Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಜಿಂಕ್ಯ ರಹಾನೆ ನಾಯಕತ್ವಕ್ಕೆ ಮೊದಲ ಸೆಶನ್‌ನಲ್ಲೇ ಮೆಕ್‌ಗ್ರಾಥ್ ಪ್ರಶಂಸೆ

Ajinkya Rahanes captaincy impresses Glenn McGrath

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಭಾರತ ಟಾಸ್ ಸೋತು ಫೀಲ್ಡಿಂಗ್ ನಡೆಸುತ್ತಿದ್ದು ಆರಂಭದಿಂದ ಯಶಸ್ಸು ಸಾಧಿಸಿದೆ. ಮೊದಲ ಸಶನ್‌ನಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ್ದು ಕೆಲ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆತಿಥೇಯರಿಗೆ ಆರಂಭದಿಂದಲೇ ಒತ್ತಡ ಹೇರುವಂತೆ ಮಾಡಿದರು. ಈ ವೇಳೆ ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾಥ್ ಅಜಿಂಕ್ಯ ರಹಾನೆಯ ನಾಯಕತ್ವವನ್ನು ಪ್ರಶಂಸಿಸಿದ್ದಾರೆ.

ಮೊದಲ 60 ಓವರ್‌ಗಳಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಿದ್ದದು 145 ರನ್‌ಗಳಿಗೆ 5 ವಿಕೆಟ್ ಕಬಳಿಸಿ ಪಂದ್ಯವನ್ನು ಹಿಡಿತಕ್ಕೆ ತೆಗೆದುಕೊಂಡಿದೆ. ಆರಂಭದಲ್ಲಿ ಜಸ್ಪ್ರಿತ್ ಬೂಮ್ರಾ ಬರ್ನ್ಸ್‌ ವಿಕೆಟ್ ಪಡೆದು ತಂಡಕ್ಕೆ ಮೇಲುಗೈ ಒದಗಿಸಿದರು. ಬಳಿಕ ನಾಯಕ ಅಜಿಂಕ್ಯ ರಹಾನೆ ಮೊದಲ ಬೌಲಿಂಗ್ ಬದಲಾವಣೆಯನ್ನು ಚೊಚ್ಚಲ ಪಂದ್ಯವನ್ನಾಡುತ್ತಿರುವ ಸಿರಾಜ್‌ಗೆ ನೀಡದೆ ಸ್ಪಿನ್ನರ್ ಆರ್ ಅಶ್ವಿನ್‌ಗೆ ನೀಡಿದರು.

11ನೇ ಓವರ್‌ನಲ್ಲಿ ಸ್ಪಿನ್ನರ್ ಆರ್ ಅಶ್ವಿನ್‌ಗೆ ನೀಡಿ ರಹಾನೆ ಅಚ್ಚರಿ ಮೂಡಿಸಿದರಾದರು. ಆದರೆ ಅಶ್ವಿನ್ ಮ್ಯಾಥ್ಯೂ ವೇಡ್ ಹಾಗೂ ಸ್ಟೀವ್ ಸ್ಮಿತ್ ವಿಕೆಟ್‌ಅನ್ನು ಕಬಳಿಸುವ ಮೂಲಕ ನಾಯಕನ ನಂಬಿಕೆಗೆ ಸೂಕ್ತರೀತಿಯಲ್ಲಿ ಕೊಡುಗೆ ನಿಡಿದರು.

ಮೊದಲ ಸೆಶನ್‌ನಲ್ಲಿ ಅಜಿಂಕ್ಯ ರಹಾನೆ ಬೌಲಿಂಗ್ ವಿಭಾಗವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ಮೊದಲ ಸೆಶನ್‌ನ 27 ಓವರ್‌ಗಳಲ್ಲಿ 13 ಓವರ್‌ಗಳನ್ನು ಸ್ಪಿನ್ನರ್‌ಗಳು ಎಸೆದರು. ಆರ್ ಅಶ್ವಿನ್‌ಗೆ ರವೀಂದ್ರ ಜಡೇಜಾ ಸಾಥ್ ನೀಡಿದರು.

ನನ್ನ ಪ್ರಕಾರ ಅಜಿಂಕ್ಯ ರಹಾನೆ ಅದ್ಭುತವಾಗಿ ನಾಯಕತ್ವ ನಿಭಾಯಿಸಿದ್ದಾರೆ. ಬೌಲರ್‌ಗಳಿಗೆ ಬೆಂಬಲವಾಗಿ ನಿಂತರು. ಒಂದು ಹಂತದಲ್ಲಿ ಅವರು ನಾಲ್ಕು ಸ್ಲಿಪ್ ಹಾಗೂ ಒಮದು ಗಲ್ಲಿ ಫೀಲಡರ್‌ಗಳನ್ನು ನಿಲ್ಲಿಸಿದ್ದರು. ಸ್ಮಿತ್ ಔಟ್ ಆದ ಬಳಿಕ ಬೂಮ್ರಾ ಅವರನ್ನು ಬೌಲಿಂಗ್‌ಗೆ ಇಳಿಸಿ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡವನ್ನು ಹೇರಿದರು. ನನ್ನ ಪ್ರಕಾರ ನಾಯಕತ್ವ ಶ್ರೇಷ್ಠವಾಗಿದೆ" ಎಂದು ಮೆಕ್‌ಗ್ರಾಥ್ ಪ್ರಶಂಸಿಸಿದರು.

Story first published: Saturday, December 26, 2020, 11:19 [IST]
Other articles published on Dec 26, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+