For Quick Alerts
ALLOW NOTIFICATIONS  
For Daily Alerts
 

ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಪಡೆಯುವ ಭರವಸೆ ವ್ಯಕ್ತಪಡಿಸಿದ ರಹಾನೆ

Ajinkya Rahane Opens Up About His Ambitions Of Odi Comeback

ಟೀಮ್ ಇಂಡಿಯಾ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಈಗ ಕೇವಲ ಟೆಸ್ಟ್ ಮಾದರಿಗೆ ಮಾತ್ರ ಸೀಮಿತರಾಗಿದ್ದಾರೆ. ಏಕದಿನ ತಂಡದಲ್ಲಿ ರಹಾನೆ ಸ್ಥಾನ ಕಲೆದುಕೊಂಡು ವರ್ಷವೇ ಕಳೆದಿದೆ. ಹೀಗಾಗಿ ಮತ್ತೆ ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನವನ್ನು ಗಳಿಸುವತ್ತ ಅವರು ಚಿತ್ತ ನೆಟ್ಟಿದ್ದಾರೆ.

ಇಂಡಿಯಾ ಟುಗೆ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಜಿಂಕ್ಯ ರಹಾನೆ ಮಾತನಾಡಿದರು. ಈ ವೇಳೆ ಅವರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಜಿಂಕ್ಯ ರಹಾನೆ ಈ ಹಿಂದೆ ಟೀಮ್ ಇಂಡಿಯಾದ ಟಿ20 ಹಾಗೂ ಏಕದಿನ ತಂಡದಲ್ಲೂ ಖಾಯಂ ಸದಸ್ಯರಾಗಿದ್ದರು.

32 ವರ್ಷದ ಅಜಿಂಕ್ಯ ರಹಾನೆ ಟೀಮ್ ಇಂಡಿಯಾ ಪರವಾಗಿ 90 ಏಕದಿನ ಪಂದ್ಯಗಳಲ್ಲಿ ಆಡಿದ್ದು 2962 ರನ್ ಗಳಿಸಿದ್ದಾರೆ. ಆರಂಭಿಕನಾಗಿ 54 ಪಂದ್ಯಗಳಲ್ಲಿ 1937 ರನ್ ಗಳಿಸಿದ್ದು, ನಾಲ್ಕನೇ ಕ್ರಮಾಂಕದಲ್ಲಿ 27 ಪಂದ್ಯದಲ್ಲಿ 843 ರನ್ ಗಳಿಸಿದ್ದಾರೆ. 2014ರಲ್ಲಿ ರೋಹಿತ್ ಗಾಯಾಳಾಗಿ ಅಲಭ್ಯರಾಗಿದ್ದಾಗ ಆರಂಭಿಕನಾಗಿ ಕಣಕ್ಕಿಳಿದು ಅದ್ಭುತ ಪ್ರದರ್ಶನವನ್ನು ನೀಡಿದ್ದರು. ಬಳಿಕ ಅದೇ ವರ್ಷ ಏಷ್ಯಾಕಪ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲೂ ಶ್ರೇಷ್ಠ ಪ್ರದರ್ಶನ ನೀಡಿದ್ದರು

ಇಂಡಿಯಾ ಟುಡೆ ಜೊತೆ ಮಾತನಾಡಿರುವ ಅಜಿಂಕ್ಯ ರಹಾನೆ, ಏಕದಿನ ತಂಡಕ್ಕೆ ಮರಳಿ ಬರುವುದೇ ನನ್ನ ಮೊದಲ ಗುರಿ. ನಾನು ಯಾವತ್ತೂ ದಾಖಲೆಗಳನ್ನು ನೋಡುವುದಿಲ್ಲ. ಆದರೆ ನನ್ನ ಏಕದಿನ ಸಾಧನೆಗಳನ್ನು ಗಮನಿಸುವುದಾದರೆ ತಂಡದಿಂದ ಹೊರಬೀಳುವ ಮೊದಲ ಮೂರು- ನಾಲ್ಕು ವರ್ಷಗಳ ಏಕದಿನ ಬ್ಯಾಟಿಂಗ್ ಉತ್ತಮವಾಗಿದೆ ಎಂದಿದ್ದಾರೆ.

330 ರನ್ ಗುರಿ, ಭಾರತ 0/1: ಪಾಕ್ ವಿರುದ್ಧದ ರೋಚಕ ಪಂದ್ಯ ನೆನೆದ ಗಂಭೀರ್
ಆರಂಭಿಕನಾಗಿ ಅಥವಾ ನಾಲ್ಕನೇ ಕ್ರಮಾಂಕದ ಆಟಗಾರನಾಗಿಯೂ ನಾನು ತಂಡದಲ್ಲಿ ಆಡಲು ಸಿದ್ದನಿದ್ದೇನೆ. ಎರಡೂ ಕ್ರಮಾಂಕದಲ್ಲಿ ನನ್ನ ಬ್ಯಾಟಿಂಗ್ ಸರಾಸರಿ ಉತ್ತಮವಾಗಿದೆ. ನನಗೆ ಯಾವಾಗ ಆಡುವ ಅವಕಾಸ ದೊರೆಯುತ್ತದೋ ತಿಳಿದಿಲ್ಲ. ಆದರೆ ಅದಕ್ಕಾ ಕಠಿಣ ಪರಿಶ್ರಮಪಡುತ್ತಿದ್ದೇನೆ ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.

Story first published: Monday, August 3, 2020, 9:56 [IST]
Other articles published on Aug 3, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+