ಡಬಲ್ ಹಂಡ್ರೆಡ್: ದಿಗ್ಗಜರ ಸಾಲಿಗೆ ಸೇರಿದ ರಹಾನೆ
ನವದೆಹಲಿ, ಡಿಸೆಂಬರ್. 06: ಭಾರತದ ಹೊಸ ಬ್ಯಾಟಿಂಗ್ ಶಕ್ತಿ ಅಜಿಂಕ್ಯ ರಹಾನೆ ದಿಗ್ಗಜರ ಸಾಲಿಗೆ ಸೇರಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟೆಸ್ಟ್ ನ ಎರಡೂ ಇನಿಂಗ್ಸ್ ನಲ್ಲಿ ಶತಕ ದಾಖಲಿಸಿ ದಾಖಲೆ ಬರೆದಿದ್ದಾರೆ.
ಎರಡನೇ ಟೆಸ್ಟ್ ನ ದ್ವಿತೀಯ ಇನಿಂಗ್ಸ್ನಲ್ಲಿ 206 ಚೆಂಡುಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಿಡಿಸಿದ ರಹಾನೆ 6ನೇ ಶತಕ ದಾಖಲಿದರು. ರಹಾನೆ ಶತಕ ಸಿಡಿಸುತ್ತಿದ್ದಂತೆ ಭಾರತ ದಕ್ಷಿಣ ಆಫ್ರಿಕಾಕ್ಕೆ 481 ರನ್ ಗಳ ಗುರಿ ನೀಡಿ ಡಿಕ್ಲೇರ್ ಮಾಡಿಕೊಂಡಿತು.[ದೆಹಲಿ ಟೆಸ್ಟ್ : ಟೀಂ ಇಂಡಿಯಾದ ಮಾನ ಕಾಪಾಡಿದ ರಹಾನೆ]

ರಹಾನೆ ಮೊದಲ ಇನಿಂಗ್ಸ್ ನಲ್ಲಿ 127 ರನ್ಗಳ ದಾಖಲಿಸಿದ್ದರು. ಎರಡು ಶತಕ ಬಾರಿಸಿದ ರಹಾನೆ, ವಿಜಯ್ ಹಜಾರೆ, ಸುನೀಲ್ ಗಾವಸ್ಕರ್, ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಸಾಲಿಗೆ ಸೇರಿದ್ದಾರೆ. 27 ವರ್ಷದ ರಹಾನೆ ಆಫ್ರಿಕಾ ವಿರುದ್ಧದ ನಾಲ್ಕನೇ ಟೆಸ್ಟ್ ನಲ್ಲಿ ತಮ್ಮ ವೃತ್ತಿ ಜೀವನದ 5 ಮತ್ತು 6ನೇ ಶತಕ ದಾಖಲುಮಾಡಿ ದಕ್ಷಿಣ ಆಫ್ರಿಕಾ ಬೌಲರ್ ಗಳನ್ನು ಕಾಡಿದರು.[ಜನ್ಮದಿನದಂದೇ ಕೆಎಲ್ ರಾಹುಲ್ ಮೇಲೆ ಪ್ರತಾಪ ತೋರಿದ ಧವನ್]
ಟೆಸ್ಟ್ ಪಂದ್ಯದ ಎರಡು ಇನಿಂಗ್ಸ್ ನಲ್ಲಿ ಶತಕ ದಾಖಲಿಸಿದ ಭಾರತೀಯರು
* ವಿಜಯ್ ಹಜಾರೆ(116 ಮತ್ತು 145) ಆಸ್ಟ್ರೇಲಿಯಾ ವಿರುದ್ಧ , 1948
* ಸುನೀಲ್ ಗಾವಾಸ್ಕರ್(3 ಸಾರಿ)
124, 220 , ವೆಸ್ಟ್ ಇಂಡೀಸ್ ವಿರುದ್ಧ, 1971
111, 137, ಪಾಕಿಸ್ತಾನದ ವಿರುದ್ಧ, 1978
107, 182 (ಅಜೇಯ) ವೆಸ್ಟ್ ಇಂಡೀಸ್ ವಿರುದ್ಧ, 1979
* ರಾಹುಲ್ ದ್ರಾವಿಡ್(2 ಸಾರಿ)
190, 103 (ಅಜೇಯ), ನ್ಯೂಜಿಲೆಂಡ್ ವಿರುದ್ಧ, 1999
110, 135 ಪಾಕಿಸ್ತಾನದ ವಿರುದ್ಧ, 2005
* ವಿರಾಟ್ ಕೊಹ್ಲಿ 115, 141, ಆಸ್ಟ್ರೇಲಿಯಾ ವಿರುದ್ಧ 2015
* ಅಜಿಂಕ್ಯ ರಹಾನೆ, 127, 100 (ಅಜೇಯ), ದಕ್ಷಿಣ ಆಫ್ರಿಕಾ ವಿರುದ್ಧ 2015 (ಒನ್ ಇಂಡಿಯಾ ನ್ಯೂಸ್)
Story first published: Wednesday, January 3, 2018, 10:03 [IST]
Other articles published on Jan 3, 2018
Read in English: Rahane joins elite list with 2 tons
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications