ಅಂದು ದ್ರಾವಿಡ್ ಹೇಳಿದ್ದ ಆ ಮಾತಿನಿಂದಲೇ ಇಂದು ನಾನು ಯಶಸ್ವಿಯಾಗಿದ್ದೇನೆ: ಅಜಿಂಕ್ಯ ರಹಾನೆ

ಅಜಿಂಕ್ಯ ರಹಾನೆ ಭಾರತ ತಂಡದ ಟೆಸ್ಟ್ ಸ್ಪೆಷಲಿಸ್ಟ್‌ಗಳಲ್ಲಿ ಒಬ್ಬರು, ರಹಾನೆ ಪ್ರಸ್ತುತ ಟೀಮ್ ಇಂಡಿಯಾ ತಂಡದ ಟೆಸ್ಟ್ ಕ್ರಿಕೆಟ್‌ನ ಉಪ ನಾಯಕನಾಗಿದ್ದಾರೆ. ಕಳೆದ ಬಾರಿಯ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯ ನೆಲದಲ್ಲಿಯೇ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕನಾಗಿ ಗೆಲ್ಲಿಸಿಕೊಟ್ಟಿದ್ದರು ರಹಾನೆ.
ಐಪಿಎಲ್ ಮುಂದುವರೆದಾಗ ಚೆನ್ನೈ ತಂಡವನ್ನು ಕಾಡಲಿದೆ ಈ ಗಂಭೀರ ಸಮಸ್ಯೆ
ಟೆಸ್ಟ್ ಕ್ರಿಕೆಟ್‍ನಲ್ಲಿ ಇಷ್ಟು ದೊಡ್ಡ ಮಟ್ಟದ ಹೆಸರು ಮಾಡಿರುವ ಅಜಿಂಕ್ಯಾ ರಹಾನೆ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದು 2013ರ ಮಾರ್ಚ್‌ನಲ್ಲಿ. ಆದರೆ ಟೆಸ್ಟ್ ಕ್ರಿಕೆಟ್‍ನಲ್ಲಿ ಅವಕಾಶ ಸಿಗುವ ಮುನ್ನ ಒಂದು ವರ್ಷ ಅಜಿಂಕ್ಯ ರಹಾನೆ ಬೆಂಚ್ ಕಾದಿದ್ದರು. ಹೀಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ 2011ರಲ್ಲಿ ಪದಾರ್ಪಣೆ ಮಾಡಿದ್ದ ರಹಾನೆ ಅದಕ್ಕೂ ಮುನ್ನ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿ ಒಳ್ಳೆಯ ಹೆಸರನ್ನು ಮಾಡಿದ್ದರು. ಆ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಅಜಿಂಕ್ಯ ರಹಾನೆಯನ್ನು ಭೇಟಿ ಮಾಡಿ ಹೇಳಿದ್ದ ಮಾತುಗಳನ್ನು ರಹಾನೆ ಮೆಲುಕು ಹಾಕಿದ್ದಾರೆ.
2008-09ರ ದುಲೀಪ್ ಟ್ರೋಫಿ ಟೂರ್ನಿಯ ಸಮಯದಲ್ಲಿ ಅಜಿಂಕ್ಯ ರಹಾನೆ ಪಶ್ಚಿಮ ವಲಯದ ಪರ ಆಡುತ್ತಿದ್ದರು ಮತ್ತು ರಾಹುಲ್ ದ್ರಾವಿಡ್ ದಕ್ಷಿಣ ವಲಯದ ಪರ ಆಡುತ್ತಿದ್ದರು. ಆ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ 165 ಮತ್ತು 98 ರನ್ ಬಾರಿಸಿ ಮಿಂಚಿದ್ದರು. ಈ ಪಂದ್ಯದ ಬಳಿಕ ರಹಾನೆಯನ್ನು ಭೇಟಿ ಮಾಡಿದ ರಾಹುಲ್ ದ್ರಾವಿಡ್ 'ನಿಮ್ಮ ಬಗ್ಗೆ ಸಾಕಷ್ಟು ಕೇಳಿದ್ದೇನೆ, ನೀವು ಅತ್ಯುತ್ತಮ ಆಟವನ್ನು ಪ್ರದರ್ಶಿಸುತ್ತಿದ್ದು ಆದಷ್ಟು ಬೇಗ ಟೀಮ್ ಇಂಡಿಯಾ ತಂಡಕ್ಕೆ ಆಯ್ಕೆಯಾಗುವುದು ಖಚಿತ. ನೀವು ನಿಮ್ಮ ಸ್ವಾಭಾವಿಕ ಆಟವನ್ನು ಮುಂದುವರಿಸಿ ಆದಷ್ಟು ಬೇಗ ಭಾರತ ತಂಡ ನಿಮ್ಮನ್ನು ಆಯ್ಕೆ ಮಾಡಲಿದೆ' ಎಂದು ಸಲಹೆಯನ್ನು ನೀಡಿದ್ದರು. ಅಂದು ದ್ರಾವಿಡ್ ನೀಡಿದ್ದ ಆ ಸಲಹೆಯಿಂದಲೇ ಅಜಿಂಕ್ಯ ರಹಾನೆ ಯಶಸ್ಸು ಗಳಿಸಿದ್ದಾಗಿ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications