ರಹಾನೆ ಶತಕ, ಟೀಂ ಇಂಡಿಯಾಕ್ಕೆ ಸರಣಿ ಜಯ
ಬರ್ಮಿಂಗ್ ಹ್ಯಾಂ, ಸೆ.3: ಗಾಯಾಳು ರೋಹಿತ್ ಶರ್ಮ ಬದಲಿಗೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು ಚೊಚ್ಚಲ ಶತಕ ಸಿಡಿಸಿದ ಅಜಿಂಕ್ಯ ರಹಾನೆ ಮತ್ತು ಲಯ ಕಂಡುಕೊಂಡು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಶಿಖರ್ ಧವನ್ ಅವರ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ನಾಲ್ಕನೇ ಏಕದಿನ ಪಂದ್ಯ ಹಾಗೂ ಸರಣಿಯನ್ನು ಗೆದ್ದುಕೊಂಡಿದೆ.
ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯದಲ್ಲೂ ಇಂಗ್ಲೆಂಡ್ ತಂಡವನ್ನು 9 ವಿಕೆಟ್‌ಗಳಿಂದ ಸುಲಭವಾಗಿ ಬಗ್ಗು ಬಡಿಯುತ್ತಿದ್ದಂತೆ 24 ವರ್ಷಗಳಿಂದ ಕಾದಿದ್ದ ಸರಣಿ ಜಯ ಭಾರತದ ಮಡಿಲಿಗೆ ಬಿದ್ದಿತು. ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 3-0 ಅಂತರದ ಸರಣಿ ಜಯ ಟೀಂ ಇಂಡಿಯಾ ಪಡೆದುಕೊಂಡಿದೆ. ಮೊದಲ ಏಕದಿನ ಪಂದ್ಯ ಮಳೆಗೆ ಆಹುತಿಯಾಗಿತ್ತು.
ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ, ಆತಿಥೇಯ ಪಡೆಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಕರಾರುವಾಕ್ ಬೌಲಿಂಗ್ ಮಾಡಿದ ಭಾರತೀಯ ವೇಗಿಗಳ ಮುಂದೆ ಇಂಗ್ಲೆಂಡ್ ತಂಡ ತಿಣುಕಾಡಿ ಕೊನೆಗೆ 49.3 ಓವರುಗಳಲ್ಲಿ 206ರನ್ ಗಳಿಸುವಷ್ಟರಲ್ಲಿ ಸುಸ್ತಾಯಿತು.
ಗೆಲುವಿನ ಗುರಿ ಬೆನ್ನುಹತ್ತಿದ ಭಾರತ, ಕೇವಲ 30.3 ಓವರುಗಳಲ್ಲಿಯೇ 1 ವಿಕೆಟ್ ನಷ್ಟಕ್ಕೆ 212ರನ್ ದಾಖಲಿಸಿ ವಿಜಯೋತ್ಸವ ಆಚರಿಸಿತು. ಶತಕ ವೀರ ಅಜಿಂಕ್ಯ ರಹಾನೆ (106 ರನ್, 100 ಎಸೆತ, 10 ಬೌಂಡರಿ, 4 ಸಿಕ್ಸರ್) ಮತ್ತು ಶಿಖರ್ ಧವನ್ (ಆಜೇಯ 97 ರನ್, 81 ಎಸೆತ, 11 ಬೌಂಡರಿ, 4 ಸಿಕ್ಸರ್) ಮೊದಲ ವಿಕೆಟ್‌ಗೆ 28.4 ಓವರ್‌ಗಳಲ್ಲಿ 183ರನ್ ಪೇರಿಸಿ ಭಾರತವನ್ನು ಗೆಲುವಿನ ಹೊಸ್ತಿಲಿಗೆ ನಿಲ್ಲಿಸಿದರು.

ರಹಾನೆ ಶತಕದ ಸಂಭ್ರಮ
ಗೆಲುವಿನ ಗುರಿ ಬೆನ್ನುಹತ್ತಿದ ಭಾರತ, ಕೇವಲ 30.3 ಓವರುಗಳಲ್ಲಿಯೇ 1 ವಿಕೆಟ್ ನಷ್ಟಕ್ಕೆ 212ರನ್ ದಾಖಲಿಸಿ ವಿಜಯೋತ್ಸವ ಆಚರಿಸಿತು. ಶತಕ ವೀರ ಅಜಿಂಕ್ಯ ರಹಾನೆ (106 ರನ್, 100 ಎಸೆತ, 10 ಬೌಂಡರಿ, 4 ಸಿಕ್ಸರ್)

ಗರ್ನೆ ಕ್ಲೀನ್ ಬೋಲ್ಡ್
ಮಹಮ್ಮದ್ ಶಮಿ ಬೌಲಿಂಗ್ ನಲ್ಲಿ ಇಂಗ್ಲೆಂಡಿನ ಹ್ಯಾರಿ ಗರ್ನೆ ಕ್ಲೀನ್ ಬೋಲ್ಡ್ AP /PTI

ಲಯ ಕಂಡುಕೊಂಡ ಶಿಖರ್ ಧವನ್
ಶಿಖರ್ ಧವನ್ (ಆಜೇಯ 97 ರನ್, 81 ಎಸೆತ, 11 ಬೌಂಡರಿ, 4 ಸಿಕ್ಸರ್) ಮೊದಲ ವಿಕೆಟ್‌ಗೆ 28.4 ಓವರ್‌ಗಳಲ್ಲಿ 183ರನ್ ಪೇರಿಸಿ ಭಾರತವನ್ನು ಗೆಲುವಿನ ಹೊಸ್ತಿಲಿಗೆ ನಿಲ್ಲಿಸಿದರು.

ಏಕದಿನ ಸರಣಿ ಗೆದ್ದ ಭಾರತ
ಟೆಸ್ಟ್ ಸರಣಿಯ ಕೊನೆಯ ಮೂರು ಪಂದ್ಯಗಳಲ್ಲಿ ಸತತ ಸೋಲುಂಡು ತೀರಾ ಅವಮಾನಕ್ಕೆ ಒಳಗಾಗಿದ್ದ ಧೋನಿ ಪಡೆ, ಈಗ ಏಕದಿನ ಸರಣಿಯಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದುಕೊಳ್ಳುವ ಮೂಲಕ ಮತ್ತೆ ಲಯಕ್ಕೆ ಮರಳಿದೆ

ಮತ್ತೆ ದಾಖಲೆ ಬರೆದ ಧೋನಿ
ಧೋನಿ ನಾಯಕತ್ವದಲ್ಲಿ ಭಾರತಕ್ಕೆ ಇದು 91ನೇ ಗೆಲವಾಗಿದ್ದು, ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಭಾರತೀಯ ನಾಯಕ ಎಂಬ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications