ಬ್ಯಾಟಿಂಗ್ ವೈಫಲ್ಯದ ನಡುವೆ ವಿಶ್ವ ದಾಖಲೆ ಬರೆದ ರಹಾನೆ
ಗಾಲೆ (ಶ್ರೀಲಂಕಾ), ಆಗಸ್ಟ್ 14: ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್ ಮನ್ ಅಜಿಂಕ್ಯ ರಹಾನೆ ಅವರು ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ವೈಫಲ್ಯ ಕಂಡರೂ ಫೀಲ್ಡಿಂಗ್ ನಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ.
27ವರ್ಷ ವಯಸ್ಸಿನ ಅಜಿಂಕ್ಯ ರಹಾನೆ ಅವರು ಶುಕ್ರವಾರದಂದು ಪಂದ್ಯದ ಮೂರನೇ ದಿನ ಶ್ರೀಲಂಕಾದ ಎರಡನೇ ಇನ್ನಿಂಗ್ಸ್ ನಲ್ಲಿ ಒಟ್ಟು 5 ಕ್ಯಾಚ್ ಗಳನ್ನು ತೆಗೆದುಕೊಂಡರು. [ವಿಶ್ವ ಎಡಚರ ದಿನದಂದೇ ಶತಕ ಬಾರಿಸಿದ ಧವನ್]
ಒಟ್ಟಾರೆ ಪಂದ್ಯದಲ್ಲಿ 8 ಕ್ಯಾಚ್ ಹಿಡಿಯುವ ಮೂಲಕ ಹೊಸ ವಿಶ್ವ ದಾಖಲೆ ಸ್ಥಾಪಿಸಿದರು. ಭಾರತದ ಮೊದಲ ಇನ್ನಿಂಗ್ಸ್ ನಲ್ಲಿ ಅಜಿಂಕ್ಯ ರಹಾನೆ ಅವರು ಶೂನ್ಯ ಸುತ್ತಿದ್ದರು.

ಈ ಪಂದ್ಯಕ್ಕೂ ಮುನ್ನ 15 ಟೆಸ್ಟ್ ಪಂದ್ಯಗಳಲ್ಲಿ 7 ಕ್ಯಾಚ್ ಹಿಡಿದಿದ್ದ ರಹಾನೆ ಅವರು ಈ ಒಂದೇ ಪಂದ್ಯದಲ್ಲೇ 8 ಕ್ಯಾಚ್ ಹಿಡಿದು ದಾಖಲೆ ಸರಿಗಟ್ಟಿದ್ದಾರೆ.
ಅಜಿಕ್ಯ ರಹಾನೆ ಅವರು ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಬೌಲಿಂಗ್ ನಲ್ಲಿ ರಂಗಣ ಹೇರಾತ್ ಅವರ ಕ್ಯಾಚ್ ಪಡೆಯುತ್ತಿದ್ದಂತೆ ದಾಖಲೆ ಪುಟ ಸೇರಿದರು. ಆಗ 72.5 ಓವರ್ ಗಳಲ್ಲಿ 319/8 ಸ್ಕೋರ್ ಆಗಿತ್ತು. ನಂತರ ಅತಿಥೇಯ ತಂಡ 367 ಸ್ಕೋರ್ ಮಾಡಿ ಆಲೌಟ್ ಆಗಿ ಭಾರತಕ್ಕೆ 176 ರನ್ ಟಾರ್ಗೆಟ್ ನೀಡಿದೆ.
ರಹಾನೆ ಅವರ ವಿಶ್ವ ದಾಖಲೆ ಬಗ್ಗೆ ಕ್ರಿಕೆಟ್ ವಿಶ್ಲೇಷಕ ಮೋಹನ್ ದಾಸ್ ಮೆನನ್ ಅವರು ಸರಣಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications