಆರಂಭಿಕ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಪ್ರಮುಖ 5 ವಿಕೆಟ್ ಉರುಳಿಸಿ ಗಮನ ಸೆಳೆದರು. 29 ಓವರ್ ಎಸೆದಿದ್ದ ಆ್ಯಂಡರ್ಸನ್ 62 ರನ್ ನೀಡಿ 5 ವಿಕೆಟ್ ಮುರಿದಿದ್ದರು. ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ ಮತ್ತು ಜಸ್‌ಪ್ರೀತ್ ಬೂಮ್ರಾ ವಿಕೆಟ್ ಗಳನ್ನು ಆ್ಯಂಡರ್ಸನ್ ಕೆಡವಿದ್ದರು. ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ, ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ ಬಿಟ್ಟು ಯಾರಿಂದಲೂ ಗಮನಾರ್ಹ ರನ್ ಬರಲಿಲ್ಲ. ಕೆಎಲ್ ರಾಹುಲ್ 5, ರೋಹಿತ್ ಶರ್ಮಾ 21, ಚೇತೇಶ್ವರ್ 45, ನಾಯಕ ವಿರಾಟ್ ಕೊಹ್ಲಿ 20, ಅಜಿಂಕ್ಯ ರಹಾನೆ 61, ರವೀಂದ್ರ ಜಡೇಜಾ 3, ರಿಷಭ್ ಪಂತ್ 22, ಇಶಾಂತ್ ಶರ್ಮಾ 16, ಮೊಹಮ್ಮದ್ ಶಮಿ 56, ಜಸ್‌ಪ್ರೀತ್ ಬೂಮ್ರಾ 34 ರನ್‌ನೊಂದಿಗೆ 109.3 ಓವರ್‌ಗೆ 8 ವಿಕೆಟ್ ಕಳೆದು 298 ರನ್ ಗಳಿಸಿತ್ತು. ಇಂಗ್ಲೆಂಡ್ ಗೆಲುವಿಗೆ 272 ರನ್ ಗುರಿ ನೀಡಲಾಗಿತ್ತು.

ಇಂಗ್ಲೆಂಡ್ ತಂಡದ ಸ್ಕೋರ್ ಮಾಹಿತಿ
ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಮೊನ್ನಡೆ ಪಡೆದುಕೊಂಡಿತ್ತು. ರೋರಿ ಬರ್ನ್ಸ್ 49, ಡೊಮಿನಿಕ್ ಸಿಬ್ಲಿ 11, ಹಸೀಬ್ ಹಮೀದ್ 0, ಜೋ ರೂಟ್ 180, ಜಾನಿ ಬೈರ್‌ಸ್ಟೊವ್ 57, ಜೋಸ್ ಬಟ್ಲರ್ 23, ಮೊಯೀನ್ ಅಲಿ 27, ಸ್ಯಾಮ್ ಕರನ್ , ಒಲ್ಲಿ ರಾಬಿನ್ಸನ್ 6, ಮಾರ್ಕ್ ವುಡ್ 5 ರನ್ ಬಾರಿಸಿದರು. ಇಂಗ್ಲೆಂಡ್ 128 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದು 391 ರನ್ ಗಳಿಸಿ 27 ರನ್ ಮುನ್ನಡೆ ಪಡೆದುಕೊಂಡಿತ್ತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಇಶಾಂತ್ ಶರ್ಮಾ 3, ಮೊಹಮ್ಮದ್ ಶಮಿ 2, ಮೊಹಮ್ಮದ್ ಸಿರಾಜ್ 4 ವಿಕೆಟ್‌ನಿಂದ ಗಮನ ಸೆಳೆದಿದ್ದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ರೋರಿ ಬರ್ನ್ಸ್ 0, ಡೊಮಿನಿಕ್ ಸಿಬ್ಲಿ 0, ಹಸೀಬ್ ಹಮೀದ್ 9, ಜೋ ರೂಟ್ 33, ಜಾನಿ ಬೈರ್‌ಸ್ಟೊ 2, ಜೋಸ್ ಬಟ್ಲರ್ 25, ಮೊಯೀನ್ ಅಲಿ 13, ಸ್ಯಾಮ್ ಕರನ್ 0, ಒಲ್ಲಿ ರಾಬಿನ್ಸನ್ 9, ಮಾರ್ಕ್ ವುಡ್ 0, ಜೇಮ್ಸ್ ಆ್ಯಂಡರ್ಸನ್ 0 ರನ್ ಗಳಿಸಿದರು. ಇಂಗ್ಲೆಂಡ್ 51.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 120 ರನ್ ಬಾರಿಸಿ 151 ರನ್‌ನಿಂದ ಶರಣಾಯ್ತು. ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತದ ಜಸ್‌ಪ್ರೀತ್ ಬೂಮ್ರಾ 3, ಮೊಹಮ್ಮದ್ ಸಿರಾಜ್ 4, ಇಶಾಂತ್ ಶರ್ಮಾ 2, ಮೊಹಮ್ಮದ್ ಶಮಿ 1 ವಿಕೆಟ್‌ನಿಂದ ಗಮನ ಸೆಳೆದರು. ಈ ಗೆಲುವಿನೊಂದಿಗೆ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಯ ಮುನ್ನಡೆ ಪಡೆದುಕೊಂಡಿದೆ.


Click it and Unblock the Notifications












