Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ

Ajinkya Rahane receives heros welcome with dhol and flowers

ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಐತಿಹಾಸಿಕವಾಗಿ ಗೆದ್ದು ತವರಿಗೆ ಮರಳಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ನಾಯಕ ಅಜಿಂಕ್ಯ ರಹಾನೆಗೆ ಮೂಂಬೈನ ವಿಮಾನ ನಿಲ್ದಾಣದಲ್ಲಿ ನಿರೀಕ್ಷೆಯಂತೆಯೇ ಅದ್ದೂರಿ ಸ್ವಾಗತ ದೊರೆತಿದೆ. ಡೋಲು ಹಾಗೂ ಹೋಗಳಿಂದ ಅಜಿಂಕ್ಯ ರಹಾನೆಯನ್ನು ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಅಜಿಂಕ್ಯ ರಹಾನೆಗೆ ಅವರ ಪತ್ನಿ ಹಾಗೂ ಪುತ್ರಿ ಕೂಡ ಸಾಥ್ ನೀಡಿದರು.

ಮೊದಲ ಪಂದ್ಯದ ಬಳಿಕ ಟೀಮ್ ಇಂಡಿಯಾದ ಖಾಯಂ ನಾಯಕ ವಿರಾಟ್ ಕೊಹ್ಲಿ ಪಿತೃತ್ವದ ರಜೆಯ ಹಿನ್ನೆಲೆಯಲ್ಲಿ ಭಾರತಕ್ಕೆ ವಾಪಾಸಾಗಿದ್ದರು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವ ಜವಾಬ್ಧಾರಿ ರೋಹಿತ್ ಶರ್ಮಾ ಹೆಗಲೇರಿತ್ತು. ಈ ಜವಾಬ್ಧಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ರಹಾನೆ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದ ಗೆಲುವಿಗೆ ಕಾರಣರಾದರು.

ಮುಂಬೈ ವಿಮಾನ ನಿಲ್ದಾಣಕ್ಕೆ ಅಜಿಂಕ್ಯ ರಹಾನೆ ಬಂದಿಳಿದ ಬಳಿಕ ನೂರಕ್ಕೂ ಹೆಚ್ಚು ಅಭಿಮಾನಿಗಳು ಅಲ್ಲಿ ನೆರೆದಿದ್ದರು. ಈ ಸಂದರ್ಭದಲ್ಲಿ ಅಜಿಂಕ್ಯ ರಹಾನೆಯ ಪತ್ನಿ ಹಾಗೂ ಎರಡು ವರ್ಷದ ಪುತ್ರಿ ಕೂಡ ಅಲ್ಲಿಗೆ ಆಗಮಿಸಿ ಅಜಿಂಕ್ಯ ರಹಾನೆಯನ್ನು ಬರಮಾಡಿಕೊಂಡಿದ್ದರು. ಅಜಿಂಕ್ಯ ರಹಾನೆ ಉಪ ನಾಯಕ ರೋಹಿತ್ ಶರ್ಮಾ, ಹೆಡ್ ಕೋಚ್ ರವಿ ಶಾಸ್ತ್ರಿ, ಆರಂಭಿಕ ಆಟಗಾರ ಪೃಥ್ವಿ ಶಾ ಜೊತೆಗೆ ಮುಂಜಾನೆ ಮೂಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

ಮೂಲಗಳ ಮಾಹಿತಿಯ ಪ್ರಕಾರ ಮುಂಬೈಗೆ ಬಂದಿಳಿದ ಟೀಮ್ ಇಂಡಿಯಾ ಆಟಗಾರರು ಹಾಗೂ ಸಿಬ್ಬಂದಿಗಳು ಮೂರು ದಿನಗಳ ಹೋಮ್‌ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ ಎನ್ನಲಾಗುತ್ತಿದೆ. ಇದಕ್ಕೂ ಮುನ್ನ ಬ್ರಿಸ್ಬೇನ್‌ನಲ್ಲಿ ಟೀಮ್ ಇಂಡಿಯಾದ ಗೆಲುವಿನ ಹೋರೋ ನ್ಯೂ ಡೆಲ್ಲಿಗೆ ಬಂದಿಳಿದರು. ಉಳಿದ ಟೀಮ್ ಇಂಡಿಯಾ ಆಟಗಾರರು ಕೂಡ ತಮ್ಮ ತವರಿಗೆ ತೆರಳಿದ್ದಾರೆ.

ಟೀಮ್ ಇಂಡಿಯಾದ ಬಹುತೇಕ ಕ್ರಿಕೆಟಿಗರು ಐಪಿಎಲ್ ಆರಂಭಕ್ಕೂ ಮುನ್ನವೇ ಕಳೆದ ಸಪ್ಟೆಂಬರ್ ತಿಂಗಳಿನಿಂದ ಕಠಿಣ ಬಯೋ ಬಬಲ್‌ನಲ್ಲಿ ಇದ್ದರು. ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾದ ಆಟಗಾರರು ಅಲ್ಲಿಂದ ನೇರವಾಗಿ ಆಸ್ಟ್ರೇಲಿಯಾಗೆ ಪ್ರಯಾಣವನ್ನು ಬೆಳೆಸಿದ್ದರು. ಆದರೆ ಮುಂದೆ ಫೆಬ್ರವರಿ 5 ರಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಕುಟುಂಬದೊಂದಿಗೆ ಕಾಲ ಕಳೆಯಲು ಹೆಚ್ಚು ಸಮಯ ದೊರೆಯುತ್ತಿಲ್ಲ.

Story first published: Thursday, January 21, 2021, 14:29 [IST]
Other articles published on Jan 21, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+